ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಶಿಕ್ಷಕರು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಭೇಟಿ ನೀಡಿದರು. ಬಳಿಕ ಮಾತನಾಡಿದ ಸಚಿವ ಬಸವರಾಜ್ ಬೊಮ್ಮಾಯಿ, ಶಿಕ್ಷಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ಶಿಕ್ಷಕರಿಗೆ ಕೊಡುವ ಗೌರವ ಅಪಾರ, ಅವರ ಸಮಸ್ಯೆ ಬಹಳಷ್ಟಿದೆ ಎಂದರು.
ಭಾರತದಂತಹ ದೊಡ್ಡ ದೇಶದಲ್ಲಿ 32ರಷ್ಟು ಮಕ್ಕಳಿಗೆ ಶಿಕ್ಷಣ ಸಿಗದಿರೋದು ನಿಜಕ್ಕೂ ದುರದೃಷ್ಟಕರ. ಕೋವಿಡ್ ಕಾರಣ ರಾಜ್ಯ ಸರ್ಕಾರದಿಂದ ಬಹಳಷ್ಟು ಕೆಲಸ ಮಾಡಲಾಗಿರಲಿಲ್ಲ. ಹೀಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಸಾಲ ಪಡೆದು ನೀಡಬೇಕಾದ ಪರಿಸ್ಥಿತಿ ಬಂದಿದೆ. ಆಹಾರ ಕಿಟ್, ಗೌರವ ಧನ ನೀಡುವುದು, ಕೋವಿಡ್ ವ್ಯಾಕ್ಸಿನ್ ಕೊಡುವ ಬೇಡಿಕೆ ಇದೆ ಎಂದು ತಿಳಿಸಿದರು.
ಫ್ರೀಡಂ ಪಾರ್ಕ್ನಲ್ಲಿ ಖಾಸಗಿ ಶಾಲಾ ಶಿಕ್ಷಕರ ಸಾಂಕೇತಿಕ ಪ್ರತಿಭಟನೆ
ಇದು ಅಡ್ಮಿನಿಸ್ಟ್ರೇಷನ್ ನಿಂದ ಅಧಿಕೃತವಾಗಿ ಆದೇಶವಾಗಬೇಕಿದೆ. ಕೋರ್ಟ್ ಆದೇಶವೂ ಕೂಡ ಇದೆ. ಶಾಲಾಡಳಿತ ಮಂಡಳಿ ಬೇಡಿಕೆಯಲ್ಲಿ ಯಾವ ಬೇಡಿಕೆ ಈಡೇರಿಸಬಹುದು ಅನ್ನೋದನ್ನ ಗಮನಿಸುತ್ತೇವೆ ಎಂದು ಹೇಳಿದರು.
ನಂತರ ಮಾತನಾಡಿದ ಸಚಿವ ಆರ್. ಅಶೋಕ್, ಸಿಎಂ ಕರೆಮಾಡಿ ಅವರ ಬೇಡಿಕೆ ಆಲಿಸುವಂತೆ ತಿಳಿಸಿದ್ರು. ಬಸವರಾಜ್ ಬೊಮ್ಮಾಯಿ ಅವರನ್ನೂ ಜೊತೆಗೇ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳ ಪರವಾಗಿ ನಾವು ಬಂದಿದ್ದೇವೆ ಎಂದರು.
ಖಾಸಗಿ ಶಾಲಾ ಶಿಕ್ಷಕರ ಸಾಂಕೇತಿಕ ಪ್ರತಿಭಟನೆ
ಕೋವಿಡ್ ಲಸಿಕೆಗೆ ಸಂಬಂದಿಸಿದಂತೆ ಬೇಡಿಕೆ ಇದ್ದು, ನೀವು ಕೂಡಾ ಕೊರೊನಾ ವಾರಿಯರ್ಸ್‌ಗಳೇ ಅಂತ ತಿಳಿಸಿದ್ದೇವೆ. ಲಸಿಕೆ ಕೊಡೋ ಸಂದರ್ಭದಲ್ಲಿ ನಿಮಗೂ ಮೊದಲ ಹಂತದಲ್ಲಿ ಕೊಡುವಂತೆ ನಾವು ಸಿಎಂಗೆ ತಿಳಿಸುತ್ತೇವೆ. ಶಿಕ್ಷಕ ಸಿಬ್ಬಂದಿ ಪ್ರತ್ಯೇಕ ವಿಮಾ, ಗೌರವಧನ, ಕಿಟ್ ನೀಡುವುದು ಸೇರಿದಂತೆ ಎಲ್ಲವೂ ಸರ್ಕಾರದ ಮೇಲೆ ಹೊರೆ ಬೀಳಲಿದೆ. ಈಗಾಗಲೇ ಕೊರೊನಾದಿಂದ ಬಳಲಿ ಬೆಂಡಾಗಿರುವ ಸರ್ಕಾರ, ಈಗ ಚೇತರಿಕೆಯ ಹಳಿಗೆ ಮರಳಿದೆ ಎಂದರು.
ಓದಿ: ಸಿಎಂ ಮಾಧ್ಯಮ ಸಲಹೆಗಾರ ಭೃಂಗೀಶ್ಗೆ ಸಂಪುಟ ದರ್ಜೆ ಸ್ಥಾನ ನೀಡಿ ಆದೇಶ..
ನಾವು ಶಿಕ್ಷಕರ ಜೊತೆ ನಿಲ್ಲುತ್ತೇವೆ, ಗೌರವಿಸುತ್ತೇವೆ. ನಿಮ್ಮ ಪ್ರಾಮಾಣಿಕ ಬೇಡಿಕೆ ಈಡೇರಿಸಲು ಸರ್ಕಾರ ಸ್ಪಂದಿಸಲಿದೆ. ಈಗಾಗಲೇ ಫ್ಯಾಕ್ಟರಿ, ಸಂಚಾರ ಆರಂಭವಾಗಿದೆ. ಎಲ್ಲ ಶುರುವಾಗಿದ್ದು, ನಮ್ಮ ಶಾಲೆ ಆರಂಭವಾಗಿಲ್ಲ ಅನ್ನೋ ಬೇಡಿಕೆ ಇದೆ. ನಿಮ್ಮ ಸಮಸ್ಯೆ ಬಗೆಹರಿಸುವಲ್ಲಿ ನಾವು ಸಿಎಂ ಭೇಟಿ ಮಾಡಿ ವಿಚಾರ ತಿಳಿಸುತ್ತೇವೆ. ಸಿಎಂ ಮೇಲೆ ಒತ್ತಡ ತಂದು ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.