ETV Bharat / state

ಪಿಎಸ್​ಐ ಹಗರಣ : ಅಮೃತ್ ಪಾಲ್ ಡಬಲ್‌ ಝೀರೋ ಕೋಡ್ ವರ್ಡ್​ ಭೇದಿಸಿದ ಸಿಐಡಿ

ಪಿಎಸ್​ಐ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್​ ಪಾಲ್​ ಅವರ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​​ನಲ್ಲಿ ಡಬಲ್​ ಝೀರೋ ಕೋಡ್​​​ ಬಗ್ಗೆ ಉಲ್ಲೇಖಿಸಲಾಗಿದೆ.

Kn_bng_
ಪಿಎಸ್​ಐ ಹಗರಣ
author img

By

Published : Sep 29, 2022, 9:15 AM IST

Updated : Sep 29, 2022, 9:52 AM IST

ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಜಾಲದಲ್ಲಿ ಬಂಧಿತರಾಗಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರಿಗೆ ಬೇನಾಮಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಶಂಬುಲಿಂಗಸ್ವಾಮಿ ನಡುವೆ ಹಣಕಾಸಿನ ವ್ಯವಹಾರದಲ್ಲಿದ್ದ 'ಡಬಲ್ ಝೀರೋ' ಕೋಡ್​ನ್ನು‌ ಸಿಐಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪರೀಕ್ಷಾ ನೇಮಕಾತಿ ಜಾಲದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 35ನೇ ಆರೋಪಿಯಾಗಿರುವ ಅಮೃತ್ ಪಾಲ್ ವಿರುದ್ಧ 1,406 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿಐಡಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅಮೃತ್ ಪಾಲ್ ಎಸಗಿರುವ ಅಕ್ರಮವನ್ನ ಇಂಚಿಂಚು ಮಾಹಿತಿ ಸಂಗ್ರಹಿಸಿ ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಿರುವ ಸಿಐಡಿ, ಆಭ್ಯರ್ಥಿಗಳಿಂದ ಪಡೆದ ಹಣವನ್ನು ಯಾರಿಗೂ ತಿಳಿಯದಂತೆ ವ್ಯವಹಾರ ನಡೆಸಬೇಕು ಎಂಬುದರ ಬಗ್ಗೆ ಅಮೃತ್​ ಪಾಲ್​ ಶಂಬುಲಿಂಗಸ್ವಾಮಿಯೊಂದಿಗೆ ಮಾತುಕತೆ ನಡೆಸಿದ್ದರು‌.

ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳಿಂದ ಪಡೆದಿದ್ದ ಹಣವನ್ನು ಪಾಲ್ ನೇರವಾಗಿ ತೆಗೆದುಕೊಳ್ಳದೆ ಶಂಬುಲಿಂಗ ಮೂಲಕ ವ್ಯವಹರಿಸುತ್ತಿದ್ದರು. ಹಲವು ಅಭ್ಯರ್ಥಿಗಳಿಂದ 1.41 ಕೋಟಿ ರೂಪಾಯಿ ಹಣವನ್ನು ಶಂಬುಲಿಂಗ ತೆಗೆದಿರಿಸಿಕೊಂಡಿದ್ದರು. ಆಭ್ಯರ್ಥಿಗಳಿಂದ ಪಡೆದುಕೊಂಡ ಹಣವನ್ನು ಕಂಪ್ಯೂಟರ್​ನಲ್ಲಿ ಟೈಪ್​ ಮಾಡಿ ಪೆನ್​ಡ್ರೈವ್​ನಲ್ಲಿ ಸೇವ್ ಮಾಡಿಕೊಂಡಿದ್ದರು ಎಂದು ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

10 ಲಕ್ಷ ಕೊಟ್ಟರೆ 10 ಸಾವಿರ ಎಂಟ್ರಿ ಕೋಡ್: ಯಾವ್ಯಾವ ಅಭ್ಯರ್ಥಿಗಳು ಎಷ್ಟು ಹಣ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಕಂಪ್ಯೂಟರ್​ನಲ್ಲಿ ನಮೂದಿಸಿದ್ದ ಶಂಬುಲಿಂಗ, ಅಕ್ರಮ ಹಣದ ಬಗ್ಗೆ ಯಾರಿಗೂ ಗೊತ್ತಾಗದಿರಲು ಪಾಲ್ ಜೊತೆ ಕೋಡ್ ವರ್ಡ್ ಇಟ್ಟುಕೊಂಡಿದ್ದರು. ಉದಾಹರಣೆಗೆ ಅಭ್ಯರ್ಥಿಯೋರ್ವ 10 ಲಕ್ಷ ನೀಡಿದರೆ ಶಂಬುಲಿಂಗ ಎಂಟ್ರಿ ಮಾಡಿಕೊಳ್ಳುತ್ತಿದ್ದುದ್ದು ಕೇವಲ 10 ಸಾವಿರ‌ ಮಾತ್ರ. 5 ಲಕ್ಷ ನೀಡಿದರೆ 5 ಸಾವಿರ ಮಾತ್ರ ಬರೆದುಕೊಳ್ಳುತ್ತಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.

ಸಹಕಾರ ನಗರದಲ್ಲಿರುವ ಅಮೃತ್ ಪಾಲ್ ಅವರ ಎದುರುಮನೆ ನಿವಾಸಿ ಶಂಬುಲಿಂಗ, ಅಭ್ಯರ್ಥಿಗಳಿಂದ 2 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡು ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಪೆನ್‌ಡ್ರೈವ್​ನ್ನು ವಶಕ್ಕೆ ಪಡೆದಿದ್ದರು. ಈ ಕುರಿತು ಪರಿಶೀಲನೆ ನಡೆಸಿ ಇಬ್ಬರನ್ನು ವಿಚಾರಣೆ ನಡೆಸಿದಾಗ ಕೋಡ್​ವರ್ಡ್ ಇಟ್ಟಿಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೆನ್​ಡ್ರೈವ್​ನಲ್ಲಿ ಆರಕ್ಕಿಂತ ಹೆಚ್ಚು ಆಭ್ಯರ್ಥಿಗಳ ಹೆಸರು ಇರುವ ಬಗ್ಗೆ ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಿಎಸ್ಐ ಹಗರಣ: ಅಮೃತ್ ಪಾಲ್ ವಿರುದ್ಧ 1406 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ

Last Updated : Sep 29, 2022, 9:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.