ETV Bharat / state

ಅವೈಜ್ಞಾನಿಕ ಕಸ ವಿಲೇವಾರಿ ಖಂಡಿಸಿ ಬಿಬಿಎಂಪಿ ವಿರುದ್ಧ ಪ್ರತಿಭಟನೆ - ಅವೈಜ್ಞಾನಿಕ

ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿ ಗ್ರಾಮಗಳ ಕ್ವಾರಿ ಜಾಗದಲ್ಲಿ ಬಿಬಿಎಂಪಿ ಯಾವುದೇ ವೈಜ್ಞಾನಿಕ ಕ್ರಮ ಅನುಸರಿಸದೆ ಕಸ ವಿಲೇವಾರಿ ಮಾಡುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದ ಜನತೆ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ದೂರಿದರು.

ಅವೈಜ್ಞಾನಿಕ ಕಸ ವಿಲೇವಾರಿ ಖಂಡಿಸಿ ಬಿಬಿಎಂಪಿ ವಿರುದ್ಧ ಪ್ರತಿಭಟನೆ
author img

By

Published : Jun 23, 2019, 2:30 AM IST

ಬೆಂಗಳೂರು: ಜಕ್ಕೂರು ವಾರ್ಡ್ ವ್ಯಾಪ್ತಿಯ ಬೆಳ್ಳಳ್ಳಿ ಸಮೀಪದ ಕ್ವಾರಿ ಜಾಗದಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವ ಬಿಬಿಎಂಪಿ ಕ್ರಮ ಖಂಡಿಸಿ ಬ್ಯಾಟರಾಯನಪುರ ಮತ್ತು ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿ ಗ್ರಾಮಗಳ ಕ್ವಾರಿ ಜಾಗದಲ್ಲಿ ಬಿಬಿಎಂಪಿ ಯಾವುದೇ ವೈಜ್ಞಾನಿಕ ಕ್ರಮ ಅನುಸರಿಸದೆ ಕಸ ವಿಲೇವಾರಿ ಮಾಡುತ್ತಿದ್ದು,ಸುತ್ತಮುತ್ತಲ ಪ್ರದೇಶದ ಜನತೆ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಿಬಿಎಂಪಿ ಕೂಡಲೇ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅವೈಜ್ಞಾನಿಕ ಕಸ ವಿಲೇವಾರಿ ಖಂಡಿಸಿ ಬಿಬಿಎಂಪಿ ವಿರುದ್ಧ ಪ್ರತಿಭಟನೆ

ಈ ಹಿಂದೆ ನಗರದ ಹೊರವಲಯದ ಮಂಡೂರು, ಮಾವಳ್ಳಿಪುರ, ಚಿಕ್ಕಬಿದರಕಲ್ಲು ಸೇರಿದಂತೆ ಹಲವೆಡೆ ವೈಜ್ಞಾನಿಕ ಕಸ ವಿಲೇವಾರಿಯ ಭರವಸೆ ನೀಡಿ ಕಸ ಸುರಿದ ಬಿಬಿಎಂಪಿ, ಅಲ್ಲಿನ ಕಸ ವಿಲೇವಾರಿ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಗ್ರಾಮಗಳ ಅಂತರ್ಜಲ ಕಲುಷಿತಗೊಳ್ಳುವಂತೆ ಮಾಡಿತ್ತು. ಇದೀಗ ಕಸ ವಿಲೇವಾರಿ ನಿಲ್ಲಿಸಿದ್ದರೂ ಸಹ ಆ ಗ್ರಾಮಗಳಲ್ಲಿ ಇಂದಿಗೂ ಕಸದಿಂದ ಉಂಟಾದ ತೊಂದರೆ ನಿವಾರಣೆಯಾಗಿಲ್ಲ ಎಂದು ದೂರಿದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕದ ಗ್ರಾಮಗಳ ಸಮಸ್ಯೆ ಪರಿಶೀಲನೆಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಹೂಡಲಿ, ಗ್ರಾಮ ವಾಸ್ತವ್ಯಕ್ಕೆ ತಮ್ಮೊಟ್ಟಿಗೆ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ, ಗ್ರಾಮೀಣಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡರನ್ನು ಕರೆತರಲಿ ಎಂದು ಹೇಳಿದರು.

Intro:ಸಂಜಯ್ ನಾಗ್, ಬೆಂಗಳೂರು KA10014

ಅವೈಜ್ಞಾನಿಕ ಕಸ ವಿಲೇವಾರಿ ಖಂಡಿಸಿ ಬಿಬಿಎಂಪಿ ವಿರುದ್ಧ ಪ್ರತಿಭಟನೆ

ಬೆಂಗಳೂರು: ಜಕ್ಕೂರು ವಾರ್ಡ್ ವ್ಯಾಪ್ತಿಯ ಬೆಳ್ಳಳ್ಳಿ ಸಮೀಪದ ಕ್ವಾರಿ ಜಾಗದಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವ ಬಿಬಿಎಂಪಿ ಕ್ರಮ ಖಂಡಿಸಿ ಬ್ಯಾಟರಾಯನಪುರ ಮತ್ತು ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಜಕ್ಕೂರು ವಾರ್ಡ್ ಬಿಬಿಎಂಪಿ ಸದಸ್ಯ ಕೆ.ಎ.ಮುನೀಂದ್ರಕುಮಾರ್ ನೇತೃತ್ವದಲ್ಲಿ ಬೆಳ್ಳಳ್ಳಿ ಕ್ರಾಸ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ ‘ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿ ಗ್ರಾಮಗಳ ಕ್ವಾರಿ ಜಾಗದಲ್ಲಿ ಬಿಬಿಎಂಪಿ ಯಾವುದೇ ವೈಜ್ಞಾನಿಕ ಕ್ರಮ ಅನುಸರಿಸದೆ ಕಸ ವಿಲೇವಾರಿ ಮಾಡುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದ ಜನತೆ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವೈಜ್ಞಾನಿಕ ಕಸ ವಿಲೇವಾರಿಯಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಕಸದ ವಾಸನೆ ತೀವ್ರವಾಗಿದ್ದು, ಜನತೆ ಮಾರಕ ರೋಗಗಳ ಭೀತಿಗೆ ಬಾಧಿಸುತ್ತಿವೆ.ಬಿಬಿಎಂಪಿ ಕೂಡಲೇ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ನಗರದ ಹೊರವಲಯದ ಮಂಡೂರು, ಮಾವಳ್ಳಿಪುರ, ಚಿಕ್ಕಬಿದರಕಲ್ಲು ಸೇರಿದಂತೆ ಹಲವೆಡೆ ವೈಜ್ಞಾನಿಕ ಕಸ ವಿಲೇವಾರಿಯ ಭರವಸೆ ನೀಡಿ ಕಸ ಸುರಿದ ಬಿಬಿಎಂಪಿ, ಅಲ್ಲಿನ ಕಸ ವಿಲೇವಾರಿ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಗ್ರಾಮಗಳ ಅಂತರ್ಜಲ ಕಲುಷಿತಗೊಳ್ಳುವಂತೆ ಮಾಡಿತ್ತು. ಇದೀಗ ಕಸ ವಿಲೇವಾರಿ ನಿಲ್ಲಿಸಿದ್ದರೂ ಸಹ ಆ ಗ್ರಾಮಗಳಲ್ಲಿ ಇಂದಿಗೂ ಕಸದಿಂದ ಉಂಟಾದ ದುಷ್ಪಾರಿಣಾಮ ನಿವಾರಣೆಯಾಗಿಲ್ಲ ಎಂದು ದೂರಿದರು.
ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಮುಂದಾಗಬೇಕಿದ್ದ ಬಿಬಿಎಂಪಿ ಅದನ್ನು ಮಾಡದೆ, ನಗರದ ಹೊರ ವಲಯದ ಬೆಳ್ಳಳ್ಳಿ, ಮಿಟ್ಟಿಗಾನಹಳ್ಳಿ, ಮಾಗಡಿ ರಸ್ತೆಯ ಸೀಗೇಹಳ್ಳಿ, ಕನ್ನಲ್ಲಿ ಮುಂತಾದ ಶುದ್ಧ ಪರಿಸರ ಹೊಂದಿರುವ ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಕಸ ಸುರಿದು ಗ್ರಾಮಗಳ ಪರಿಸರವನ್ನೇ ಹಾಳು ಮಾಡಿದೆ. ಬಿಬಿಎಂಪಿ ಕೂಡಲೇ ಇಲ್ಲಿ ಕಸ ಸುರಿಯುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Body:ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ ‘ಉತ್ತರ ಕರ್ನಾಟಕದ ಗ್ರಾಮಗಳ ಸಮಸ್ಯೆ ಪರಿಶೀಲನೆಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಹೂಡಲಿ, ಗ್ರಾಮ ವಾಸ್ತವ್ಯಕ್ಕೆ ತಮ್ಮೊಟ್ಟಿಗೆ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ, ಗ್ರಾಮೀಣಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡರನ್ನು ಕರೆತರಲಿ ಎಂದು ಹೇಳಿದರು.

. ನಗರದಲ್ಲಿ ಕಸ ವಿಲೇವಾರಿ ಬಹುದೊಡ್ಡ ಮಾಫಿಯಾವಾಗಿ ಪರಿಣಮಿಸಿದ್ದು, ವೈಜ್ಞಾನಿಕ ಕಸ ವಿಲೇವಾರಿಯ ನೆಪದಲ್ಲಿ ಪ್ರತಿ ವರ್ಷ ಕೋಟ್ಯಾಂತರ ರೂ. ಹಣ ವ್ಯಯವಾಗುತ್ತಿದೆ ಆದರೆ ಎಲ್ಲಿಯೂ ಸಹ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಕಸ ವಿಲೇವಾರಿ ನೆಪದಲ್ಲಿ ವ್ಯಯವಾಗುವ ಹಣ ಏನಾಗುತ್ತಿದೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದರು.

Conclusion:ಪ್ರತಿಭಟನೆಯಲ್ಲಿ ಬಿಬಿಎಂಪಿ ಸದಸ್ಯರಾದ ಕೆ.ಎ.ಮುನೀಂದ್ರಕುಮಾರ್, ಎಂ.ಸತೀಶ್,ಯಲಹಂಕ ಮಾಜಿ ನಗರಸಭಾಧ್ಯಕ್ಷ ಕೆಂಪೇಗೌಡ, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡರಾದ ಸತ್ಯನಾರಾಯಣ(ದೀಪು), ಪುಟ್ಟರಾಜು, ಮುನಿರಾಜು, ಚಿಕ್ಕಹನುಮಯ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಕಸದ ಸಮಸ್ಯೆಯಿಂದ ಪೀಡಿತರಾಗಿರುವ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

_____
ಬೈಟ್೧: ಎಸ್.ಆರ್.ವಿಶ್ವನಾಥ್, ಯಲಹಂಕ ಶಾಸಕ

__________
ಬೈಟ್೨: ಪದ್ಮನಾಭರೆಡ್ಡಿ, ಬಿಬಿಎಂಪಿ ವಿೋಧ ಪಕ್ಷದ ನಾಯಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.