ETV Bharat / state

ಡ್ಯೂಟಿ ಬಿಟ್ಟು ಇಸ್ಪೀಟ್ ಆಡುತ್ತಿದ್ದ 7 ಮಂದಿ ಪೊಲೀಸರ ವಿರುದ್ಧ ತನಿಖೆಗೆ ಆದೇಶ

ತನಿಖೆ ವೇಳೆ ಆರೋಪಿಗಳು ಸ್ನೇಹಿತನ‌ ಬರ್ತ್​​​​ ಡೇ ಪಾರ್ಟಿ ಹಿನ್ನೆಲೆಯಲ್ಲಿ ಇಸ್ಪೀಟ್ ಆಡಿದ್ದಾಗಿ ತಿಳಿಸಿದ್ದಾರೆ. ಸದ್ಯ ಡಿಸಿಪಿ ಸೂಚನೆಯಂತೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಕುರಿತು 7 ಮಂದಿ ಮೇಲೆ ಇಲಾಖಾ ತನಿಖೆಗೆ ಡಿಸಿಪಿ ಹರೀಶ್ ಪಾಂಡೆ ಆದೇಶಿಸಿದ್ದಾರೆ.

probe-against-7-policemen-those-who-involved-in-playing-cards-in-hotel
ಇಸ್ಪೀಟ್ ಆಡುತ್ತಿದ್ದ 7 ಮಂದಿ ಪೊಲೀಸರ ವಿರುದ್ಧ ತನಿಖೆಗೆ ಆದೇಶ
author img

By

Published : Oct 28, 2020, 1:15 PM IST

ಬೆಂಗಳೂರು: ಕರ್ತವ್ಯ ಬಿಟ್ಟು ಹೋಟೆಲ್​​​ನಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ದಾಳಿ ನಡೆಸಿ 7 ಮಂದಿ ಪೊಲೀಸರು ಸೇರಿ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಜೆ.ಪಿ ನಗರದ 6ನೇ ಬ್ಲಾಕ್​ನಲ್ಲಿರುವ ನಂದಿನಿ ಹೋಟೆಲ್​ನಲ್ಲಿ ಇಸ್ಪೀಟ್​ ಆಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಪೊಲೀಸ್ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ.

ರಾತ್ರಿ 12:45ರ ಸುಮಾರಿಗೆ ಹೋಟೆಲ್ ಮೇಲೆ ದಾಳಿ ಮಾಡಿ 52,540 ರೂಪಾಯಿ ಹಣ ಹಾಗೂ ಇಸ್ಪೀಟ್ ಕಾರ್ಡ್ಸ್​​ ವಶಕ್ಕೆ ಪಡೆದಿದ್ದಾರೆ. ಹಾಗೆ ಇಸ್ಪೀಟ್ ಆಟದಲ್ಲಿ ಭಾಗಿಯಾದ ಮಲ್ಲೇಶ್,‌ ಲೋಕೇಶ್, ಗವಿ ಸಿದ್ದಪ್ಪ, ಗೋವಿಂದ, ಸತೀಶ್, ಚಂದ್ರಶೇಖರ್, ಶಿವಲಿಂಗೇಗೌಡ, ಗಿರೀಶ್ ಹಾಗೂ ರಾಮೇಗೌಡ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ 9 ಆರೋಪಿಗಳ ಪೈಕಿ 7 ಜನ ಪೊಲೀಸರು ಅಂತ ತಿಳಿದು ಬಂದಿದೆ.

ಇನ್ನು ತನಿಖೆ ವೇಳೆ ಆರೋಪಿಗಳು ಸ್ನೇಹಿತನ‌ ಬರ್ತ್​​​​ ಡೇ ಪಾರ್ಟಿ ಹಿನ್ನೆಲೆ ಇಸ್ಪೀಟ್ ಆಡಿದ್ದಾಗಿ ತಿಳಿಸಿದ್ದಾರೆ. ಸದ್ಯ ಡಿಸಿಪಿ ಸೂಚನೆಯಂತೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಮೇಲೆ ಇಲಾಖಾ ತನಿಖೆಗೆ ಡಿಸಿಪಿ ಹರೀಶ್ ಪಾಂಡೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.