ETV Bharat / state

ಪ್ರೋ ಕಬಡ್ಡಿ ಲೀಗ್‌: ಬೆಂಗಾಲ್‌ ವಾರಿಯರ್ಸ್‌ಗೆ ಸೋಲುಣಿಸಿದ ಹರಿಯಾಣ ಸ್ಟೀಲರ್ಸ್‌

ಪ್ರೋ ಕಬಡ್ಡಿ ಲೀಗ್‌.. ಮಂಜಿತ್‌ ಅದ್ಭುತ ರೈಡಿಂಗ್‌. ಬೆಂಗಾಲ್‌ ವಾರಿಯರ್ಸ್‌ಗೆ ಸೋಲುಣಿಸಿದ ಹರಿಯಾಣ ಸ್ಟೀಲರ್ಸ್‌.

Pro Kabaddi 2022
ಬೆಂಗಾಲ್‌ ವಾರಿಯರ್ಸ್‌ಗೆ ಸೋಲುಣಿಸಿದ ಹರಿಯಾಣ ಸ್ಟೀಲರ್ಸ್‌
author img

By

Published : Oct 9, 2022, 1:01 PM IST

ಬೆಂಗಳೂರು: ಮಂಜಿತ್‌ ಅದ್ಭುತ ರೈಡಿಂಗ್‌ (19 ಅಂಕಗಳು) ನೆರವಿನಿಂದ ಹರಿಯಾಣ ಸ್ಟೀಲರ್ಸ್‌ ತಂಡ ಮಾಜಿ ಚಾಂಪಿಯನ್‌ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 41-33 ಅಂಕಗಳ ಅಂತರದಲ್ಲಿ ಜಯ ಗಳಿಸಿ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಶನಿವಾರದ ಮೂರನೇಯ ಪಂದ್ಯದಲ್ಲಿ ಜಯದ ಶುಭಾರಂಭ ಕಂಡಿತು.

Pro Kabaddi 2022
ಬೆಂಗಾಲ್‌ ವಾರಿಯರ್ಸ್‌ಗೆ ಸೋಲುಣಿಸಿದ ಹರಿಯಾಣ ಸ್ಟೀಲರ್ಸ್‌

ತಡ ರಾತ್ರಿ ನಡೆದ ಪಂದ್ಯದಲ್ಲಿ ಪ್ರಥಮಾರ್ಧದಲ್ಲಿ 12-13 ಅಂಕಗಳ ಅಂತರದಲ್ಲಿ ಹಿನ್ನೆಡೆ ಕಂಡಿದ್ದ ಸ್ಟೀಲರ್ಸ್‌ ತಂಡ ದ್ವಿತಿಯಾರ್ಧದಲ್ಲಿ ಪಂದ್ಯದ ಗತಿಯನ್ನೇ ಬದಲಿಸಿತು. ಮಂಜಿತ್‌ ಹಾಗೂ ನಿತಿನ್‌ ರಾವಲ್‌ (7 ಅಂಕಗಳು) ಒಟ್ಟು 26 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು.

ಮಂಜಿತ್‌ ಜಯದ ರೂವಾರಿ: ಪ್ರಥಮಾರ್ಧದಲ್ಲಿ ಕೇವಲ 12 ಅಂಕಗಳನ್ನು ಗಳಿಸಿದ್ದ ಸ್ಟೀಲರ್ಸ್‌ ದ್ವಿತಿಯಾರ್ಧದಲ್ಲಿ 29 ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿತು. ಆರಂಭದಲ್ಲಿ ಸ್ಟೀಲರ್ಸ್‌ ರೈಡರ್‌ಗಳು ಯಶಸ್ಸು ಕಾಣುವಲ್ಲಿ ವಿಫಲರಾಗಿ ಕೇವಲ 6 ಅಂಕ ಗಳಿಸಿದ್ದರು. ಆದರೆ ದ್ವಿತಿಯಾರ್ಧದಲ್ಲಿ ಪಂದ್ಯದ ಚಿತ್ರಣವೇ ಬದಲು ಮಾಡಿದ ಮಂಜಿತ್‌ ಜಯದ ರೂವಾರಿ ಎನಿಸಿದರು.

ಬೆಂಗಾಲ್‌ ವಾರಿಯರ್ಸ್‌ ತಂಡದ ಅನುಭವಿ ಆಟಗಾರರ ವೈಫಲ್ಯ ಸೋಲಿಗೆ ಪ್ರಮುಖ ಕಾರಣವಾಯಿತು. ನಾಯಕ ಮಣಿಂದರ್‌ ಸಿಂಗ್‌ ರೈಡಿಂಗ್‌ನಲ್ಲಿ ಕೇವಲ 7 ಅಂಕಗಳನ್ನು ಗಳಿಸಿ ನಿರಾಸೆ ಮೂಡಿಸಿದರು. ಪ್ರಥಮಾರ್ಧದಲ್ಲಿ ಟ್ಯಾಕಲ್‌ನಲ್ಲಿ ಮಿಂಚಿದ್ದ ಗಿರೀಶ್‌ ಮಾರುತಿ ದ್ವಿತಿಯಾರ್ಧಲ್ಲಿ ನೈಜ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಪೈಪೂಟಿಯಿಂದ ಕೂಡಿದ ಪ್ರಥಮಾರ್ಧ: ಬೆಂಗಾಲ್‌ ವಾರಿಯರ್ಸ್‌ ಹಾಗೂ ಹರಿಯಾಣ ಸ್ಟೀಲರ್ಸ್‌ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ ಉತ್ತಮ ಪೈಪೋಟಿಯಿಂದ ಕೂಡಿದ್ದು 13-12 ಅಂತರದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡ ಮುನ್ನಡೆ ಕಂಡಿದೆ. ಇದುವರೆಗಿನ ಪಂದ್ಯಗಳಲ್ಲಿ ರೈಡರ್‌ಗಳು ಹೆಚ್ಚು ಅಂಕ ಗಳಿಸುತ್ತಿದ್ದರು. ಆದರೆ ಮುನ್ನಡೆ ಕಂಡ ಬೆಂಗಾಲ್‌ ವಾರಿಯರ್ಸ್‌ ತಂಡದ ಗಿರೀಶ್‌ ಮಾರುತಿ ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಗಳಿಸಿ ಗಮನ ಸೆಳೆದರು.

ತಂಡದ ಮುನ್ನಡೆಯಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು. ಸ್ಟೀಲರ್ಸ್‌ ತಂಡದ ನಾಯಕ ಮಣಿಂದರ್‌ ಸಿಂಗ್‌ ರೈಡಿಂಗ್‌ನಲ್ಲಿ ಸಂಪೂರ್ಣ ವಿಫಲರಾದದ್ದು ತಂಡದ ಅಂಕ ಗಳಿಕೆಯಲ್ಲಿ ನಿಧಾನಗತಿಗೆ ಕಾರಣವಾಯಿತು. 8 ಬಾರಿ ರೈಡ್‌ ಮಾಡಿದರೂ ಮಣಿಂದರ್‌ ಗಳಿಸಿದ್ದು ಕೇವಲ 1 ಅಂಕ. ಅನುಭವಿ ಆಟಗಾರ ದೀಪಕ್‌ ನಿವಾಸ್‌ ಹೂಡ 6 ರೈಡಿಂಗ್‌ನಲ್ಲಿ ಗಳಿಸಿದ್ದು ಶೂನ್ಯ ಸಂಪಾದನೆ. ಶ್ರೀಕಾಂತ್‌ ಜಾದವ್‌ 2 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು.

ಜೋಗಿಂದರ್‌ ನರ್ವಾಲ್‌ ಕೂಡ ಪ್ರಥಮಾರ್ಧದಲ್ಲಿ ವಿಫಲ: ಕೊನೆಯ ಕ್ಷಣದಲ್ಲಿ ಬದಲಿ ಆಟಗಾರನಾಗಿ ಅಂಗಣಕ್ಕಿಳಿದ ಮಂಜುನಾಥ್‌ ಗೌಡ 2 ಅಮೂಲ್ಯ ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಹರಿಯಾಣ ಸ್ಟೀಲರ್ಸ್‌ ತಂಡದ ನಾಯಕ ಜೋಗಿಂದರ್‌ ನರ್ವಾಲ್‌ ಕೂಡ ಪ್ರಥಮಾರ್ಧದಲ್ಲಿ ಖಾತೆ ತೆರೆಯುವಲ್ಲಿ ವಿಫಲರಾದರು. ಮಂಜಿತ್‌ ಹಾಗೂ ನಿತಿನ್‌ ರಾವತ್‌ ಗಳಿಸಿದ ರೈಡಿಂಗ್‌ ಅಂಕಗಳು ತಂಡ ಉತ್ತಮ ರೀತಿಯಲ್ಲಿ ಹೋರಾಟ ನೀಡಲು ನೆರವಾಯಿತು.

ಇದನ್ನೂ ಓದಿ: Pro Kabaddi: ಗುಜರಾತ್ ಜೈಂಟ್ಸ್‌ ಹಾಗೂ ತಮಿಳು ತಲೈವಾಸ್ ರೋಚಕ ಕಾದಾಟ... ಕೊನೆಗೆ ಟೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.