ETV Bharat / state

ಬಾರ್ ಮುಚ್ಚುವಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ.. ತೆರೆದ ಒಂದೇ ದಿನಕ್ಕೆ ಬಿತ್ತು ಬೀಗ...! - ವಿದ್ಯಾರ್ಥಿಗಳ‌ ಪ್ರತಿಭಟನೆ

ರೆಸಿಡೆನ್ಸಿ ಯುನಿವರ್ಸಿಟಿ ಕಾಲೇಜು ಬಳಿ ಬುಧವಾರ ತಾನೇ ಆರಂಭವಾಗಿದ್ದ ಬಾರ್​ನಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿತ್ತು. ಹಾಗಾಗಿ ವಿದ್ಯಾರ್ಥಿಗಳು ಬಾರ್ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿ ಒಂದೇ ದಿನಕ್ಕೆ ಬಾರ್ ಕ್ಲೋಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾರ್ ಮುಚ್ಚುವಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ: ಒಂದೇ ದಿನಕ್ಕೆ ಬಾರ್ ಕ್ಲೋಸ್
author img

By

Published : Sep 20, 2019, 5:32 AM IST

ಬೆಂಗಳೂರು: ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳ‌ ಪ್ರತಿಭಟನೆಯಿಂದ ಒಂದೇ ದಿನಕ್ಕೆ ಬಾರ್ ಕ್ಲೋಸ್ ಆದ ಘಟನೆ ಯಲಹಂಕ ತಾಲೂಕಿನ ರಾಜನಕುಂಟೆಯ ದಿಬ್ಬೂರು ಗ್ರಾಮದ ಬಳಿ ನಡೆದಿದೆ.

ಬಾರ್ ಮುಚ್ಚುವಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ: ಒಂದೇ ದಿನಕ್ಕೆ ಬಾರ್ ಕ್ಲೋಸ್

ಬುಧವಾರ ಓಪನ್​ ಆಗಿದ್ದ ಬಾರ್​ನಿಂದ ಪಕ್ಕದಲ್ಲೇ ಇದ್ದ ರೆಸಿಡೆನ್ಸಿ ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿತ್ತು. ಅಲ್ಲದೇ ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಇದರಿಂದ ಬೇಸತ್ತ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬಾರ್ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಅಬಕಾರಿ ಇಲಾಖೆಗೆ ಧಿಕ್ಕಾರ ಕೂಗಿದ್ದಲ್ಲದೇ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಈ ಜಾಗ ಕೃಷಿ ಜಮೀನಾಗಿದ್ದು, ನಿಯಮವನ್ನು ಗಾಳಿಗೆ ತೂರಿ ಬಾರ್ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ವಿದ್ಯಾಸಂಸ್ಥೆಯ ಸನಿಹದಲ್ಲಿ ಬಾರ್ ತೆರೆಯುವಂತಿಲ್ಲ. ಅಲ್ಲದೇ ಇದಕ್ಕೆ ಅಬಕಾರಿ ಇಲಾಖೆ ಎನ್​ಒಸಿ ಹೇಗೆ ಕೊಟ್ಟಿದೆ. ಇದನ್ನು ತೆರೆಯಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇದನ್ನು ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಇನ್ನು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಯಲಹಂಕ ತಹಶಿಲ್ದಾರ್​ ರಘು ಮೂರ್ತಿ, ಸ್ಥಳ ಪರಿಶೀಲಿಸಿ ಬಾರ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಬಾರ್ ಮುಚ್ಚುವಂತೆ ಹೇಳಿದ್ದಲ್ಲದೆ, ಹೇಳಿ ‌ಸ್ವತಃ ಅವರೇ ನಿಂತು ಬಾರ್ ಮುಚ್ಚಿಸಿದ್ದಾರೆ.

Intro:KN_BNG_02_19_students_protest_Ambarish_7203301
Slug: ಬಾರ್ ಮುಚ್ಚುವಂತೆ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಪ್ರತಿಭಟನೆ

ಪ್ರತಿಭಟನೆಯಿಂದ ಒಂದೇ ದಿನಕ್ಕೆ ಬಾರ್ ಕ್ಲೋಸ್

ಬೆಂಗಳೂರು: ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳ‌ ಪ್ರತಿಭಟನೆಯಿಂದ ಒಂದೇ ದಿನಕ್ಕೆ ಬಾರ್ ಕ್ಲೋಸ್ ಆದ ಘಟನೆಯಲಹಂಕ ತಾಲೂಕಿನ ರಾಜನಕುಂಟೆಯ ದಿಬ್ಬೂರು ಗ್ರಾಮದ ಬಳಿ ನಡೆದಿದೆ.

ನಿನ್ನೆ ತಾನೇ ಆರಂಭವಾಗಿದ್ದ ಬಾರ್ ನಿಂದ ಅಲ್ಲೇ ಪಕ್ಕದಲ್ಲೇ ಇದ್ದ ರೆಸಿಡೆನ್ಸಿ ಯುನಿವರ್ಸಿಟಿ ಯ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಗಿತ್ತು.. ಅಲ್ಲದೇ ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ.. ಇದರಿಂದ ಸ್ಥಳೀಯ ಗ್ರಾಮದ ಜನರಿಗೂ ಕಿರಿಕಿರಿಯುಂಟಾಗಿತ್ತು.. ಇದರಿಂದ ಬೇಸತ್ತ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬಾರ್ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು.. ಅಬಕಾರಿ ಇಲಾಖೆಗೆ ದಿಕ್ಕಾರ ಕೂಗಿದಲ್ಲದೇ ನ್ಯಾಯ ಸಿಗುವ ವರೆಗೂ ಹೋರಾಟ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು..

ಬೈಟ್: ನಿಖಿತಾ, ವಿದ್ಯಾರ್ಥಿನಿ
ಬೈಟ್: ರೋಹಿತ್, ವಿದ್ಯಾರ್ಥಿ

ಇನ್ನು ಈ ಜಾಗ ಕೃಷಿ ಜಮೀನಾಗಿದ್ದು, ಅಕ್ರಮವಾಗಿ ಯಾವುದೇ ರೂಲ್ಸ್ ಪಾಲೋ ಮಾಡದೇ ಬಾರ್ ಅನ್ನು ನಿರ್ಮಿಸಿದ್ದಾರೆ.. ಶಾಲಾ ಕಾಲೇಜು ಇರುವ ಹಾಗೂ ಗ್ರಾಮದ ಪಕ್ಕದಲ್ಲಿ ಯಾವುದೇ ಬಾರ್ ಓಪನ ಮಾಡುವ ಹಾಗಿಲ್ಲ.. ಅಲ್ಲದೇ ಇದಕ್ಕೆ ಅಬಕಾರಿ ಇಲಾಖೆ ಎನ್ ಒಸಿ ಹೇಗೆ ಕೊಟ್ಟಿದೆ. ಇದನ್ನು ತೆರೆಯಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ.. ಇದನ್ನು ಕೂಡಲೇ ಮುಚ್ಚಬೇಕು ಎಂದು ಪ್ರತಿಭಟನೆ ನಡೆಸಿದ್ವಿ.. ಇದೀಗ ತಾಶಿಲ್ದಾರರು ಬಂದು‌ ಬಾರ್ ಅನ್ನು ಕ್ಲೋಸ್ ಮಾಡಿಸಿದ್ದಾರೆ.. ಇದರಿಂದ ತುಂಬಾ ಅನುಕೂಲವಾಗಿದೆ ಎಂದು ಸ್ಥಳೀಯರು ತಾಸಿಲ್ದಾರರ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ರು..

ಬೈಟ್: ಮೋಹನ್, ಸ್ಥಳೀಯರು
ಬೈಟ್: ಸತೀಶ್, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ

ಇನ್ನು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಯಲಹಂಕ ತಾಸಿಲ್ದಾರರಾದ ರಘು ಮುರ್ತಿ, ಸ್ಥಳ ಪರಿಶೀಲಿಸಿ ಬಾರ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.. ಹೇಗೆ ಇಲ್ಲಿ ಬಾರ್ ಓಪನ್ ಮಾಡಿದ್ರಿ..ಯಾರು ಅನುಮತಿ ಕೊಟ್ಟಿದ್ದಾರೆ..? ಎಲ್ಲಿ ನಿಮ್ಮ ದಾಖಲೆ ಕೊಡಿ ಎಂದು ಮಾಲೀಕರಿಗೆ ಕೇಳಿದ್ರು.. ಅದೇ ರೀತಿ ಕೂಡಲೇ ಬಾರ್ ಕ್ಲೋಸ್ ಮಾಡಬೇಕು ಎಂದು ಹೇಳಿ‌ಸ್ವತಃ ಅವರೇ ನಿಂತು ಬಾರ್ ಅನ್ನು ಮುಚ್ಚಿಸಿದ್ರು.. ಈ ಬಾರ್ ಅಕ್ರಮವಾಗಿ ಕೃಷಿ ಜಮೀನಿನಲ್ಲಿ ನಿರ್ಮಿಸಲಾಗಿದೆ.. ಶಾಲಾ ಕಾಲೇಜಿನ ಒಳಗೆ ಅಂದರೆ ೧೦೦ ಮೀಟರ್ ಒಳಗೆ ಇರಬಾರದು..‌ಆದರೆ ಇದು ಒಳಗೆ ಇದೆ.. ಇದಲ್ಲದೇ ಯಾವುದೇ ಬಾರ್ ಕೂಡ ಈ ರೀತಿ ಇರಬಾರದು.. ಇದಕ್ಕೆ ಗ್ರಾಮ ಪಂಚಾಯತಿ ಪಿ.ಡಿ.ಒ ಯಾವ ರೀತಿ ಅನುಮತಿ ನೀಡಿದ್ದಾರೆ ಎಂದು ಪ್ರಶ್ನೆ ಮಾಡಿದ್ರು..

ಬೈಟ್: ರಘು ಮೂರ್ತಿ, ಯಲಹಂಕ ತಾಸಿಲ್ದಾರರು

ಒಟ್ಟಿನಲ್ಲಿ ಮಧ್ಯದ ‌ಅಂಗಡಿ ಊರು ಹಾಗೂ ಶಾಲಾ ಕಾಲೇಜುಗಳ ಹತ್ತಿರ ಇರುವುದನ್ನು ಕ್ಲೋ ಸ್ ಮಾಡಿಸಿದ್ದಂತೆ ಎಲ್ಲಾ ಕಡೆ ಇದೇ ರೀತಿ ಬಾರ್ ಗಳನ್ನು ಮುಚ್ಚಿಸಿದ್ರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ..

Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.