ETV Bharat / state

ಪ್ರೊ ಕಬಡ್ಡಿ ಲೀಗ್ 2022 : ಯೋಧಾಸ್‌ಗೆ ಸೋಲು, ರೋಚಕ ಪಂದ್ಯ ಗೆದ್ದ ದಬಾಂಗ್‌ ಡೆಲ್ಲಿ - pro kabaddi league 2022

ನಿನ್ನೆ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡ ಯುಪಿ ಯೋಧಾಸ್‌ ವಿರುದ್ಧ 44-42 ಅಂತರದಲ್ಲಿ ಜಯ ಗಳಿಸಿ ಅಜೇಯವಾಗಿ ಮುನ್ನಡೆದಿದೆ.

kabaddi
ಪ್ರೊ ಕಬಡ್ಡಿ ಲೀಗ್ 2022
author img

By

Published : Oct 13, 2022, 7:22 AM IST

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಂತ ರೋಚಕವಾಗಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡ ಯುಪಿ ಯೋಧಾಸ್‌ ವಿರುದ್ಧ 44-42 ಅಂತರದಲ್ಲಿ ಜಯ ಗಳಿಸಿ ಅಜೇಯವಾಗಿ ಮುನ್ನಡೆದಿದೆ. ಆಡಿದ ಸತತ ಮೂರು ಪಂದ್ಯಗಳನ್ನೂ ಡೆಲ್ಲಿ ಜಯ ಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದೆ.

dabang delhi beat up yoddhas
ದಬಾಂಗ್‌ ಡೆಲ್ಲಿ VS ಯುಪಿ ಯೋಧಾಸ್‌

ನಾಯಕ ನವೀನ್‌ ಕುಮಾರ್‌ (13) ಹಾಗೂ ಮಂಜಿತ್‌ (12) ಅವರ ಸೂಪರ್‌ 10 ನೆರವಿನಿಂದ ದಬಾಂಗ್‌ ಡೆಲ್ಲಿ ಪಂದ್ಯ ಗೆದ್ದು ಟ್ರೋಫಿ ಗೆಲ್ಲುವ ಫೇವರೆಟ್ ತಂಡ ಎಂಬುದನ್ನು ಸಾಬೀತುಪಡಿಸಿತು.

dabang delhi beat up yoddhas
ದಬಾಂಗ್‌ ಡೆಲ್ಲಿ VS ಯುಪಿ ಯೋಧಾಸ್‌

ಯುಪಿ ಯೋಧಾಸ್ ಪರ ಸುರಿಂದರ್ ಗಿಲ್‌ 21 ರೈಡಿಂಗ್‌ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಆದರೆ, ಪ್ರಸಕ್ತ ಋತುವಿನಲ್ಲಿ ಪಂದ್ಯವೊಂದರಲ್ಲೇ ಅತಿ ಹೆಚ್ಚು ರೈಡಿಂಗ್‌ ಅಂಕ ಗಳಿಸಿದ ಗೌರವಕ್ಕೆ ಸುರಿಂದರ್‌ ಗಿಲ್‌ ಪಾತ್ರರಾಗಿದ್ದು ವಿಶೇಷವಾಗಿತ್ತು.

dabang delhi beat up yoddhas
ದಬಾಂಗ್‌ ಡೆಲ್ಲಿ VS ಯುಪಿ ಯೋಧಾಸ್‌

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ ವಿರುದ್ಧ ಬೆಂಗಾಲ್‌ ವಾರಿಯರ್ಸ್‌ಗೆ ಬೃಹತ್‌ ಅಂತರದ ಜಯ

ಪ್ರಥಮಾರ್ಧದಲ್ಲಿ ಯೋಧಾಸ್‌ ಮುನ್ನಡೆ: ಸುರೇಂದರ್‌ ಗಿಲ್‌ (10) ಅವರ ಸೂಪರ್‌ 10 ನೆರವಿನಿಂದ ಯುಪಿ ಯೋಧಾಸ್‌ ತಂಡ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 25-19 ಅಂತರದಲ್ಲಿ ಮುನ್ನಡೆ ಸಾಧಿಸಿತು. ಯುಪಿ ಯೋಧಾಸ್‌ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆರಂಭದಲ್ಲೇ ದಬಾಂಗ್‌ ಡೆಲ್ಲಿಯ ನಾಯಕ ನವೀನ್‌ ಎಕ್ಸ್‌ಪ್ರೆಸ್‌ ರನ್ನು ನಿಯಂತ್ರಿಸುವಲ್ಲಿ ಯೋಧಾಸ್‌ ಯಶಸ್ವಿಯಾಯಿತು. ಈ ನಿಯಂತ್ರಣವೇ ಯೋಧಾಸ್‌ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಪ್ರದೀಪ್‌ ನರ್ವಾಲ್‌ 5 ಅಂಕಗಳನ್ನು ಗಳಿಸಿ ತಂಡದ ಬೃಹತ್‌ ಮುನ್ನಡೆಗೆ ನೆರವಾದರು.

dabang delhi beat up yoddhas
ದಬಾಂಗ್‌ ಡೆಲ್ಲಿ VS ಯುಪಿ ಯೋಧಾಸ್‌

ಕೊನೆಯ ಹಂತದಲ್ಲಿ ತಂಡಕ್ಕೆ ನೆರವಾದ ನಾಯಕ ನವೀನ್‌: ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಪ್ರಥಮಾರ್ಧದ ಕೊನೆಯ ಕ್ಷಣದ ವರಗೆಗೂ ಬೃಹತ್‌ ಅಂತರದಲ್ಲಿ ಹಿನ್ನಡೆ ಕಂಡಿತ್ತು. ಆದರೆ, ಯುವ ಆಟಗಾರ ಮಂಜೀರ್‌ ರೈಡಿಂಗ್‌ನಲ್ಲಿ 4 ಅಂಕಗಳನ್ನು ಗಳಿಸಿ ಡೆಲ್ಲಿ ತಂಡ ಚೇತರಿಸಿಕೊಳ್ಳುವಂತೆ ಮಾಡಿದರು. ನಾಯಕ ನವೀನ್‌ ಎಕ್ಸ್‌ಪ್ರೆಸ್‌ ಕೊನೆಯ ನಿಮಿಷಗಳಲ್ಲಿ ತಂಡಕ್ಕೆ ನೆರವಾಗಿ 8 ಅಂಕಗಳನ್ನು ಗಳಿಸಿ ನಾಯಕನ ಜವಾಬ್ದಾರಿ ಮೆರೆದರು.

ಇದನ್ನೂ ಓದಿ: PRO Kabaddi League 2022: ತೆಲುಗು ಟೈಟಾನ್ಸ್‌, ಹರಿಯಾಣ ಸ್ಟೀಲರ್ಸ್‌ ತಂಡಗಳಿಗೆ ಜಯ

ನವೀನ್‌ ಕುಮಾರ್‌ ಸಾಧನೆ: ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ ಪ್ರೋ ಕಬಡ್ಡಿ ಲೀಗ್‌ ಇತಿಹಾಸಲ್ಲಿ 45ನೇ ಬಾರಿಗೆ ಸೂಪರ್‌ 10 ಸಾಧನೆ ಮಾಡಿದ ಕೀರ್ತಿಗೆ ಬುಧವಾರ ಪಾತ್ರರಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.