ETV Bharat / state

ಆಡಿಯೋ ಚಾಟ್, ಅರುಣಾಕುಮಾರಿ ಪರಿಚಯ: ದರ್ಶನ್​ ಆರೋಪಕ್ಕೆ ಉಮಾಪತಿ ಸ್ಪಷ್ಟನೆ ಏನು? - ಉಮಾಪತಿ ಸುದ್ದಿಗೋಷ್ಟಿ

ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ನಿನ್ನೆ ಮಾಧ್ಯಮಗೋಷ್ಟಿ ನಡೆಸಿ ಕೆಲವೊಂದು ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ನಿರ್ಮಾಪಕ ಉಮಾಪತಿ ಇಂದು ಸ್ಪಷ್ಟನೆ ಕೊಟ್ಟಿದ್ದಾರೆ.

Producer Umapati Press Meet
ಉಮಾಪತಿ ಸುದ್ದಿಗೋಷ್ಟಿ
author img

By

Published : Jul 13, 2021, 11:20 AM IST

Updated : Jul 13, 2021, 1:19 PM IST

ಬೆಂಗಳೂರು : ನಟ ದರ್ಶನ್​ ಹೆಸರಲ್ಲಿ 25 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಪ್ರಕರಣದಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಹೆಸರು ತಳಕು ಹಾಕಿಕೊಂಡಿದ್ದು, ನಿನ್ನೆಯಷ್ಟೇ ನಟ ದರ್ಶನ್ ಆರೋಪಿ ಅರುಣಾಕುಮಾರಿ ಜೊತೆ ಉಮಾಪತಿ ಮಾತಾನಾಡಿರುವ ಆಡಿಯೋ ಬಿಡುಗಡೆ ಮಾಡಿದ್ದರು. ಅಲ್ಲದೆ, ದರ್ಶನ್ ಮಾಧ್ಯಮಗೋಷ್ಟಿ ವೇಳೆ ಉಮಾಪತಿ ವಿರುದ್ಧ ಕೆಲವೊಂದು ಆರೋಪಗಳನ್ನು ಮಾಡಿದ್ದರು.

ಈ ಸಂಬಂಧ ಇಂದು ನಗರದ ಹೆಚ್​.ಎಸ್​.ಆರ್ ಲೇಔಟ್​ನ ಮನೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ನಿರ್ಮಾಪಕ ಉಮಾಪತಿ, ದರ್ಶನ್ ಬಿಡುಗಡೆ ಮಾಡಿರುವ ಆಡಿಯೋ ಹಾಗೂ ಆರೋಪಿ ಅರುಣಾಕುಮಾರಿ ಜೊತೆಗಿನ ಪರಿಚಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಿರ್ಮಾಪಕ ಉಮಾಪತಿ ಸ್ಪಷ್ಟನೆ

ಓದಿ : ಚೆಂಡು ಉಮಾಪತಿ ಅಂಗಳದಲ್ಲಿದೆ, ಗೋಲು​ ಹೊಡೆಯುವುದು ಅವರಿಗೆ ಬಿಟ್ಟಿದ್ದು: 25 ಕೋಟಿ ವಂಚನೆ ಕೇಸ್​ಗೆ ದಚ್ಚು ಕಿಡಿ

ಅರುಣಾ ಕುಮಾರಿ ಏಪ್ರಿಲ್​ನಿಂದ ನನಗೆ ಪರಿಚಯ ಇದ್ದಾರೆ. ಮೇ ಮೂರನೇ ವಾರದಲ್ಲಿ ದರ್ಶನ್ ಲೋನ್ ವಿಚಾರವಾಗಿ ಶ್ಯೂರಿಟಿ ಹಾಕಿದ ಬಗ್ಗೆ ಮಾತನಾಡಿದ್ದರು. ಆಗ ನಾನು ದರ್ಶನ್ ಸರ್​ಗೆ ಕಾಲ್ ಮಾಡಿ ಆ ಬಗ್ಗೆ ಕೇಳಿದ್ದೆ. ಇದೇ ವಿಚಾರವಾಗಿ ದರ್ಶನ್ ಅವರ ಜೊತೆ ಪದೇ ಪದೇ ಕಾಲ್​ ಮಾಡಿ ರಿಕ್ವೆಸ್ಟ್ ಮಾಡಿದ್ದೇನೆ. ದರ್ಶನ್ ಅವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ನಾನು ಅಶ್ಲೀಲವಾಗಿ ಮಾತನಾಡಿಲ್ಲ ಎಂದು ಉಮಾಪತಿ ಹೇಳಿದ್ದಾರೆ.

ನಾನು ಏನೇ ಬಂದರೂ ಫೇಸ್ ಮಾಡೋಕೆ ಸಿದ್ದನಿದ್ದೇನೆ. ದರ್ಶನ್ ಸರ್ ಮತ್ತು ನನ್ನ ಕುಟುಂಬದವರಿಗೂ ಇದನ್ನೇ ಹೇಳಿದ್ದೇನೆ. ನನ್ನ ಕಡೆಯಿಂದ ತಪ್ಪಿದೆಯಾ ಎಂದು ನನ್ನ ತಾಯಿ ಮತ್ತು ಹೆಂಡತಿಯನ್ನೂ ಕೇಳಿದ್ದೇನೆ. ಅಷ್ಟೂ ಚಾಟ್​ನಲ್ಲಿ ನಾನು ಎಲ್ಲೂ ಅಶ್ಲೀಲ ಪದ ಉಪಯೋಗಿಸಿಲ್ಲ. ಇದನ್ನು ಘಂಟಾಘೋಷವಾಗಿ ಹೇಳುತ್ತೇನೆ ಎಂದಿದ್ದಾರೆ.

ದರ್ಶನ್ ಅವರು ನನ್ನ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅವರನ್ನೂ ಕಳೆದುಕೊಳ್ಳಲು ನನಗೂ ಇಷ್ಟ ಇಲ್ಲ. ಹಾಗಾಗಿಯೇ, ಜೂನ್ 17 ರಂದು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಉಮಾಪತಿ ತಿಳಿಸಿದ್ದಾರೆ.

Last Updated : Jul 13, 2021, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.