ETV Bharat / state

ಸಿದ್ದರಾಮಯ್ಯ ನಿವಾಸಕ್ಕೆ ಪಿಎಸ್​ಐ ಅಭ್ಯರ್ಥಿಗಳು ಭೇಟಿ.. ಸದನದಲ್ಲಿ ಧ್ವನಿಯೆತ್ತುವ ಬಗ್ಗೆ ಚರ್ಚೆ - ವಿಧಾನ ಮಂಡಲ ಅಧಿವೇಶನ

ರಾತ್ರಿಯವರೆಗೂ ಸಿದ್ದರಾಮಯ್ಯ ನಿವಾಸದ ಬಳಿ ಇದ್ದ ಪಿಎಸ್ಐ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಸದನದಲ್ಲಿ ತಮ್ಮ ವಿಚಾರ ಪ್ರಸ್ತಾಪವಾಗಿ ಸಮಸ್ಯೆ ನಿವಾರಣೆಯಾಗಬಹುದು ಎಂಬ ವಿಶ್ವಾಸದೊಂದಿಗೆ ತೆರಳಿದ್ದಾರೆ.

psi-candidates-visit-siddaramaiah-residence
ಸಿದ್ದರಾಮಯ್ಯ ನಿವಾಸಕ್ಕೆ ಪಿಎಸ್​ಐ ಅಭ್ಯರ್ಥಿಗಳು ಭೇಟಿ
author img

By

Published : Sep 13, 2022, 9:28 AM IST

Updated : Sep 13, 2022, 12:32 PM IST

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿ ನ್ಯಾಯ ಒದಗಿಸುವ ಹೋರಾಟ ನಡೆಸಿ ಎಂದು ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ನಿನ್ನೆ ರಾತ್ರಿ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ 100 ಕ್ಕೂ ಹೆಚ್ಚು ಪಿಎಸ್​ಐ ಅಭ್ಯರ್ಥಿಗಳು ತಮ್ಮ ಪರ ಸದನದಲ್ಲಿ ಹೋರಾಟ ನಡೆಸುವಂತೆ ಕೋರಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡು ನಿವಾಸಕ್ಕೆ ವಾಪಸ್ ಆಗಿದ್ದ ಸಿದ್ದರಾಮಯ್ಯ ಅವರಿಗೋಸ್ಕರ ಅವರ ನಿವಾಸದ ಎದುರು ಒಂದು ಗಂಟೆಗೂ ಹೆಚ್ಚು ಕಾಲ ಕಾದ ಅಭ್ಯರ್ಥಿಗಳನ್ನು ಕೊನೆಗೂ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿದ್ದು, ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಭ್ಯರ್ಥಿಗಳ ಸಮಸ್ಯೆಯನ್ನು ಆಲಿಸಿದ ಅವರು ಕೆಲವರಿಂದ ನಡೆದಿರುವ ಅಕ್ರಮದಿಂದಾಗಿ ಸಾಕಷ್ಟು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ನೂರಾರು ಮಂದಿಗೆ ಅನ್ಯಾಯ ಆಗಿರುವುದು ತಮ್ಮ ಗಮನಕ್ಕೂ ಬಂದಿದೆ. ತಮ್ಮೆಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಾವು ಸದನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ ನಿವಾಸಕ್ಕೆ ಪಿಎಸ್​ಐ ಅಭ್ಯರ್ಥಿಗಳು ಭೇಟಿ

ರಾತ್ರಿಯವರೆಗೂ ಸಿದ್ದರಾಮಯ್ಯ ನಿವಾಸದ ಬಳಿ ಇದ್ದ ಪಿಎಸ್ಐ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಸದನದಲ್ಲಿ ತಮ್ಮ ವಿಚಾರ ಪ್ರಸ್ತಾಪವಾಗಿ ಸಮಸ್ಯೆ ನಿವಾರಣೆಯಾಗಬಹುದು ಎಂಬ ವಿಶ್ವಾಸದೊಂದಿಗೆ ತೆರಳಿದ್ದಾರೆ.

ಪೊಲೀಸರ ಆಕ್ಷೇಪ: ಭೇಟಿ ಮಾಡುವುದಾಗಿ ಮುಂಚಿತವಾಗಿಯೇ ಮಾಹಿತಿ ನೀಡದೆ ಇಲ್ಲವೇ ಒಪ್ಪಿಗೆ ಪಡೆಯದೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪಿಎಸ್ಐ ಅಭ್ಯರ್ಥಿಗಳನ್ನು ಸಿದ್ದರಾಮಯ್ಯ ನಿವಾಸದ ಮುಂಭಾಗದಲ್ಲಿ ನಿಲ್ಲಲು ಹಾಗೂ ಒಳಗೆ ಪ್ರವೇಶಿಸಲು ಪೊಲೀಸರು ಹಾಗೂ ಪ್ರತಿಪಕ್ಷ ನಾಯಕರು ನಿವಾಸಕ್ಕೆ ನಿಯೋಜಿತರಾಗಿರುವ ಭದ್ರತಾ ಸಿಬ್ಬಂದಿ ನಿರಾಕರಿಸಿದರು.

ಸಿದ್ದರಾಮಯ್ಯಗೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ನೀಡಿರುವ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸುರಕ್ಷತೆಯ ಕಾರಣ ನೀಡಿ ಮೊದಲು ಪೊಲೀಸ್ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ನಿವಾಸದ ಒಳಗೆ ಬಿಡಲಿಲ್ಲ. ಪಟ್ಟು ಬಿಡದೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯೇ ತೆರಳುವುದಾಗಿ ಗಂಟೆಗಳ ಕಾಲ ಕಾದ ಅಭ್ಯರ್ಥಿಗಳಿಗೆ ಕೊನೆಗೂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಹವಾಲು ತೋಡಿಕೊಳ್ಳುವ ಅವಕಾಶ ಲಭಿಸಿತು. ಅಲ್ಲದೆ ವಿಧಾನ ಮಂಡಲ ಉಭಯ ಸದನಗಳಲ್ಲಿಯೂ ಅಭ್ಯರ್ಥಿಗಳ ಸಮಸ್ಯೆಯನ್ನು ಪ್ರಸ್ತಾಪಿಸುವ ಭರವಸೆ ಪ್ರತಿಪಕ್ಷ ನಾಯಕರಿಂದ ಲಭಿಸಿತು.

ಇದನ್ನೂ ಓದಿ: ಸಿದ್ದರಾಮಯ್ಯ-ಸಿಟಿ ರವಿ ನಡುವೆ ಮಾತಿನ ಚಕಮಕಿ!

Last Updated : Sep 13, 2022, 12:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.