ETV Bharat / state

ಬೆಂಗಳೂರು: ಅಪಾರ್ಟ್​ಮೆಂಟ್​ ನಿವಾಸಿ ಮೇಲೆ ಪಿಎಸ್​ಐ ಗೂಂಡಾ ವರ್ತನೆ ಆರೋಪ, ಕ್ರಮಕ್ಕೆ ಆಗ್ರಹ - ಎಲೆಕ್ಟ್ರಾನಿಕ್ ಸಿಟಿ

ಬೆಂಗಳೂರಿನ ಅಪಾರ್ಟ್​ಮೆಂಟ್​ ನಿವಾಸಿ ಮೇಲೆ ಪೊಲೀಸ್​ ಇನ್ಸ್​ಪೆಕ್ಟರ್ ದರ್ಪ ತೋರಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಟ್ವೀಟ್​ ಮೂಲಕ ಕ್ರಮಕ್ಕೆ ಆಗ್ರಹಿಸಿದ್ದಾರೆ.

psi-allegedly-assault-on-a-person-in-bengaluru
ಅಪಾರ್ಟ್​ಮೆಂಟ್​ ನಿವಾಸಿ ಮೇಲೆ ಪಿಎಸ್​ಐ ಗೂಂಡಾ ವರ್ತನೆ ಆರೋಪ
author img

By

Published : Nov 5, 2022, 6:46 PM IST

ಬೆಂಗಳೂರು: ಪೊಲೀಸ್​ ಇನ್ಸ್​ಪೆಕ್ಟರ್​ವೊಬ್ಬರು ನಡು ರಸ್ತೆಯಲ್ಲಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ನಗರದ ಸರ್ಜಾಪುರ ರಸ್ತೆಯ ಮಹಾವೀರ್ ಆರ್ಕೇಡ್ ಅಪಾರ್ಟ್​ಮೆಂಟ್​ ನಿವಾಸಿಯೊಬ್ಬರು ವಿಡಿಯೋಗಳೊಂದಿಗೆ ಟ್ವೀಟ್​ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಅಭಿಷೇಕ್ ಎಂಬುವರು ವಿಡಿಯೋ ಶೇರ್​ ಮಾಡಿದ್ದು, 'ನನ್ನ ನೆರೆಹೊರೆಯ ವ್ಯಕ್ತಿ ಮೇಲೆ ಜೊತೆ ಗೂಂಡಾ ಪೊಲೀಸ್​ ಥಳಿಸಿದ್ದಾರೆ. ಮೆಂಟೇನನ್ಸ್​ ಸಂಬಂಧ ಅಧಿಕಾರಿ​​ ಈ ರೀತಿ ಹಲ್ಲೆ ನಡೆಸಿದ್ದಾರೆ' ಎಂದು ಟ್ವೀಟ್​ನಲ್ಲಿ ಆರೋಪಿಸಿದ್ದಾರೆ.

'ಕೆಲ ತಿಂಗಳ ಹಿಂದೆ ಕೂಡ ಇವರು ಸ್ಥಳೀಯ ಗೂಂಡಾಗಳನ್ನು ಕರೆತಂದು ಯಾರನ್ನೂ ಅಪಾರ್ಟ್​ಮೆಂಟ್​ ಒಳಗೆ ಮತ್ತು ಹೊರಗೆ ಬಿಡದೆ ಮುಖ್ಯ ಗೇಟ್ ಬಂದ್​ ಮಾಡಿದ್ದರು. ಸಹಾಯಕ್ಕಾಗಿ ಪೊಲೀಸರನ್ನು ಕರೆದಾಗ, ಗೇಟ್ ತೆರೆದಿದ್ದರು. ಆದರೆ ಬಳಿಕ ಗೂಂಡಾಗಳೊಂದಿಗೆ ಮಾತುಕತೆ ನಡೆಸಿ ಎಂದಿದ್ದರು' ಎಂದೂ ಕೂಡ ಅಭಿಷೇಕ್ ಟ್ವೀಟ್​ ಮಾಡಿದ್ದಾರೆ.

ಅಭಿಷೇಕ್ ಈ ವಿಡಿಯೋಗಳನ್ನು ಬೆಂಗಳೂರು ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಹಾಗೂ ಹಾಗೂ ಎಲೆಕ್ಟ್ರಾನಿಕ್ ಸಿಟಿ ಎಸಿಪಿಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ರೀಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಪಿಸ್ತೂಲ್ ಹಿಡಿದು ಶಾಲೆಗೆ ಬಂದ 10ನೇ ತರಗತಿ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.