ETV Bharat / state

ದೊಡ್ಡಕಲ್ಲಸಂದ್ರ ಗ್ರಾಮದ ₹50 ಕೋಟಿ ಮೌಲ್ಯದ ಆಸ್ತಿ ಬಿಬಿಎಂಪಿ ವಶಕ್ಕೆ

ದೊಡ್ಡಕಲ್ಲಸಂದ್ರ ಗ್ರಾಮದಲ್ಲಿನ 50 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬುಧವಾರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡಿದುಕೊಂಡರು.

BBMP
ಸಂಗ್ರಹ ಚಿತ್ರ
author img

By

Published : Jun 21, 2023, 9:54 PM IST

ಬೆಂಗಳೂರು: ದೊಡ್ಡಕಲ್ಲಸಂದ್ರ ಗ್ರಾಮದಲ್ಲಿನ 50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬುಧವಾರ ಪಾಲಿಕೆ ವಶಕ್ಕೆ ಪಡೆಯಿತು. ರಾಜಧಾನಿಯ ದಕ್ಷಿಣ ವಿಭಾಗದ ಬೊಮ್ಮನಹಳ್ಳಿ ವಲಯದ ವಾರ್ಡ್ ನಂ.197ರ ವ್ಯಾಪ್ತಿಯ ನಾರಾಯಣ ನಗರದ 1ನೇ ಹಂತದ ದೊಡ್ಡಕಲ್ಲಸಂದ್ರ ಗ್ರಾಮದ ಸರ್ವೆ ನಂಬರ್ 79/5ಎ ಯಲ್ಲಿ ಆಟದ ಮೈದಾನಕ್ಕೆಂದು ಗುರುತಿಸಿ ಮೀಸಲಿಟ್ಟಿದ್ದ ಜಾಗದ ಬಗ್ಗೆ ಜಗದಾಂಬ ಮತ್ತು ಎನ್ನುವವರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಈ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಉತ್ತರಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ಪ್ರಕಾರ, ಪಾಲಿಕೆ ವಲಯ ಆಯುಕ್ತ ಡಾ. ಹರೀಶ್ ಕುಮಾರ್ ಹಾಗೂ ಜಂಟಿ ಆಯುಕ್ತ ಕೃಷ್ಣಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೊಂಡು ಸುಮಾರು 50,000 ಚದರ ಅಡಿಗಳ (ಆಸ್ತಿ ಮೌಲ್ಯ ಸುಮಾರು 50 ಕೋಟಿ ರೂ) ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

24 ಅನಧಿಕೃತ ರೆಸಾರ್ಟ್​ ತೆರವು: ಗಂಗಾವತಿ ತಾಲೂಕಿನ ಆನೆಗೊಂದಿ ಹೋಬಳಿ ವಿವಿಧ ಗ್ರಾಮಗಳಲ್ಲಿರುವ ಅನಧಿಕೃತ ವಾಣಿಜ್ಯ ಚಟುವಟಿಕೆಗಳಾಗಿರುವ ಹೋಂ ಸ್ಟೇ, ರೆಸಾರ್ಟ್​ ತೆರವು ಕಾರ್ಯಾಚರಣೆ ಮಂಗಳವಾರ ನಡೆದಿತ್ತು. ತಹಸೀಲ್ದಾರ್ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಜರುಗಿದ ಕಾರ್ಯಾಚರಣೆಯಲ್ಲಿ ಜೆಸಿಬಿಗಳ ಘರ್ಜನೆ ಜೋರಾಗಿಯೇ ಇತ್ತು. ಸೋಮವಾರ ಕೆಲವು ರೆಸಾರ್ಟ್​ ಮಾಲೀಕರು ಸ್ವಯಂಪ್ರೇರಣೆಯಿಂದ ತಾವೇ ತಮ್ಮ ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡಿಕೊಂಡಿರುವುದು ಕಂಡುಬಂದಿತ್ತು.

ಬಾಕಿ ಉಳಿದ ವಾಣಿಜ್ಯ ಘಟಕಗಳ ತೆರವು ಕಾರ್ಯ ಮಂಗಳವಾರ ಮುಂದುವರಿದಿತ್ತು. ನಾನಾ ಇಲಾಖೆಯ ಸಿಬ್ಬಂದಿ ಒಳಗೊಂಡಂತೆ ಆರಂಭವಾಗಿದ್ದ ಕಾರ್ಯಾಚರಣೆ ಸಂಜೆವರೆಗೂ ನಡೆದಿತ್ತು. ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಆನೆಗೊಂದಿ ಹಾಗೂ ಇತರೆ 11 ಗ್ರಾಮಗಳಲ್ಲಿ 57 ವಾಣಿಜ್ಯ ಘಟಕಗಳನ್ನು ಗುರುತು ಮಾಡಲಾಗಿತ್ತು. ಈಗಾಗಲೇ 24 ಘಟಕಗಳನ್ನು ಸಂಪೂರ್ಣ ಪ್ರಮಾಣದಲ್ಲಿ ನೆಲಸಮ ಮಾಡಲಾಗಿತ್ತು. ನ್ಯಾಯಾಲಯದ ವಿಚಾರಣೆ ಬಾಕಿ ಉಳಿದಿರುವ ಹಾಗೂ ತೆರವಿಗೆ ತಡೆ ತಂದಿರುವ 28 ವಾಣಿಜ್ಯ ಘಟಕಗಳಿಗೆ ತಾತ್ಕಾಲಿಕ ವಿನಾಯ್ತಿ ಕೊಡಲಾಗಿತ್ತು.

ಕೋರ್ಟ್​ ನ್ಯಾಯಾಲಯದ ಆದೇಶ ಪರಿಗಣಿಸಿ, ಬಾಕಿ ಉಳಿದಿರುವ 28 ಘಟಕಗಳನ್ನು ಮುಂಬರುವ ದಿನಗಳಲ್ಲಿ ತೆರವು ಮಾಡಲಾಗುವುದು. ಜೊತೆಗೆ, ನಾಲ್ಕು ರೆಸಾರ್ಟ್​ಗಳನ್ನು ಸೀಜ್ ಮಾಡಿ ಯಾವುದೇ ವಹಿವಾಟು ನಡೆಸದಂತೆ ಕ್ರಮವಹಿಸಲಾಗಿದೆ. ಇನ್ನೂ ಒಂದು ವಾಣಿಜ್ಯ ಘಟಕವಿದೆ, ಅದನ್ನೂ ತೆರವು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತೆರವು ಕಾರ್ಯದಲ್ಲಿ ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಮಹೆಬೂಬ ಅಲಿ, ರವಿ ನಾಯಕವಾಡಿ, ಆನೆಗೊಂದಿ ಪಿಡಿಒ ಕೃಷ್ಣಪ್ಪ, ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ ಸೇರಿದಂತೆ ಪಿಎಸ್ಐ ಪುಂಡಪ್ಪ ಜಾಧವ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು. ಅಂಜನಾದ್ರಿ ಸುತ್ತ ತಲೆಎತ್ತಿದ್ದ ಅನಧಿಕೃತ ಬಹುತೇಕ ರೆಸಾರ್ಟ್​ಗಳಲ್ಲಿ ಮದ್ಯ, ನಿಷೇಧಿತ ಪದಾರ್ಥಗಳ ಬಳಕೆ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿತ್ತು. ತೆರವು ಕಾರ್ಯಚರಣೆ ಮೂಲಕ ಅಕ್ರಮಕ್ಕೆ ಬ್ರೇಕ್ ಬಿದ್ದಿದೆ ಎಂದು ಆನೆಗೊಂದಿಯ ಮಂಜುನಾಥ ಹೇಳಿದರು.

ಇದನ್ನೂ ಓದಿ: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ನೇರ ದರ್ಶನ ವ್ಯವಸ್ಥೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.