ETV Bharat / state

ಪಿಎಸ್ಐ ಪ್ರಕರಣ: ಆಸ್ತಿ ಮುಟ್ಟುಗೋಲಿಗೆ ಹೆದರಿ ಕೋರ್ಟ್ ಮುಂದೆ ಶರಣಾದ ಆರೋಪಿ - etv bharat kannada

ಪಿಎಸ್ಐ ಪರೀಕ್ಷಾ ನೇಮಕಾತಿ ಹಗರಣದಲ್ಲಿ ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ಸ್ಥಿರ ಹಾಗೂ‌ ಚರಾಸ್ತಿ ‌ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಈ ನಡುವೆ ಓರ್ವ ಆರೋಪಿ ಕೋರ್ಟ್ ಮುಂದೆ ಶರಾಣಾಗತಿಯಾಗಿದ್ದಾನೆ.

psi-scam-accused-surrendered-before-court
ಪಿಎಸ್ಐ ಪ್ರಕರಣ: ಆಸ್ತಿ ಮುಟ್ಟುಗೋಲಿಗೆ ಹೆದರಿ ಕೋರ್ಟ್ ಮುಂದೆ ಶರಣಾದ ಆರೋಪಿ
author img

By

Published : Sep 15, 2022, 5:11 PM IST

ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಹಗರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ನಾಲ್ವರ ಆರೋಪಿಗಳ‌ ಪೈಕಿ ಇಬ್ಬರು ಆರೋಪಿಗಳ ಸ್ಥಿರ ಹಾಗೂ‌ ಚರಾಸ್ತಿ ‌ಮುಟ್ಟುಗೋಲು ಹಾಕಿಕೊಳ್ಳಲು ಒಂದನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ.

ಪ್ರಕರಣ ಸಂಬಂಧ ಆರೋಪಿಗಳ ಹುಡುಕಾಟ ನಡೆಸಿದ್ದರೂ ಸಿಗದ ಪರಿಣಾಮ ಕುಣಿಗಲ್ ಮೂಲದ ಸಿದ್ದರಾಜು ಹಾಗೂ ಬೋರೆಗೌಡ ಸಂಬಂಧಪಟ್ಟ ಅಧಿಕಾರಿಗಳಿಂದ ಸರ್ವೇ ಮಾಡಿಸಿ ವಶಕ್ಕೆ ಪಡೆದುಕೊಳ್ಳಲು ಸಿಐಡಿ ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದರು‌. ಪಿಎಸ್ಐ ಅಕ್ರಮ ಜಾಲದಲ್ಲಿ ಹೈಗ್ರೌಂಡ್ಸ್ ಕೇಸ್‌ನಲ್ಲಿ ಸಿದ್ದರಾಜು ಹಾಗೂ ಬೋರೆಗೌಡ 36 ಹಾಗೂ 37ನೇ ಆರೋಪಿಗಳಾಗಿದ್ದಾರೆ.

ಕೋರ್ಟ್ ಮುಂದೆ ಶರಾಣಾಗತಿ: ಇಬ್ಬರು ಆರೋಪಿಗಳು ಎಫ್​ಡಿಎ ಹರ್ಷನೊಂದಿಗೆ ಮಧ್ಯವರ್ತಿಗಳಾಗಿ ಗುರುತಿಸಿಕೊಂಡಿದ್ದರು. ಇಬ್ಬರು ಸೇರಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದರು. ಈ ಬೆಳವಣಿಗೆ ಮಧ್ಯೆ ಬೋರೆಗೌಡ ಕೋರ್ಟ್ ಮುಂದೆ ಶರಾಣಾಗತಿಯಾಗಿದ್ದಾನೆ. ಪಿಎಸ್ಐ ಪ್ರಕರಣದಲ್ಲಿ ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಆಭ್ಯರ್ಥಿಗಳು ಸೇರಿ 90 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: PSI Recruitment Scam: ಬ್ಯಾಗ್​ನಲ್ಲಿ ಇದ್ದಿದ್ದು ದುಡ್ಡಲ್ಲ, ಹಣ್ಣಂತೆ! ಉಲ್ಟಾ ಹೊಡೆದ ಪರಸಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.