ಬೆಂಗಳೂರು: ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ತಿದ್ದುಪಡಿಗೆ ಆಗ್ರಹಿಸಿ, ಇದೇ ಡಿಸೆಂಬರ್ 29 ರಂದು ಮುಷ್ಕರ ನಡೆಸುವುದಾಗಿ ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದ್ದಾರೆ.
ಸುಮಾರು ವರ್ಷಗಳಿಂದ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಯ ನ್ಯೂನತೆ ಸರಿಪಡಿಸಲು ಮನವಿ ಪತ್ರ ನೀಡಿದ್ರೂ ಯಾವುದೇ ಕ್ರಮ ಜರುಗಿಸಿಲ್ಲ. ಸದ್ಯ ಬರೆದಿರುವ ಪತ್ರಕ್ಕೂ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಷ್ಕರ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಸಂಘದ ಬೇಡಿಕೆಗಳು:
1.ವೃಂದ ಮತ್ತು ನೇಮಕಾತಿಯಲ್ಲಿ ಎ ಶ್ರೇಣಿಯ ಅಧಿಕಾರಿ ಅಥವಾ 74,000 ಕ್ಕೂ ಮೇಲ್ಪಟ್ಟು ವೇತನ ಶ್ರೇಣಿಯ ಅಧಿಕಾರಿಗಳನ್ನು ಸರ್ಕಾರಕ್ಕೆ ನೇಮಕಾತಿ ಪ್ರಾಧಿಕಾರ ನೀಡಿರುವುದನ್ನು ಕೈಬಿಡಬೇಕು. ಆಯುಕ್ತರಿಗೆ ನೇಮಕಾತಿ ಪ್ರಾಧಿಕಾರ ನೀಡಬೇಕು. ಇದರಿಂದ ಅರ್ಹ ಅಧಿಕಾರಿಗಳಿಗೆ ವೇತನ ಬಡ್ತಿ, ಮುಂಬಡ್ತಿ, ವರ್ಗಾವಣೆ ನಿವೃತ್ತಿ ಅನುಮತಿಯ ವಂಚನೆ ತಪ್ಪಲಿದೆ.
2. ಪಾಲಿಕೆ ನಗರ ಯೋಜನೆ ಇಲಾಖೆಯ ಎಲ್ಲಾ ಶ್ರೇಣಿ ಹುದ್ದೆಗಳಿಗೆ ಶೇ.100 ರಷ್ಟು ಎರವಲು ನೌಕರರಿಗೆ ಅವಕಾಶ ಇದ್ದು, ಇದನ್ನು ಪರಿಷ್ಕರಿಸಿ ಪಾಲಿಕೆ ಅಧಿಕಾರಿ/ ನೌಕರರಿಗೆ ಸಿ&ಆರ್ನಲ್ಲಿ ಅವಕಾಶ ಕಲ್ಪಿಸಬೇಕು.
3. ಪಾಲಿಕೆ ಲೆಕ್ಕ ಪತ್ರ ಇಲಾಖೆಯ ಹುದ್ದೆಗಳನ್ನು ರಾಜ್ಯ ಲೆಕ್ಕ ಪತ್ರ ಇಲಾಖೆಯಿಂದ ಎರವಲು ಸೇವೆ ಮೇಲೆ ಶೇ.100 ರಷ್ಟು ವೃಂದ ಮತ್ತು ನೇಮಕಾತಿಯಲ್ಲಿ ಅಂತಿಮಗೊಳಿಸಿರುವುದನ್ನು ಮಾರ್ಪಾಡು ಮಾಡಬೇಕು.
4. ಕಂದಾಯ ಪರಿವೀಕ್ಷಕರನ್ನು ಶೇ.25 ರಷ್ಟು ನೇರ ನೇಮಕಾತಿ ಮಾಡಿರುವುದನ್ನು ರದ್ದು ಮಾಡಬೇಕು ಸೇರಿದಂತೆ ವಿವಿಧ ಹದಿನೈದು ಅಂಶಗಳ ಮಾರ್ಪಾಡು ಬಯಸಿ ಬೇಡಿಕೆ ಇಟ್ಟಿದ್ದಾರೆ.