ETV Bharat / state

ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ: ಹಲವರು ಪೊಲೀಸ್​ ವಶಕ್ಕೆ

author img

By

Published : Dec 19, 2019, 4:42 PM IST

ಎಡ ಪಕ್ಷಗಳ ಸಂಘಟನೆಗಳಾದ ಸಿಪಿಐ, ಸಿಪಿಐಎಂ, ಸಿಪಿಐಎಂಎಲ್, ಎಐಎಫ್​ಬಿ,ಸಂಘಟನೆಗಳ ಸದಸ್ಯರು ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ,  Protest against the Citizenship Amendment Act
ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ

ಬೆಂಗಳೂರು: ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ನಿಷೇಧಾಜ್ಞೆ ಜಾರಿ ನಡುವೆಯೂ ನಗರದ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಎಡ ಪಕ್ಷಗಳ ಸಂಘಟನೆಗಳಾದ ಸಿಪಿಐ, ಸಿಪಿಐಎಂ, ಸಿಪಿಐಎಂಎಲ್, ಎಐಎಫ್​ಬಿ,ಸಂಘಟನೆಗಳ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರುತ್ತಿದ್ದಂತೆ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ

ಪೊಲೀಸರು ಎಚ್ಚರಿಕೆ ನೀಡಿದರಾದರೂ ಹೆದರದ ಪ್ರತಿಭಟನಾಕಾರರು, ಹೋರಾಟ ಮುಂದುವರೆಸಿದಾಗ, ಹಲವರನ್ನು ವಶಕ್ಕೆ ಪಡೆಯಲಾಯಿತು.

Intro:ಮೈಸೂರು ಬ್ಯಾಂಕ್ ವೃತ್ತದಲ್ಲಿ ನಿಷೇಧಾಜ್ಞೆ ಮೀರಿ ಪ್ರತಿಭಟನೆ- ಪ್ರತಿಭಟನೆ ಹತೋಟಿಗೆ ತಂದ ಪೊಲೀಸರು

ಬೆಂಗಳೂರು: ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲೂ 144 ಸೆಕ್ಷನ್ ಜಾರಿ ನಡುವೆಯೂ ಪ್ರತಿಭಟನೆ ನಡೆಸಿದರು. ಎಡ ಪಕ್ಷಗಳ ಸಂಘಟನೆಗಳಾದ ಸಿಪಿಐ, ಸಿಪಿಐಎಮ್, ಸಿಪಿಐಎಮ್ ಎಲ್, ಎಐಎಫ್ಬಿ,ಸಂಘಟನೆಗಳ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರುತ್ತಿದ್ದಂತೆ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಯಾರು ಇಲ್ಲಿ ನಿಂತುಕೊಳ್ಳಬೇಡಿ ಎಂದು ಪೊಲೀಸರು ಪ್ರಕಟಿಸಿದರು. ಪ್ರತಿಭಟನೆ ಮತ್ತೆಯೂ ಮುಂದುವರಿದಾಗ ಪ್ರತಿಭಟನಾಕಾರರ ಗುಂಪನ್ನು ಚದುರಿಸಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಪೊಲೀಸರು ಜವಾವಣೆಗೊಂಡರು.ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬಿಗಿ ಭದ್ರತೆ ಒದಗಿಸಲಾಯಿತು.
ಪೊಲೀಸರ ವಿರೋಧದ ನಡುವೆಯೂ ಪ್ರತಿಭಟನೆ ಮುಂದುವರಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆ ತಿದ್ದುಪಡಿ ಜಾರಿಗೆ ತರಬಾರದು, ಹಿಂಒಡೆಯಬೇಕೆಂದು ಒತ್ತಾಯಿಸಿದರು. ಬಿಜೆಪಿ, ಇತ್ ಷಾ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ರಕ್ತ ಹರಿಸುತ್ತೇವೆ ವಿನಃ ಪೌರತ್ವ ಕಾಯ್ದೆ ಒಪ್ಪಲ್ಲ ಎಂದು ಆಗ್ರಹಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಹಿಡಿದು ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಿದರು. ಪ್ರತಿಭಟನಾಕಾರರು ವಿರೋಧಿಸಿದಾಗ ಕೈಯಲ್ಲಿ ಎಳೆದುಕೊಂಡು ಹೋಗಿ ಬಸ್ ಹಾಗೂ ಪೊಲೀಸ್ ಜೀಪ್ ಹತ್ತಿಸಿಕೊಂಡು ಪ್ರತಿಭಟನೆ ಕೊನೆಗೊಳಿಸಿದರು.
ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಆಡುಗೋಡಿ ಸಿ ಆರ್ ಸೌತ್ ಗೆ ಕರೆದುಕೊಂಡು ಹೋದರು‌.
ಒಟ್ಟಿನಲ್ಲಿ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಯಾವುದೇ ಪ್ರತಿಭಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಸೌಮ್ಯಶ್ರೀ
Kn_bng_01_mysorebank_circle_protest_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.