ETV Bharat / state

ಫೇಕ್ ಆ್ಯಪ್​ನಿಂದ ನಾವು ಹೇಗೆ ಜಾಗರೂಕರಾಗಿರಬೇಕು..? - ತ್ವರಿತ ಸಾಲ ಒದಗಿಸುವ ಫೇಕ್ ಆ್ಯಪ್

ಯಾವುದೇ ಆ್ಯಪ್ ಇನ್​ಸ್ಟಾಲ್ ಮಾಡುವ ಮೊದಲು ಅವುಗಳು ನಮ್ಮ ಡಿಜಿಟಲ್ ಸಾಧನದಲ್ಲಿ ಯಾವುದನ್ನೆಲ್ಲ ಆ್ಯಕ್ಸೆಸ್ ಮಾಡಲು ಪರ್ಮಿಷನ್ ಕೇಳುತ್ತಿವೆ ಎಂದು ಸರಿಯಾಗಿ ನೋಡಿಕೊಳ್ಳಬೇಕು. ಹೊಸ ಆ್ಯಪ್ ಡೌನ್​ಲೋಡ್ ಮಾಡುವ ಮೊದಲು ಅದರ ಕುರಿತು ಜಾಗರೂಕರಾಗಿರಬೇಕು. ಸರಿಯಾಗಿ ತಿಳಿದುಕೊಂಡೇ ಡೌನ್​ಲೋಡ್ ಮಾಡಬೇಕು.

protect-yourself-from-fake-apps
protect-yourself-from-fake-apps
author img

By

Published : Dec 29, 2020, 5:53 PM IST

Updated : Dec 29, 2020, 8:15 PM IST

ಬೆಂಗಳೂರು: ವಿವಿಧ ಆ್ಯಪ್ ಮೂಲಕ ಡಿಜಿಟಲ್ ಸಾಧನಗಳು ಕಾರ್ಯನಿರ್ವಹಿಸುತ್ತವೆ. ಇದೀಗ ಹೊಸ ಹೊಸ ಫೇಕ್ ಆ್ಯಪ್​ಗಳು ಬರುತ್ತಿದ್ದು, ಅವುಗಳ ಕುರಿತು ನಾವು ಜಾಗರೂಕರಾಗಿರಬೇಕು. ಅವುಗಳ ಕುರಿತು ಸರಿಯಾಗಿ ತಿಳಿದೇ ಡೌನ್​ಲೋಡ್ ಮಾಡಬೇಕು ಎಂದು ಸಹ್ಯಾದ್ರಿ ಕಾಲೇಜು ಪ್ರಾಧ್ಯಾಪಕ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಸೈಬರ್ ಕಾನೂನು ತರಬೇತುದಾರ, ಕರ್ನಾಟಕ ಪೊಲೀಸ್ ಅಕಾಡೆಮಿಯ ಸೈಬರ್ ಸೆಕ್ಯುರಿಟಿ ತರಬೇತುದಾರ ಡಾ. ಅನಂತ್ ಪ್ರಭು ಜಿ. ಹೇಳಿದ್ದಾರೆ.

ಆ್ಯಪ್​ಗಳಲ್ಲಿ ಎರಡು ವಿಧಗಳಿದ್ದು, ಒಂದು ಫ್ರೀ ಆ್ಯಪ್ಸ್ ಮತ್ತೊಂದು ಪೇಯ್ಡ್ ಆ್ಯಪ್ಸ್. ಫ್ರೀ ಆ್ಯಪ್ಸ್ ಅಂದರೆ ಎಲ್ಲರಿಗೂ ಇಷ್ಟ ಆಗತ್ತೆ. ಆದರೆ, ಅವುಗಳು ಹಲವಾರು ವಿಧಾನಗಳ ಮೂಲಕ ಈ ಆ್ಯಪ್​ಗಳು ಆದಾಯ ಗಳಿಸುತ್ತವೆ. ಮೊದಲನೆಯದು ಜಾಹೀರಾತುಗಳ ಮೂಲಕ, ಎರಡನೆಯದು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿದ ಕೂಡಲೇ, ಅವುಗಳು ಕೆಲವು ಪರ್ಮಿಶನ್ ಕೇಳುತ್ತವೆ. ಆ ಮೂಲಕ ನಮ್ಮ ಡೇಟಾಗಳನ್ನು ಆಕ್ಸೆಸ್ ಮಾಡಿ ಅವುಗಳನ್ನು ಮಾರ್ಕೆಟಿಂಗ್ ಏಜನ್ಸಿ ಅಥವಾ ಕಂಪನಿಗಳಿಗೆ ಮಾರುವ ಮೂಲಕ ಹಣ ಸಂಪಾದಿಸುತ್ತಾರೆ. ಮೂರನೆಯದು ಆ್ಯಪ್ ಜನಪ್ರಿಯತೆ ಪಡೆಯುತ್ತಿದ್ದಂತೆ, ದೊಡ್ಡ ದೊಡ್ಡ ಕಂಪನಿಗಳೊಂದಿಗೆ ವಿಲೀನಗೊಳ್ಳುವ ಮೂಲಕ ಅಥವಾ ಸಹಯೋಗ ಹೊಂದುವ ಮೂಲಕ ಹಣ ಗಳಿಸುತ್ತಾರೆ ಎಂದು ಅನಂತ್ ಪ್ರಭು ಹೇಳಿದ್ದಾರೆ.

ಡಾ. ಅನಂತ್ ಪ್ರಭು ಜಿ

ಹಾಗಾಗಿ ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿ, ಬಳಕೆ ಮಾಡದೇ ಇದ್ದರೂ ಅವುಗಳು ಬ್ಯಾಗ್ರೌಂಡ್​ನಲ್ಲಿ ಕೆಲಸ ಮಾಡುತ್ತಾ ಇರುತ್ತವೆ. ಇದರಿಂದಾಗಿ ನಾವು ಯಾವುದೇ ಆ್ಯಪ್ ಇನ್​ಸ್ಟಾಲ್ ಮಾಡುವ ಮೊದಲು ಅವುಗಳು ನಮ್ಮ ಡಿಜಿಟಲ್ ಸಾಧನದಲ್ಲಿ ಯಾವುದನ್ನೆಲ್ಲ ಆ್ಯಕ್ಸೆಸ್ ಮಾಡಲು ಪರ್ಮಿಶನ್ ಕೇಳುತ್ತಿವೆ ಎಂದು ಸರಿಯಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ತ್ವರಿತ ಸಾಲ ಒದಗಿಸುವ ಫೇಕ್ ಆ್ಯಪ್​ಗಳು ಕೂಡಾ ಬಂದಿವೆ. ಇವುಗಳ ಮೂಲಕ ಹೈ ಇಂಟರೆಸ್ಟ್ ಹಾಗೂ ಹೈ ಪ್ರೀಮಿಯಂ ಮೂಲಕ ತಕ್ಷಣ ಸಾಲ ನೀಡಲಾಗುತ್ತದೆ. ಸಾಲ ಮರು ಪಾವತಿ ಮಾಡದಿದ್ದಲ್ಲಿ, ನಿಮ್ಮ ಸ್ನೇಹಿತರು, ಹೆತ್ತವರಿಗೆ ಕಿರಿಕಿರಿ ಕೊಡಲು ಪ್ರಾರಂಭಿಸುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಕುರಿತು ಅಪಪ್ರಚಾರ ಮಾಡುತ್ತಾರೆ. ಭಾರತ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಇಂತಹ ಕೆಲವು ಫೇಕ್ ಆ್ಯಪ್​ಗಳನ್ನು ಪ್ಲೇ ಸ್ಟೋರ್​ ಹಾಗೂ ಆ್ಯಪ್​ ಸ್ಟೋರ್​ನಿಂದ ತೆಗೆದಿವೆ. ಆದರೂ ನಾವು ಯಾವುದೇ ಹೊಸ ಆ್ಯಪ್ ಡೌನ್​ಲೋಡ್ ಮಾಡುವ ಮೊದಲು ಅದರ ಕುರಿತು ಜಾಗರೂಕರಾಗಿಬೇಕು, ಸರಿಯಾಗಿ ತಿಳಿದುಕೊಂಡೇ ಡೌನ್​ಲೋಡ್ ಮಾಡಬೇಕು ಎಂದಿದ್ದಾರೆ.

Last Updated : Dec 29, 2020, 8:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.