ಬೆಂಗಳೂರು: ಸದನದಲ್ಲಿ ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಭಾರತ ಹಾಗೂ ವೆಸ್ಟ್ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಟಿ-20 ಪಂದ್ಯವನ್ನು ವೀಕ್ಷಿಸುವ ಮೂಲಕ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಸಚಿವ ಈಶ್ವರಪ್ಪ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ಇಂದು ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಎರಡನೇ ದಿನದ ಅಹೋರಾತ್ರಿ ಧರಣಿ ವೇಳೆ ಕೈ ನಾಯಕರು ಕ್ರಿಕೆಟ್ ವೀಕ್ಷಿಸುತ್ತಿದ್ದಾರೆ. ವಿಪಕ್ಷ ಮೊಗಸಾಲೆಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಕೈ ಶಾಸಕರು ಇದ್ದಾರೆ.
ಧರಣಿನಿರತರಿಗೆ ಊಟದ ವ್ಯವಸ್ಥೆ: ಎರಡನೇ ದಿನವಾದ ಇಂದೂ ಕೂಡ ಧರಣಿ ನಿರತ ಶಾಸಕರಿಗೆ ವಿಧಾನಸಭೆಯ ಸಚಿವಾಲಯ ಊಟದ ವ್ಯವಸ್ಥೆ ಕಲ್ಪಿಸಿದೆ.
ಇದನ್ನೂ ಓದಿ: ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಬಿಹಾರದ ಸಕಿಬುಲ್ ಗನಿ
ಸೌತ್ ರುಚಿಸ್ ಹೋಟೆಲ್ನಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಇವತ್ತಿನ ಊಟದ ಮೆನುವಿನಲ್ಲಿ ಪಾಯಸ, ಚಪಾತಿ, ರಾಗಿ ಮುದ್ದೆ, ರೈಸ್ ಬಾತ್, ಪಲ್ಯ, ವೆಜ್ ಕರ್ರಿ, ಅನ್ನ, ಸಾಂಬಾರ್, ರಸಂ, ಮೊಸರು , ತರಕಾರಿ ಸಾಲಾಡ್, ಹಣ್ಣುಗಳನ್ನು ಪೂರೈಸಲಾಗಿದೆ. ಒಟ್ಟು 120 ಜನರಿಗೆ ಊಟದ ವ್ಯವಸ್ಥೆ ಇದೆ.