ETV Bharat / state

ವೀಕೆಂಡ್ ಮಸ್ತಿಗೆ ಬ್ರೇಕ್​... ವರ್ತೂರಿನಲ್ಲಿ ಮಿನಿ ಫಾರೆಸ್ಟ್​ ನಿರ್ಮಾಣಕ್ಕೆ ಟೆಕ್ಕಿಗಳಿಂದ ನಾಂದಿ - Brigade group

ಬ್ರಿಗೇಡ್ ಗ್ರೂಪ್  45 ಎಕರೆ ಜಾಗದಲ್ಲಿ ಟೆಕ್ಕಿಗಳು ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ. ಬ್ರಿಗೇಡ್ ಗ್ರೂಪ್​ನ ಸಿಎಸ್ಆರ್ ಫಂಡ್​ನಲ್ಲಿ 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಿನಿ ಫಾರೆಸ್ಟ್​ ನಿರ್ಮಾಣಕ್ಕೆ ನಾಂದಿ
author img

By

Published : Aug 25, 2019, 2:39 AM IST

ಬೆಂಗಳೂರು: ವೀಕೆಂಡ್​ ಬಂದ್ರೆ ಸಾಕು ಮೋಜು-ಮಸ್ತಿಗಾಗಿ ಒಂದಲ್ಲಾ ಇನ್ನೊಂದು ಪ್ಲ್ಯಾನ್​ ಮಾಡ್ತಾನೆ ಇರ್ತೀವಿ. ಆದರೆ ಇಲ್ಲೊಂದು ಟೆಕ್ಕಿಗಳ ತಂಡ, ರಜೆಯನ್ನು ಪರಿಸರ ಕಾಳಜಿಯಲ್ಲಿ ಕಳೆದು ಗಮನ ಸೆಳೆದಿದೆ.

ಉದ್ಯಾನ ನಗರಿಯಲ್ಲಿ ಇತ್ತೀಚೆಗೆ ಗಿಡ-ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ಈ ಮಧ್ಯೆ ಟೆಕ್ಕಿಗಳ ಬ್ರಿಗೇಡ್ ಗ್ರೂಪ್ 45 ಎಕರೆ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವ ಕೆಲಸಕ್ಕೆ ಮುಂದಾಗಿದೆ. ಬ್ರಿಗೇಡ್ ಗ್ರೂಪ್​​ನ ಸಿಎಸ್ಆರ್ ಫಂಡ್​​ನಲ್ಲಿ 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೂರಾರು ಮಕ್ಕಳು ಹಾಗೂ ನಿವಾಸಿಗಳು ಸೇರಿ ನಗರದ ವರ್ತೂರಿನಲ್ಲಿ ಸಸಿಗಳನ್ನು ನೆಟ್ಟು ಪ್ರಕೃತಿ ಉಳಿವಿಗೆ ಅಳಿಲು ಸೇವೆ ಮಾಡಿದ್ದಾರೆ.

ಮಿನಿ ಫಾರೆಸ್ಟ್​ ನಿರ್ಮಾಣಕ್ಕೆ ನಾಂದಿ

ಈ ಕಾರ್ಯಕ್ರಮದಲ್ಲಿ ವರ್ತೂರು ಸುತ್ತಮುತ್ತಲಿನ ಅಪಾರ್ಟ್ಮೆಂಟ್ ನಿವಾಸಿಗಳು ಸಹ ಪಾಲ್ಗೊಂಡಿದ್ದರು. 100 ಕ್ಕೂ ಹೆಚ್ಚು ಬಗೆಯ 10 ಸಾವಿರ ಸಸಿಗಳನ್ನುನೆಡಲಾಗಿದ್ದು, ಇನ್ನು 6 ತಿಂಗಳ ಅವಧಿಯಲ್ಲಿ ಈ ಸಸಿಗಳು ಮರಗಳಾಗಿ ಬೆಳೆದು, ಅರಣ್ಯ ವಾತಾವರಣ ನಿರ್ಮಾಣವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ರಜೆ ಸಿಕ್ಕರೆ ಸಾಕು ಸಿನಿಮಾ​, ಪಾರ್ಟಿ, ಟೂರ್​, ಟ್ರಿಪ್​ ಎಂದು ಎಂಜಾಯ್​ ಮಾಡುವ ಇಂದಿನ ಯುವ ಪೀಳಿಗೆಗೆ ಈ ಟೆಕ್ಕಿಗಳು ಮಾದರಿಯಾಗಿದ್ದಾರೆ.

Intro:ವರ್ತೂರು.

ವರ್ತೂರಿನಲ್ಲಿ ಮಿನಿ ಪಾರೆಸ್ಟ್ ನಿರ್ಮಾಣಕ್ಕೆ ಮುಂದಾದ ಸಾರ್ವಜನಿಕರು

ವಿಕೇಂಡ್ ಬಂತೇಂದರೇ ಟೆಕ್ಕಿಗಳು ರಜೆ ಕಳೆಯುವಲ್ಲಿ ನಿರತರಾಗಿರುತ್ತಾರೆ, ಆದರೆ ಇಲ್ಲೊಂದು ಟೆಕ್ಕಿಗಳ ಗುಂಪು ಬೆಂಗಳೂರನ್ನು ಗಾರ್ಡನ್ ಸಿಟಿಯೆಂಬ ಎಂಬ ಹೆಗ್ಗಳಿಕೆಗೆ ಮರಳಿ ತರಲು ಇದೀಗ ಮತ್ತೆ ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸಿಸುವ ಮೂಲ ಬೆಂಗಳೂರಿಗೆ ಮತ್ತೆ ಗಾರ್ಡನ್ ಸಿಟಿ ಎಂಬ ಹೆಸರು ಬರುವಂತೆ ಮಾಡಲು ಇಲ್ಲೊಂದು ಏರಿಯಾದ ಜನರು ಮುಂದಾಗಿದ್ದಾರೆ.

ನೂರಾರು ಮಕ್ಕಳು ಹಾಗೂ ನಿವಾಸಿಗಳು 45 ಏಕರೆ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವ ಕೆಲಸಕ್ಕೆ ಮುಂದಾಗಿರುವ ದೃಶ್ಯಗಳು ಕಂಡು ಬಂದದ್ದು ಬೆಂಗಳೂರಿನ ವರ್ತೂರಿನಲ್ಲಿ. ಬ್ರಿಗೇಡ್ ಗ್ರೂಪ್ ನ ಸಿಎಸ್ಆರ್ ಪಂಡ್ ನಲ್ಲಿ 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಕೆಂಡ್ ನಲ್ಲಿ ಮೋಜು ಮಸ್ತಿ ಮಾಡಿಕೊಂಡು ಕಾಲಕಳೆಯುವ ಬದಲು ಈ ಕಾರ್ಯದಲ್ಲಿ ತೊಡಗಿರುವುದು ಮನಸ್ಸಿಗೆ ಸಂತಸ ತಂದಿದೆಯೆಂದು ಸಸಿ ನೆಡುವ ಕಾರ್ಯದಲ್ಲಿ ತೊಡಗಿದ್ದ ಮಹಿಳೆ ಹರ್ಷ ವ್ಯಕ್ತಪಡಿಸಿದ್ದಾರೆ.

Body:ಈ ಕಾರ್ಯಕ್ರಮದಲ್ಲಿ ವರ್ತೂರು ಸುತ್ತಮುತ್ತಲಿನ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ನಿವಾಸಿಗಳು ಭಾಗವಹಿಸಿದ್ದು ವಿಶೇಷವಾಗಿದ್ದು 100 ಕ್ಕು ಹೆಚ್ಚು ಬಗೆಯ 10 ಸಾವಿರ ಸಸಿಗಳನ್ನು ನೆಡಲಾಗಿದ್ದು, ಇನ್ನು ಆರು ತಿಂಗಳ ಅವದಿಯಲ್ಲಿ ಈ ಸಸಿಗಳು ಮರಗಳಾಗಿ ಬೆಳೆದ ಅರಣ್ಯ ವಾತಾವರಣ ನಿರ್ಮಾಣವಾಗಿರುವುದರಿಂದ ಮನುಷ್ಯನಿಗೆ ಶುದ್ದ ಗಾಳಿ ಸಿಗುವುದರ ಜೊತೆಗೆ, ಪಕ್ಷಿಗಳ ವಾಸಕ್ಕು ಅನುಕೂಲವಾಗಿರುವುದರಿಂದ ಬೆಂಗಳೂರಿನೆಲ್ಲೆಡೆ ಇಂತಹ ಕಾರ್ಯಗಳು ನಡೆಯಬೇಕೆಂದು ಪರಿಸರ ಪ್ರೇಮಿಯೊಬ್ಬರು ತಿಳಿಸಿದ್ದಾರೆ.

Conclusion:ಒಟ್ಟಾರೆ ದಿನದಿಂದ ದಿನಕ್ಕೆ ಬೆಂಗಳೂರಿನ ನಾಗರೀಕರಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗಿ ಎಲ್ಲೆಡೆ ಮರಗಿಡಗಳನ್ನು ಬೆಳೆಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚು ಹೆಚ್ಚು ನಡೆಯುವ ಮೂಲಕ ಪರಿಸರ ವೃದ್ದಿಯಾಗಲಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.