ETV Bharat / state

1000 ಕೋಟಿ ಮೌಲ್ಯದ ಬಿಡಿಎ ಸ್ವತ್ತು ಕಾನೂನು ಬಾಹಿರವಾಗಿ ಕಬಳಿಕೆ: ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ - ಬೊಮ್ಮನಹಳ್ಳಿ ಕಾಂಗ್ರೆಸ್ ವಕ್ತಾರ ಅನಿಲ್ ರೆಡ್ಡಿ

ಬಿಡಿಎ ಸ್ವತ್ತನ್ನು ಕಾನೂನು ಬಾಹಿರವಾಗಿ ಕಬಳಿಕೆ ಮಾಡಲಾಗಿದ್ದು, ಇದರಲ್ಲಿ ಶಾಸಕರ ಕೈವಾಡ ಇದೆ ಎಂದು ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರು ಆರೋಪಿಸಿದ್ದಾರೆ.

ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ
ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ
author img

By

Published : Mar 9, 2023, 5:58 PM IST

Updated : Mar 9, 2023, 6:16 PM IST

ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ

ಬೆಂಗಳೂರು : ರಾಜಧಾನಿಯಲ್ಲಿ ಸುಮಾರು 1000 ಕೋಟಿ ಮೌಲ್ಯದ ಬಿಡಿಎ ಸ್ವತ್ತನ್ನು ಕಾನೂನು ಬಾಹಿರವಾಗಿ ಕಬಳಿಕೆ ಮಾಡಲಾಗಿದೆ. ಇದರಲ್ಲಿ ಸ್ಥಳೀಯ ಶಾಸಕರ ಕೈವಾಡ ಇದೆ ಎಂದು ಸಿನಿಮಾ ನಿರ್ಮಾಪಕ, ಒಕ್ಕಲಿಗರ ಸಂಘದ ಪದಾಧಿಕಾರಿ ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಉಮಾಪತಿ ಶ್ರೀನಿವಾಸಗೌಡ ಅವರು ಆರೋಪಿಸಿದರು.

ನಗರದ ಗೋಲ್ಡ್ ಫಿಂಚ್ ಹೋಟೆಲ್​​ನಲ್ಲಿ ಬಿಡಿಎ ವಿರುದ್ಧದ 1000 ಕೋಟಿ ರೂ ಭೂ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾತನಾಡಿದ ಉಮಾಪತಿ ಶ್ರೀನಿವಾಸಗೌಡ, ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಗ್ರಾಮಕ್ಕೆ ಸೇರಿದ ಒಟ್ಟು 25 ಎಕರೆಗೂ ಹೆಚ್ಚು ಸುಮಾರು 1 ಸಾವಿರ ಕೋಟಿಗಳಿಗೂ ಹೆಚ್ಚಿನ ಬೆಲೆ ಬಾಳುವ ಜಾಗವನ್ನು ಬಿಡಿಎ ಅಧಿಕಾರಿಗಳು ಪ್ರಭಾವಿಗಳ ಜೊತೆ ಶಾಮೀಲಾಗಿ ಭೂಕಬಳಿಕೆ ಮಾಡಿದ್ದಾರೆ ಎಂದು ದೂರಿದರು.

1986-87ರಲ್ಲಿ ಪ್ರಾಥಮಿಕ ಅಧಿಸೂಚನೆ ಆಗಿ 1998ರ ಅಂತಿಮ ಅಧಿಸೂಚನೆಯಾಗಿ ಬಡಾವಣೆ ನಿರ್ಮಾಣಗೊಂಡಿದೆ. ಈ ಬಡಾವಣೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರ ತನ್ನ ಅಂತಿಮ ಅಧಿಸೂಚನೆ ಹೊರಡಿಸಿ ಭೂಪರಿಹಾರ ನೀಡಿದೆ. ರಸ್ತೆ, ಯುಜಿಡಿ, ವಿದ್ಯುತ್‌ ಸೇರಿದಂತೆ ಸುಮಾರು 30 ವರ್ಷಗಳ ಹಿಂದೆಯೇ ₹ 16 ಕೋಟಿ ರೂ. ಬಡಾವಣೆಗಾಗಿ ಖರ್ಚು ಮಾಡಲಾಗಿತ್ತು. ಹೀಗಿದ್ದೂ ಕೆಲವರು ಬಿಡಿಎ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್ ವಿಭಾಗೀಯ ಪೀಠ ಆದೇಶವನ್ನು ಎತ್ತಿಹಿಡಿದು ಬಿಡಿಎ ಪರವಾಗಿ ಆದೇಶ ನೀಡಿತ್ತು ಎಂದು ಹೇಳಿದರು.

ಹೈಕೋರ್ಟ್ ತೀರ್ಪು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ : 2012ರಲ್ಲಿ ಈ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದಾಗ ವಿಭಾಗೀಯ ಪೀಠದ ಆದೇಶದ ಮನವಿಯನ್ನು ಪುರಸ್ಕರಿಸಿತ್ತು. ಈಗಾಗಲೇ 30 ವರ್ಷಗಳಲ್ಲಿ ಬಡಾವಣೆ ನಿರ್ಮಾಣವಾಗಿದ್ದು, ನಿವೇಶನ ಹಂಚಿಕೆಗಳಂತಹ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದಿಲ್ಲ ಎಂದು ಮನವಿ ತಿರಸ್ಕರಿಸಿತ್ತು ಎಂದು ಮಾಹಿತಿ ನೀಡಿದರು.

ಹೊಸ ಆದೇಶ ತಂದ ಅಧಿಕಾರಿಗಳು : ಆದರೂ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳನ್ನೆಲ್ಲ ಮುಚ್ಚಿಟ್ಟು ತಮ್ಮ ಪ್ರಭಾವ ಬೀರಿದ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳು, ಕಾನೂನು ವಿಭಾಗದ ನ್ಯೂನತೆಗಳನ್ನ ಬಳಸಿಕೊಂಡು ಅಧಿಸೂಚನೆ ಅಲ್ಲದೇ ಬೇರೆ ಸರ್ವೆ ನಂಬರ್ ಅನ್ನು ಕೋರ್ಟ್ ಮುಂದೆ ತಂದು ಹೊಸ ಆದೇಶದ ಮೂಲಕ ಪ್ರಾಧಿಕಾರದ ಜಾಗವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದರು.

ಕಾಂಪೌಂಡ್ ನಿರ್ಮಿಸಿ ಅಕ್ರಮ ಮಾರಾಟ : ಸದ್ಯ ಯಾರಿಗೂ ಒಳಹೋಗಲು ಬಿಡದೇ ಸುತ್ತಲೂ ಕಾಂಪೌಂಡ್ ಹಾಕಿ ರೆವಿನ್ಯೂ ಬಡಾವಣೆ ನಿರ್ಮಿಸಿ ಅಡಿಗೆ 12 ಸಾವಿರದಂತೆ ಮಾರಾಟ ಮಾಡುತ್ತಿದ್ದಾರೆ ಸದ್ಯದಲ್ಲೇ ಅಪಾರ್ಟ್​ಮೆಂಟ್‌ಗಳು ತಲೆ ಎತ್ತಲಿವೆ ಎಂದರು.

ಪ್ರಭಾವಿ ಬಂಡವಾಳಶಾಹಿಗಳು ಹಾಗೂ ಪ್ರಭಾವಿ ರಾಜಕಾರಣಿಗಳು ಇಂದು ಕಾನೂನಿನ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯಲ್ಲಿ ಬಿಟ್ಟುಬಿಟ್ಟಿದ್ದಾರೆ. ಹಗರಣದಲ್ಲಿ ಶಾಸಕರ ತಂದೆ, ಪತ್ನಿ ಸೇರಿದಂತೆ ಪ್ರಭಾವಿಗಳು ಇದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ವಕೀಲರಾದ ವಿವೇಕ್, ಬೊಮ್ಮನಹಳ್ಳಿ ಕಾಂಗ್ರೆಸ್ ವಕ್ತಾರ ಅನಿಲ್ ರೆಡ್ಡಿ ಸೇರಿದಂತೆ ಪ್ರಮುಖರು ಹಾಜರಿದ್ದರು.

ಇದನ್ನೂ ಓದಿ : ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ: ಹೆಚ್​ಡಿಕೆ

Last Updated : Mar 9, 2023, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.