ETV Bharat / state

ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕಕ್ಕೆ ಮತೀಯತೆಯ ಕಳಂಕ ಅಂಟುತ್ತಿದೆ: ಸಿಎಂಗೆ ಪತ್ರ ಬರೆದು ಪ್ರಗತಿಪರರ ಆತಂಕ - ಸಿಎಂಗೆ ಬರೆದ ಪತ್ರದಲ್ಲಿ ಪ್ರಗತಿಪರರ ಆತಂಕ

ಪ್ರಗತಿಪರರು ಸರ್ಕಾರಕ್ಕೆ ಬರೆದಿರುವ ಬಹಿರಂಗ ಪತ್ರಕ್ಕೆ ಸಮಾಜಶಾಸ್ತ್ರಜ್ಞರಾದ ಎ.ಆರ್.ವಾಸವಿ ಮತ್ತು ಪ್ರೊ.ಸತೀಶ್ ದೇಶಪಾಂಡೆ, ಕನ್ನಡ ಲೇಖಕರಾದ ವಿವೇಕ ಶಾನಭಾಗ, ಪುರುಷೋತ್ತಮ ಬಿಳಿಮಲೆ ಮತ್ತು ಕೆ.ಪಿ.ಸುರೇಶ, ಹೋರಾಟಗಾರ ಬೆಜವಾಡ ವಿಲ್ಸನ್ ಸಹ ಬೆಂಬಲ ಸೂಚಿಸಿದ್ದಾರೆ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
author img

By

Published : Jan 27, 2022, 6:05 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿದ್ದು, ಇದನ್ನು ತಡೆಯುವಂತೆ ಪ್ರಗತಿಪರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಒತ್ತಾಯಿಸಿದ್ದಾರೆ.

ಇತಿಹಾಸಕಾರರಾದ ರಾಮಚಂದ್ರ ಗುಹಾ, ಪ್ರೊ.ಜಾನಕಿ ನಾಯರ್, ವಿಜ್ಞಾನಿಗಳಾದ ಪ್ರೊ.ಶರದ್ ಚಂದ್ರ ಲೀಲೆ, ಪ್ರೊ.ವಿನೋದ್ ಗೌರ್ ಮತ್ತು ಪ್ರೊ.ವಿದ್ಯಾನಂದ್ ನಂಜುಂಡಯ್ಯ ಸೇರಿದಂತೆ ರಾಜ್ಯದ ಸುಮಾರು 34 ಗಣ್ಯ ವ್ಯಕ್ತಿಗಳು ಸಹಿ ಮಾಡಿದ ಪತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಲುಪಿದೆ.

ಪ್ರಗತಿಪರರು ಬರೆದಿರುವ ಬಹಿರಂಗ ಪತ್ರಕ್ಕೆ ಸಮಾಜಶಾಸ್ತ್ರಜ್ಞರಾದ ಎ.ಆರ್.ವಾಸವಿ ಮತ್ತು ಪ್ರೊ.ಸತೀಶ್ ದೇಶಪಾಂಡೆ, ಕನ್ನಡ ಲೇಖಕರಾದ ವಿವೇಕ ಶಾನಭಾಗ, ಪುರುಷೋತ್ತಮ ಬಿಳಿಮಲೆ ಮತ್ತು ಕೆ.ಪಿ.ಸುರೇಶ, ಹೋರಾಟಗಾರ ಬೆಜವಾಡ ವಿಲ್ಸನ್ ಸಹ ಬೆಂಬಲ ಸೂಚಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಕೆಲ ತಿಂಗಳಿಂದ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹಲವರ ದಾರುಣ ಹತ್ಯೆಗಳು ಆಗಿವೆ. ಜನರ ಭಾವನೆಯನ್ನು ಕೆರಳಿಸುವಂತಹ ಭಾಷಣಗಳನ್ನು ಹಲವು ಮುಖಂಡರು ಮಾಡುತ್ತಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳ ಮೇಲೆ ಸಾರ್ವಜನಿಕ ಬೆದರಿಕೆ ಮತ್ತು ದಾಳಿಗಳು ನಡೆದಿವೆ.

ಮಾನಗೇಡಿ ಹತ್ಯೆಗಳು, ಅನೈತಿಕ ಪೊಲೀಸ್ ಗಿರಿ, ಮಹಿಳೆಯರ ಮೇಲೆ ಶಾಸಕರೇ ಅವಮಾನಕಾರಿ ಹೇಳಿಕೆ ನೀಡುವಂಥ ವಿದ್ಯಮಾನಗಳು ನಡೆದಿವೆ. ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವುದು ಸಾಕಷ್ಟು ಆತಂಕ ಮೂಡಿಸಿದ್ದು, ತಾವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ನಾವು ಹಿರಿಯ ವಿಜ್ಞಾನಿಗಳು, ಬರಹಗಾರರು, ಶಿಕ್ಷಣ ತಜ್ಞರು, ಕಲಾವಿದರು ಮತ್ತು ವಕೀಲರ ಗುಂಪಾಗಿದ್ದು, ಕರ್ನಾಟಕದ ಹದಗೆಡುತ್ತಿರುವ ಆಡಳಿತ ಮತ್ತು ಧರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಆಗಾಗ್ಗೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಾವು ಕಳವಳದಿಂದ ಬರೆಯುತ್ತಿದ್ದೇವೆ ಎಂದು ಹೇಳಿಕೊಳ್ಳಲಾಗಿದೆ.

ವಿವಿಧ ಧಾರ್ಮಿಕ ಗುಂಪುಗಳ ನಡುವೆ ಘರ್ಷಣೆ ಗಳ ಜೊತೆ ಹಗೆತನದ ಕಲಹಗಳು ನಡೆದಿವೆ. ಇದೆಲ್ಲಕ್ಕೂ ಬಿಜೆಪಿಯ ಕೆಲ ಶಾಸಕರು ಸಂವಿಧಾನ ಬಾಹಿರವಾಗಿ ನೀಡಿದ ಹೇಳಿಕೆಗಳು ಕಾರಣವಾಗಿವೆ. ಇಂಥವರ ವಿರುದ್ಧ ಆಡಳಿತ ಯಂತ್ರ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಸಹ ಕಾರಣವಾಗಿದ್ದು ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ.

ಸುದೀರ್ಘ ಅವಧಿಯಿಂದ ರಾಜ್ಯಕ್ಕೆ ಇದ್ದ ಉತ್ತಮ ಹೆಸರು ಇದೀಗ ಹಾಳಾಗಿದೆ. ಪ್ರಗತಿಪರ ರಾಜ್ಯಕ್ಕೆ ಜಾತಿಯತೆಯ ಕಳಂಕ ಅಂಟಿದೆ. ಸೌಹಾರ್ದಯುತ ಬಾಳ್ವೆ ಮಾಡುವ ಮೂಲಕ ಪ್ರಗತಿಗೆ ನಾಂದಿ ಹಾಡಿದ ರಾಜ್ಯದಲ್ಲಿ ಇಂದು ಇಂತಹ ಬೆಳವಣಿಗೆಗಳು ನಡೆಯುತ್ತಿರುವುದು ಉತ್ತಮ ಸಂಕೇತವಲ್ಲ. ನಮ್ಮ ರಾಜ್ಯದ ಸಾಂಸ್ಕೃತಿಕ ಚರಿತ್ರೆಯೂ ಧಾರ್ಮಿಕ ಸಹಿಷ್ಣುತೆ ಮತ್ತು ಬಹುತ್ವಗಳನ್ನು ಸಂಭ್ರಮಿಸುವ ಚರಿತ್ರೆಯಾಗಿದೆ.

ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ, ಶಿಶುನಾಳ ಶರೀಫರು ಮುಂತಾದವರೇ ನಮ್ಮ ನಾಯಕರು. ಬೇಂದ್ರೆ, ಕುವೆಂಪು ಸಹಿತ ನಮ್ಮ ಸಾಹಿತಿಗಳು ಬಹು ಸಂಸ್ಕೃತಿಯ ಚಹರೆಗಳನ್ನೇ ಆಧಾರವಾಗಿಟ್ಟುಕೊಂಡ ಕರ್ನಾಟಕತ್ವವನ್ನು ಸಂಭ್ರಮಿಸಿದವರು. ಈ ಬಹುಸಂಸ್ಕೃತಿಯ ತಳಹದಿಯ ಮೇಲೆ ನಿರ್ಮಾಣಗೊಂಡ ರಾಜ್ಯಕ್ಕೆ ತಟ್ಟಬಾರದು ಕಳಂಕ ತಟ್ಟಿದೆ ಎಂದು ಬೇಸರ ವ್ಯಕ್ತಪಡಿಸಲಾಗಿದೆ.

ಇತ್ತೀಚೆಗಿನ ರಾಜ್ಯದಲ್ಲಿ ಜಾರಿಗೆ ಬಂದ ಗೋ ಸಂರಕ್ಷಣಾ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆಗಳು ಧಾರ್ಮಿಕ ಅಲ್ಪಸಂಖ್ಯಾತರ ಆರ್ಥಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ದಮನಿಸುವ ಕಾಯ್ದೆಗಳಾಗಿವೆ. ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆಗಳು ನಮ್ಮ ರಾಜ್ಯದ ಮೇರು ಗುರುತುಗಳಾಗಿ ಉಳಿದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಆರ್ಥಿಕ, ಆಡಳಿತಾತ್ಮಕ ಮತ್ತು ರಾಜಕೀಯ ಆಯಾಮಗಳಲ್ಲಿ ಕರ್ನಾಟಕವು ತನ್ನ ಒಕ್ಕೂಟ ಭಾಗಿದಾರಿಯ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಹೂಡಿಕೆ, ಮತ್ತು ಉದ್ಯಮಗಳ ತಾಣವಾಗಿ ಕರ್ನಾಟಕಕ್ಕಿರುವ ಖ್ಯಾತಿಯೂ ಕೆಡುವುದರಲ್ಲಿ ಸಂಶಯವಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾಗಳ ಯಾರಿಂದಲೋ ಪಡೆದ ಸಲಹೆಗಳನ್ನು ಅನುಷ್ಠಾನಗೊಳಿಸುವುದು ರಾಜ್ಯದ ಮತ್ತು ರಾಜ್ಯದ ಪ್ರಜೆಗಳ ಹಿತಾಸಕ್ತಿಗೆ ಮಾರಕ. ಎಲ್ಲಾ ಕಾಯ್ದೆ, ಕಾರ್ಯಕ್ರಮ, ನೀತಿಗಳ ಬಗ್ಗೆ ಪ್ರಜಾಸತ್ತಾತ್ಮಕವಾಗಿ ಪಾರದರ್ಶಕವಾಗಿ ಚರ್ಚಿಸಬೇಕಾದ್ದು ಚುನಾಯಿತ ಪ್ರತಿನಿಧಿಗಳಾಗಿ ಮುಖ್ಯಮಂತ್ರಿಗಳ ಜವಾಬ್ದಾರಿಯಾಗಿದೆ.

ಈ ಸವಾಲುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯವೇ ಭವಿಷ್ಯದಲ್ಲಿ ನಿಮ್ಮನ್ನು ಅಳೆಯುವ ಮಾನದಂಡಗಳು. ನೀವು ಸಾಮಾಜಿಕ ಸೌಹಾರ್ದತೆ, ನ್ಯಾಯಯುತ ಕಾನೂನುಗಳು ಮತ್ತು ರಾಜ್ಯಯಂತ್ರದ ಪ್ರಜಾಸತ್ತಾತ್ಮಕ ನಿರ್ವಹಣೆಯನ್ನು ಜಾರಿಗೊಳಿಸುತ್ತೀರೆಂಬ ಆಶಯ ನಮಗಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.