ETV Bharat / state

ಕೊರೊನಾ ವಾರಿಯರ್ಸ್​ಗೆ ಗುಣಮಟ್ಟದ ಪಿಪಿಇ ಕಿಟ್ ಪೂರೈಸಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

author img

By

Published : Jun 5, 2020, 10:09 PM IST

ಉತ್ತಮ ಗುಣಮಟ್ಟದ ಪಿಪಿಇ ಕಿಟ್‌ಗಳನ್ನೇ ಕೊರೊನಾ ವಾರಿಯರ್ಸ್​ಗೆ ಪೂರೈಸಬೇಕು ಮತ್ತು ರಾಜ್ಯದ ಮುಕ್ತ ಮಾರುಕಟ್ಟೆಯಲ್ಲಿ ಗುಣಮಟ್ಟದ ಕಿಟ್​​ಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕೊರೊನಾ ವಾರಿಯರ್ಸ್​ಗೆ ಉತ್ತಮ ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಪೂರೈಸಬೇಕು ಹಾಗೂ ರಾಜ್ಯದ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಮರ್ಪಕವಾಗಿ ಪರ್ಸನಲ್​​ ಪ್ರೊಟೆಕ್ಷನ್ ಎಕ್ವಿಪ್ಮೆಂಟ್ ಕಿಟ್‌ಗಳನ್ನು ಪೂರೈಕೆ ಮಾಡುತ್ತಿಲ್ಲ. ಪೂರೈಕೆಯಾಗುತ್ತಿರುವ ಕಿಟ್​​​ಗಳ ಗುಣಮಟ್ಟ ಸರಿಯಾಗಿಲ್ಲ ಎಂದು ಆರೋಪಿಸಿ ಡಾ. ರಾಜೀವ್ ಗೋಥೆ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಆರೋಪಗಳಿಗೆ ಉತ್ತರಿಸಿ, ಕೊರೊನಾ ವಾರಿಯರ್ಸ್​ಗೆ ಪೂರೈಸಲು ಈವರೆಗೆ ಒಟ್ಟು 11.50 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಮೇ. 23ರವರೆಗೆ 2.29 ಲಕ್ಷ ಪಿಪಿಇ ಕಿಟ್‌ಗಳನ್ನು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಪೂರೈಸಲಾಗಿದೆ. ಪ್ರಸ್ತುತ 2.59 ಲಕ್ಷ ಪಿಪಿಇ ಕಿಟ್‌ಗಳ ದಾಸ್ತಾನು ಇದೆ. ಖರೀದಿಸಿರುವ ಪಿಪಿಇ ಕಿಟ್‌ಗಳಲ್ಲಿ ಯಾವುದೇ ನಕಲಿ ಅಥವಾ ಕಳಪೆ ಗುಣಮಟ್ಟ ಕಂಡು ಬಂದಿಲ್ಲ. ಖರೀದಿಯೂ ಪಾರದರ್ಶಕವಾಗಿದೆ ಎಂದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಸದ್ಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್​​ಗಳಲ್ಲಿಯೂ ವೈದ್ಯರು ಪಿಪಿಇ ಕಿಟ್‌ಗಳನ್ನು ಬಳಸುತ್ತಿರುವುದರಿಂದ ಗುಣಮಟ್ಟದ ಪಿಪಿಇ ಕಿಟ್ ಪೂರೈಕೆ ಬಹಳ ಮುಖ್ಯವಾದ ವಿಚಾರ. ಆದ್ದರಿಂದ ಗುಣಮಟ್ಟದ ಪಿಪಿಇ ಕಿಟ್‌ಗಳನ್ನೇ ಕೊರೊನಾ ವಾರಿಯರ್ಸ್​ಗೆ ಪೂರೈಸಬೇಕು ಮತ್ತು ರಾಜ್ಯದ ಮುಕ್ತ ಮಾರುಕಟ್ಟೆಯಲ್ಲಿ ಗುಣಮಟ್ಟದ ಕಿಟ್​​ಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.