ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೂಲ್ಯಳನ್ನು ಇಂದು ಕೋರ್ಟ್ಗೆ ಹಾಜರು ಪಡಿಸುವುದು ಕಷ್ಟಸಾಧ್ಯವಾಗಿದೆ.
ಅಧೀನ ನ್ಯಾಯಾಲಯದಲ್ಲಿ ಹಾಜರುಪಡಿಸಿದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಓಪನ್ ಕೋರ್ಟ್ಗೆ ಹಾಜರುಪಡಿಸಿದ್ರೆ, ಗಲಾಟೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸೋದು ಬೇಡ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೂಲ್ಯ ವಿಚಾರಣೆ ಮಾಡಿ ಎಂದು ಪೊಲೀಸರು ನ್ಯಾಯಾಧೀಶರಿಗೆ ಪತ್ರ ರವಾನೆ ಮಾಡಿದ್ದಾರೆ.
ಅಮೂಲ್ಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗ್ಲೇ ಬಹಳಷ್ಟು ಆಕ್ರೋಶಗಳು ಕೇಳಿ ಬರ್ತಿದೆ. ಹಾಗೆ ನಿನ್ನೆ ಹುಬ್ಬಳ್ಳಿಯಲ್ಲಿ ನ್ಯಾಯಾಲಯದ ಎದುರು ದೇಶದ್ರೋಹ ಪ್ರಕರಣ ಸಂಬಂಧ ವಕಾಲತ್ತು ಮಾಡಲು ಬಂದ ವಕೀಲರ ನಡುವೆ ಗಲಾಟೆಯಾಗಿತ್ತು. ಹೀಗಾಗಿ ಅಮೂಲ್ಯರನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದ್ರೆ, ಕಾನೂನು ತೊಂದರೆಯಾಗುತ್ತೆ ಎಂದು ಪೊಲೀಸರು ಈ ರೀತಿ ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ವಿಚಾರಣೆಗೆ 10 ದಿನ ಪೊಲೀಸ್ ವಶಕ್ಕೆ ನೀಡುವಂತೆ ಎಸ್ಐಟಿ ಮನವಿ ಮಾಡಿತ್ತು. ನಿನ್ನೆ ಅರ್ಜಿ ವಿಚಾರಣೆ ನಡೆಸಿದ 5 ನೇ ಎಸಿಎಂಎಂ ಕೋರ್ಟ್ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಕೋರ್ಟ್ಗೆ ಹಾಜರು ಪಡಿಸಲು ಆದೇಶ ಮಾಡಿತ್ತು. ಆದರೆ ಕಾನೂನು ಸುವ್ಯವಸ್ಥೆ ತೊಂದರೆ ಹಿನ್ನೆಲೆ ಇಂದು ನ್ಯಾಯಾಧೀಶರಿಗೆ ಪೊಲೀಸರು ಪತ್ರ ಬರೆದು ಮನವಿ ಮಾಡಿದ್ದಾರೆ.