ETV Bharat / state

ಸಿಐಡಿಯ ಡಿಜಿಪಿ ಹುದ್ದೆಗೆ ಬಡ್ತಿ ಪಡೆದ ಪಿ.ಎಸ್. ಸಂಧು

ಹಿರಿಯ ಪೊಲೀಸ್ ಅಧಿಕಾರಿ ಪಿ.ಎಸ್. ಸಂಧು ಅವರಿಗೆ, ಸಿಐಡಿಯ ಡಿಜಿಪಿ‌ ಹುದ್ದೆಗೆ ಬಡ್ತಿ ನೀಡಿ, ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಸಿಐಡಿಯ ಡಿಜಿಪಿಯಾಗಿದ್ದ ಎಸ್.ಎನ್‌. ಸಿದ್ದರಾಮಪ್ಪ ಅವರಿಗೆ ಕಿಯೋನಿಕ್ಸ್ ಎಂ.ಡಿ. ಹುದ್ದೆ ನೀಡಿ ವರ್ಗಾವಣೆ ಮಾಡಿದೆ.

author img

By

Published : Jul 30, 2020, 8:41 PM IST

PS Sandhu been promoted to the post of DGP
ಪಿ.ಎಸ್. ಸಂಧು

ಬೆಂಗಳೂರು: ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಪಿ.ಎಸ್. ಸಂಧು ಅವರಿಗೆ ಡಿಜಿಪಿ‌ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಐಡಿಯ ಡಿಜಿಪಿಯಾಗಿ ಅವರಿಗೆ ಬಡ್ತಿ ನೀಡಿ‌ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ಸಿಐಡಿಯ ಡಿಜಿಪಿಯಾಗಿದ್ದ ಎಸ್.ಎನ್‌. ಸಿದ್ದರಾಮಪ್ಪ ಅವರಿಗೆ ಕಿಯೋನಿಕ್ಸ್ ಎಂ.ಡಿ. ಹುದ್ದೆ ನೀಡಿ ವರ್ಗಾವಣೆ ಮಾಡಿದೆ.

PS Sandhu been promoted to the post of DGP
ಆದೇಶ ಪ್ರತಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್​ಪಿ (ಸಿವಿಲ್) ಸೇವೆ ಸಲ್ಲಿಸುತ್ತಿರುವ 20 ಜನ ಅಧಿಕಾರಿಗಳಿಗೆ ವೇತನ ಶ್ರೇಣಿ ₹ 70,850ಯಿಂದ1,07,100ರ ಎಸ್​ಪಿ (ಸಿವಿಲ್) (ನಾನ್ ಐಪಿಎಸ್) ಮುಂಬಡ್ತಿ ನೀಡಿ ಖಾಲಿ ಇರುವ ಹುದ್ದೆಗಳಿಗೆ ನಿಯುಕ್ತಿಗೊಳಿಸಿ ಆದೇಶಿಸಿದೆ.

ರಾಜ್ಯ ಗುಪ್ತ ವಾರ್ತೆಯ ಎಸ್.ಟಿ. ಸಿದ್ದಲಿಂಗಪ್ಪ ಅವರನ್ನು ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳಬೇಕು. ಕರ್ನಾಟಕ ಲೋಕಾಯುಕ್ತ ಡಿವೈಎಸ್​​ಪಿ ಆಗಿದ್ದ ರಾಜೇಂದ್ರ ಆರ್. ಅಂಬಡಗಟ್ಟಿ ಅವರನ್ನು ಬೆಳಗಾವಿಯ ಲೋಕಾಯುಕ್ತ ಎಸ್​ಪಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಇನ್ನಿತರ ಅಧಿಕಾರಿಗಳನ್ನು ಇದೇ ರೀತಿಯ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.