ಬೆಂಗಳೂರು : 10 ಗಂಟೆಗೂ ಹೆಚ್ಚು ಕಾಲ ಕೆಲಸ ನಿರ್ವಹಿಸಿದ್ದರು, ಅರ್ಧ ಸಂಬಳ ಪಾವತಿಸಲಾಗುತ್ತಿದೆ ಎಂದು ಆರೋಪಿಸಿ ಸಾರಿಗೆ ನೌಕರರು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟಿಸಿದರು.
ನೌಕರರಿಗೆ ಆರೋಗ್ಯ ವಿಮೆ ಕೊಡಬೇಕು, ಕೋವಿಡ್ನಿಂದ ಮೃತಪಟ್ಟವರಿಗೆ ₹30 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಪತ್ರ ಸ್ವೀಕರಿಸಿ ಮಾತಾನಾಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, 8 ತಾಸಿನ ಶಿಫ್ಟ್‌ನ ಹಂತಹಂತವಾಗಿ ಜಾರಿಗೆ ತರಲಾಗುತ್ತದೆ. ಕಮಿಟಿ ಮಾಡಿ ಚರ್ಚಿಸಲಾಗುತ್ತದೆ.
ನೌಕರರು ತಮ್ಮ ಕುಂದುಕೊರತೆಗಾಗಿ ಆ್ಯಪ್ ಸಿದ್ಧಪಡಿಸಲಾಗಿದ್ದು, ಎಲ್ಲ ಮಾಹಿತಿಯನ್ನು ಅಪಲೋಡ್ ಮಾಡಬಹುದು ಎಂದರು. ಬಿಎಂಟಿಸಿ ಈಗಾಗಲೇ ನಷ್ಟದಲ್ಲಿದ್ದು, ಪ್ರತಿ ಸಲ ಪ್ರತಿಭಟನೆಯ ಮೊರೆ ಹೋಗುವ ಬದಲು ತಿಂಗಳಿಗೊಮ್ಮೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು.