ETV Bharat / state

ಆನೇಕಲ್: ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡದಂತೆ ಪೊಲೀಸರಿಂದ ಎಚ್ಚರಿಕೆ

ಆನೇಕಲ್ ತಾಲೂಕಿನ ಜಿಗಣಿ ಇನ್ಸ್​​​ಪೆಕ್ಟರ್ ಬಿ.ಕೆ.ಶೇಖರ್ ರಸ್ತೆಗಿಳಿದು ಆಟೋ-ಕ್ಯಾಬ್ ಚಾಲಕರಿಗೆ ಹೆಚ್ಚಿನ ದರ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ದುಪ್ಪಟ್ಟು ಹಣ ಕೇಳಿದರೆ ವಾಹನವಷ್ಟೇ ಅಲ್ಲ ಚಾಲನಾ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಸಿದ್ದಾರೆ.

PSI warns against higher fares in Anekal
ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡದಂತೆ ಪಿಎಸ್ಐ ಎಚ್ಚರಿಕೆ
author img

By

Published : Apr 7, 2021, 2:35 PM IST

ಆನೇಕಲ್: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಪೊಲೀಸರು ಎಚ್ಚರಿಕೆ ರವಾನಿಸಿದ್ದಾರೆ.

ಆನೆಕಲ್​ನಲ್ಲಿ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡದಂತೆ ಎಚ್ಚರಿಕೆ

ಆನೇಕಲ್ ತಾಲೂಕಿನ ಜಿಗಣಿ ಇನ್ಸ್​ಪೆಕ್ಟರ್ ಬಿ.ಕೆ.ಶೇಖರ್ ರಸ್ತೆಗಿಳಿದು ಆಟೋ-ಕ್ಯಾಬ್ ಚಾಲಕರಿಗೆ ಹೆಚ್ಚಿನ ದರ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಬಸ್ ಸಂಚಾರ ಸ್ಥಗಿತ ಬೆನ್ನಲ್ಲೇ ಪ್ರಯಾಣಿಕರಿಂದ ದುಪ್ಪಟ್ಟು ದರ ಕೀಳಲು ಮುಂದಾದ ಆಟೋ-ಕ್ಯಾಬ್ ಮತ್ತು ಟಿಟಿ ವಾಹನ ಸಿಬ್ಬಂದಿಗೆ ಪರಿಸ್ಥಿತಿಯ ಲಾಭವರಿತು ಸಂಚಾರಿಗಳಿಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.

ದುಪ್ಪಟ್ಟು ಹಣ ಕೇಳಿದರೆ ವಾಹನವಷ್ಟೇ ಅಲ್ಲ ಚಾಲನಾ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೇವೆ ನೀಡಬೇಕೆಂದು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.