ETV Bharat / state

ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ: ಬಿಜೆಪಿ - ಕಾಂಗ್ರೆಸ್ ಮಧ್ಯೆ ಜಟಾಪಟಿ

ಸ್ವಇ್ಚಚೆಯಿಂದ ಮತಾಂತರಕ್ಕೆ ಯಾವುದೇ ನಿರ್ಬಂಧವೂ ಇಲ್ಲ. ಆದರೆ, ಆಮಿಷ‌, ಒತ್ತಡ, ಬಲವಂತದಿಂದ ಮತಾಂತರ ಆಗಬಾರದು ಎಂದು ವಿಧೇಯಕ ಮಂಡಿಸುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

prohibition-of-conversion-act-presented-in-legislative-council
ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ: ಬಿಜೆಪಿ - ಕಾಂಗ್ರೆಸ್ ಮಧ್ಯೆ ಜಟಾಪಟಿ
author img

By

Published : Sep 15, 2022, 3:31 PM IST

Updated : Sep 15, 2022, 7:50 PM IST

ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2022 ಅನ್ನು ವಿಧಾನ ಪರಿಷತ್ ನಲ್ಲಿ ಮಂಡಿಸಲಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಬಿಸಿ ಬಿಸಿ ಚರ್ಚೆ, ಧಾರ್ಮಿಕ ಪ್ರಸ್ತಾಪಗಳಿಗೆ ಸಾಕ್ಷಿಯಾಯಿತು. ಚರ್ಚೆ ಬೇರೆಯ ಹಾದಿ ಹಿಡಿದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಚಕಮಕಿಯೂ ನಡೆಯಿತು.

ವಿಧಾನ ಪರಿಷತ್ ಕಲಾಪದಲ್ಲಿ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಿಂದ ಅಂಗೀಕಾರಗೊಂಡಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದರು.

ವಿಧೇಯಕದ ಬಗ್ಗೆ ಮಾತನಾಡಿದ ಅವರು, ಬಹಳ ಮಹತ್ವವಾದ ಕಾಯ್ದೆಯಾಗಿದೆ, ಹಿಂದಿನ ಎಲ್ಲ ಸರ್ಕಾರಗಳು ಇದರ ಬಗ್ಗೆ ಚಿಂತನೆ ನಡೆಸಿವೆ. ಸಂವಿಧಾನದ ವಿಧಿ 25ರ ಪ್ರಕಾರ ಅವರವರ ಧರ್ಮದಲ್ಲಿ ಬದುಕುವ ಹಕ್ಕು, ಧರ್ಮ ಪ್ರಚಾರದ ಹಕ್ಕು ನೀಡಿದೆ ಎಂದರು.

ಆದರೆ, ಇತ್ತೀಚಿನ ವರ್ಷದಲ್ಲಿ ಬಲವಂತ, ಆಮಿಷದ ಮತಾಂತರ ಆಗುತ್ತಿದೆ. ಇದರಿಂದ ಶಾಂತಿ ನೆಮ್ಮದಿ ಹಾಳಾಗುತ್ತಿದೆ. ಧರ್ಮೀಯರ ನಡುವೆ ಅನುಮಾನದಿಂದ ನೋಡುವ ಸ್ಥಿತಿ ಬಂದಿದೆ. ನನ್ನ ತಾಯಿ ಮತಾಂತರವಾಗಿದ್ದಾರೆ, ಮನೆ ಒಡೆದಿದೆ ಎಂದು ಶಾಸಕರೊಬ್ಬರೇ ಹೇಳಿದ್ದರು. ಊರು ಊರುಗಳೇ ಒಡೆದಿವೆ‌. ಹಾಗಾಗಿ ಕಾಯ್ದೆ ಮೂಲಕ ರಕ್ಷಣೆ ನೀಡಲು ಕಾಯ್ದೆ ತರಲಾಗಿದೆ ಎಂದು ಹೇಳಿದರು.

ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ

ಮತಾಂತರಕ್ಕೆ ಯಾವುದೇ ನಿರ್ಬಂಧ ಇಲ್ಲ: ಕಾಯ್ದೆಯಲ್ಲಿ ಯಾರ ಧಾರ್ಮಿಕ ಸ್ವಾತಂತ್ರ್ಯ ಕಸಿಯುತ್ತಿಲ್ಲ. ಮತಾಂತರ ಆಗಲು ಯಾವುದೇ ನಿರ್ಬಂಧವೂ ಇಲ್ಲ. ಆದರೆ, ಆಮಿಷ‌, ಒತ್ತಡ, ಬಲವಂತದಿಂದ ಮತಾಂತರ ಆಗಬಾರದು ಎಂದು ವಿಧೇಯಕ ಮಂಡಿಸುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಯಾರೇ ಆಗಲಿ ಸ್ವಇಚ್ಛೆಯಿಂದ ಯಾವುದೇ ಧರ್ಮ ಸೇರುವ ಕುರಿತು ಪ್ರಕಟಿಸಬೇಕು ಮತ್ತು ಮತಾಂತರ ಮಾಡುವವರೂ ಇದನ್ನು ಪ್ರಕಟಿಸಬೇಕು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಲಿದೆ. ಮತಾಂತರ ಆದ ನಂತರ ಆ ವ್ಯಕ್ತಿ ಹಳೆ ಜಾತಿಯ ಸವಲತ್ತು ಕಳೆದುಕೊಳ್ಳಲಿದ್ದಾನೆ. ಹೊಸ ಧರ್ಮದ ಸವಲತ್ತು ಪಡೆಯುತ್ತಾನೆ ಎಂದು ವಿವರಿಸಿದರು.

ದಲಿತರು ಇಲ್ಲಿಯ ಸವಲತ್ತೂ ಪಡೆದು ಹೊಸ ಧರ್ಮದ ಸವಲತ್ತೂ ಪಡೆಯುತ್ತಿದ್ದಾರೆ. ಇದು ಸರಿಯಲ್ಲ, ಧಾರ್ಮಿಕ ಸ್ವಾತಂತ್ರ್ಯ ಕಾಪಾಡಲು ಕಾಯ್ದೆ ತರುತ್ತಿದೆ. ಸ್ವಇಚ್ಛೆಯಂತೆ ಮತಾಂತರಕ್ಕೆ ಯಾವುದೇ ಅಡ್ಡಿಯಿಲ್ಲ. ಹಾಗಾಗಿ ವಿಧೇಯಕ ಅಂಗೀಕರಿಸಬೇಕೆಂದು ಅವರು ಮನವಿ ಮಾಡಿದರು.

ಲೋಕಸಭೆಯಲ್ಲಿ ಮತಾಂತರ ಕಾಯ್ದೆ ಚರ್ಚೆ ಆಗಬೇಕು: ನಂತರ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮಾತನಾಡಿ, ಮತಾಂತರ ಬಿಲ್ ಸಂವಿಧಾನದ ಆಶಯಗಳ ಬಗ್ಗೆ ಇದೆ. ಇದು ಸಂವಿಧಾನದ ತಿದ್ದುಪಡಿ ವ್ಯಾಪ್ತಿಗೆ ಬರಲಿದೆ. ಈ ಸದನದಲ್ಲಿ ಸಂವಿಧಾನ ತಿದ್ದುಪಡಿ ಚರ್ಚೆ ನಡೆಯಬಾರದು. ಲೋಕಸಭೆಯಲ್ಲಿ ಇದು ಚರ್ಚೆ ಆಗಬೇಕೆಂದು ಹೇಳಿದರು.

ಆದರೆ, ಬಹುಮತ ಇದೆ ಎಂದು ಈ ಕಾಯ್ದೆ ತಂದಿದ್ದೀರಿ. ಇದು ಕೆಳಮನೆಯಲ್ಲಿ ಪಾಸ್ ಆಗಿದೆ. ಅದಕ್ಕೆ ಇಲ್ಲಿ ತಂದಿದ್ದೀರಿ. ಹಾಗಾಗಿ ಇಲ್ಲಿ ನಾವು ಚರ್ಚೆ ನಡೆಸಬೇಕಾಯಿತು. ಆದರೆ, ಸುಪ್ರೀಂಕೋರ್ಟ್ ಇದಕ್ಕೆ ಒಪ್ಪಬೇಕಲ್ಲ ಎಂದು ಪ್ರಶ್ನಿಸಿದರು.

ನಂತರ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಇದಾದ ಬಳಿಕ ಪ್ರತಿಪಕ್ಷ ಕಾಂಗ್ರೆಸ್​ ಹಾಗೂ ಆಡಳಿತರೂಢ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ದಾಳಿ ನಡೆಯಿತು. ವಾಗ್ವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಕಲಾಪವನ್ನು ಮುಂದೂಡಿಕೆ ಮಾಡಿದರು.

ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿಂದು ಮತಾಂತರ ನಿಷೇಧ ಮಸೂದೆ ಮಂಡನೆ: ಯಾರು ಏನ್​ ಹೇಳಿದ್ರು?

Last Updated : Sep 15, 2022, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.