ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಹೆಚ್ಎಎಲ್ ಸಂಚಾರಿ ಠಾಣೆ ಹೆಡ್ ಕಾನ್ಸ್ಟೇಬಲ್ನನ್ನ ಸಿಐಡಿ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಹೆಡ್ ಕಾನ್ಸ್ಟೇಬಲ್ ಲಕ್ಕಪ್ಪ ಎಂಬಾತನನ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಸ್ತುತ ಸರ್ವಿಸ್ನಲ್ಲಿರುವ ಲಕ್ಕಪ್ಪ ಅದೇ ಆಧಾರದಲ್ಲಿ ಪಿಎಸ್ಐ ಪರೀಕ್ಷೆ ಎದುರಿಸಿ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. ಆದರೆ ಲಕ್ಕಪ್ಪ ವಿರುದ್ಧ ಬ್ಲ್ಯೂಟೂತ್ ಬಳಸಿ ಪರೀಕ್ಷೆ ಬರೆದ ಆರೋಪ ಕೇಳಿ ಬಂದಿತ್ತು. ಗುರುವಾರ ಸಿಐಡಿ ಸಬ್ ಇನ್ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದ ತಂಡ ಕಸ್ತೂರಿನಗರದ ನಿವಾಸದಲ್ಲಿ ಲಕ್ಕಪ್ಪನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಈಗಾಗಲೇ ಹಲವರು ಸಿಐಡಿ ಬಂಧಿಸಿ ವಿಚಾರಣೆಗೊಳಪಡಿಸಿದೆ. ಇನ್ನು ಹಗರಣ ಬೆಳಕಿಗೆ ಬಂದ ಬಳಿಕ ಪಿಎಸ್ಐ ನೇಮಕಾತಿ ಪಟ್ಟಿಯನ್ನು ರದ್ದುಗೊಳಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸುವುದಾಗಿ ಸರ್ಕಾರ ಘೋಷಿಸಿದೆ. ಆದ್ರೆ ಸರ್ಕಾರದ ನಿರ್ಧಾರಕ್ಕೆ ಪರೀಕ್ಷಾರ್ಥಿಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
(ಓದಿ: ಪಿಎಸ್ಐ ಹಗರಣ : ಅಮೃತ್ ಪಾಲ್ ಡಬಲ್ ಝೀರೋ ಕೋಡ್ ವರ್ಡ್ ಭೇದಿಸಿದ ಸಿಐಡಿ)