ETV Bharat / state

ಕೆಲಸಕ್ಕೆ ಹಾಜರಾಗದ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ: ಆಡಳಿತದ ವಿರುದ್ಧ ಆಕ್ರೋಶ - vanivilas hospital

ಕೊರೊನಾ ಹರಡದಂತೆ ಆಸ್ಪತ್ರೆ ಸೂಕ್ತ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದಾರೆ.

protest in  vanivilas hospital
ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ಆಕ್ರೋಶ
author img

By

Published : May 9, 2020, 1:00 PM IST

ಬೆಂಗಳೂರು: ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ‌ಆಡಳಿತ ವಿಭಾಗದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ನರ್ಸ್​​​​​​ಗಳು ಪಿಜಿ ಸ್ಟೂಡೆಂಟ್ಸ್, ವೈದ್ಯರು ಹಾಗೂ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಗಿಳಿದಿದ್ದಾರೆ.

ಪ್ರತಿಭಟನೆ

ಸೋಂಕಿತ ಮಹಿಳೆ ಹಾಗೂ ಅವರ ಸಂಬಂಧಿಕರು ಆಸ್ಪತ್ರೆಯ ಎಲ್ಲ ಕಡೆ ಓಡಾಡಿದ್ದಾರೆ. ಈ ಹಿನ್ನೆಲೆ ಕೊರೊನಾ ನಮಗೂ ಬರುವ ಭೀತಿ ಶುರುವಾಗಿದೆ. ಆದರೆ, ಆಸ್ಪತ್ರೆ ಆಡಳಿತ ವರ್ಗ ಇದು ನಾನ್ ಕೋವಿಡ್ ಆಸ್ಪತ್ರೆ ಎಂಬ ಕಾರಣಕ್ಕೆ ನಮಗೆ ಸೂಕ್ತ ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ಕೂಡ ನೀಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

ಆರಂಭದಿಂದಲೂ ಸೂಕ್ತ ಮುಂಜಾಗ್ರತ ಕ್ರಮಗಳ ಬಗ್ಗೆ ಗಮನಹರಿಸಿಲ್ಲ. ನಮ್ಮನ್ನ ಕೊರೊನಾ ವಾರಿಯರ್ಸ್ ವಿಮೆಗೂ ಸೇರಿಸಿಲ್ಲ. ಇದೀಗ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದರೂ ನಮ್ಮನ್ನ ಕೆಲಸ ಮಾಡಿ ಅಂತಿದ್ದಾರೆ.. ಕೇವಲ 30 ಮಂದಿಯನ್ನ ಕ್ವಾರಂಟೈನ್ ಮಾಡಿ ಉಳಿದವರು ಕೆಲಸ ಮಾಡಿ ಅಂತಿದ್ದಾರೆ. ನಾವೂ ಕೂಡ ಎಲ್ಲ ಕಡೆ ಓಡಾಡಿದ್ದೀವಿ. ಹೀಗಾಗಿ ನಮಗೆ ಕೋವಿಡ್ ಬಂದ್ರೆ ಏನ್ ಮಾಡೋದು ಅಂತಾ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡೀನ್ ಬಳಿ ಮಾತಾನಾಡಲು ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿಗೆ ಟೆನ್ಷನ್​​ ​:

ಪಾದರಾಯನಪುರದ ಇಬ್ಬರಿಗೆ ಈ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಅದ್ರಲ್ಲಿ ಒಬ್ಬರು ಶಂಕಿತ ಮಹಿಳೆ ಮತ್ತೊಬ್ಬರು ಸೋಂಕಿತ ಮಹಿಳೆ.. ಶಂಕಿತ ಮಹಿಳೆಗೆ ಗಂಡು ಮಗುವಾಗಿದ್ದು ಸ್ವ್ಯಾಬ್ ರಿಪೋರ್ಟ್ ಗಾಗಿ ಕಾಯಲಾಗ್ತಿದೆ.

ಮತ್ತೊಬ್ಬ ಮಹಿಳೆಗೆ ನಿನ್ನೆ ರಾತ್ರಿ 7:30 ಸುಮಾರಿಗೆ ಹೆಣ್ಣು ಮಗುವಾಗಿದೆ. ಈ ಸೋಂಕಿತ ಮಹಿಳೆಗೆ ವಿಕ್ಟೋರಿಯಾ ಟ್ರಾಮಾಕೇರ್ ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಈ ಮಹಿಳೆಯ ಮಗುವಿಗೆ ವಾಣಿವಿಲಾಸ್ ಪಿಐಸಿಯು ಕೇರ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಮಗು ಹುಟ್ಟಿದ 48 ಗಂಟೆಗಳ ಬಳಿಕ ಮಗುವಿನ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತದೆ. ಸದ್ಯ ಶಂಕಿತ ಮಹಿಳೆಯೂ ಪಾದರಾಯನಪುರದವರಾಗಿದ್ದು, ಅವರ ವರದಿಗಾಗಿ ಕಾಯ್ತಿದ್ದಾರೆ. ಶಂಕಿತ ಮಹಿಳೆ ಮೊದಲಿಗೆ ಬೇರೆ ವಿಳಾಸ ನೀಡಿದ್ರು. ಮಗು ಜನಿಸಿದ ಮೇಲೆ ಪಾದರಾಯನಪುರ ವಿಳಾಸ ನೀಡಿದ್ದಾರೆ. ಹೀಗಾಗಿ ಅವರ ಸ್ವ್ಯಾಬ್ ಕೂಡ ಟೆಸ್ಟ್ ಗೆ ಕಳುಹಿಸಿದ್ದು, ಆತಂಕ ಹೆಚ್ಚಾಗಿದೆ. ರೋಗಿ 738ಕ್ಕೆ ಜನಿಸಿದ ಮಗುವಿಗೆ ಸ್ವ್ಯಾಬ್ 48 ಗಂಟೆಗಳ ಬಳಿಕ ತೆಗೆಯಲಾಗುತ್ತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.