ETV Bharat / state

ಪಿಎಸ್‌ಐ ನೇಮಕಾತಿ ಅಕ್ರಮ: ಗೃಹ ಸಚಿವರ ರಾಜೀನಾಮೆಗೆ ಪ್ರಿಯಾಂಕ್ ಖರ್ಗೆ ಆಗ್ರಹ - ಪಿಎಸ್​ಐ ನೇಮಕಾತಿ ಪರೀಕ್ಷೆಯು ಅಕ್ರಮ

ಗೃಹ ಸಚಿವ ಆಗರ ಜ್ಞಾನೇಂದ್ರ ವ್ಯಕ್ತಿಗತವಾಗಿ ಒಳ್ಳೆಯ ಮನುಷ್ಯ ಆಗಿರಬಹುದು. ಆದರೆ, ಅವರು ಒಳ್ಳೆ ಗೃಹ ಸಚಿವರಂತೂ ಅಲ್ಲ ಎಂದು ಪ್ರಿಯಾಂಕ್​ ಖರ್ಗೆ ಟೀಕಿಸಿದರು.

ಗೃಹ ಸಚಿವರ ರಾಜೀನಾಮೆಗೆ ಪ್ರಿಯಾಂಕ್​ ಖರ್ಗೆ ಆಗ್ರಹ

author img

By

Published : Apr 17, 2022, 4:19 PM IST

ಬೆಂಗಳೂರು: ಪಿಎಸ್​ಐ ನೇಮಕಾತಿ ಪರೀಕ್ಷೆಯು ಅಕ್ರಮ ಐದಾರು ನೂರು ಕೋಟಿಯ ಬಹುದೊಡ್ಡ ಹಗರಣವಾಗಿದೆ. ಕೆಲ ಅಭ್ಯರ್ಥಿಗಳಿಂದ 60-70 ಲಕ್ಷ ರೂ. ಹಣ ಪಡೆದು ಅಕ್ರಮ ಎಸಗಲಾಗಿದೆ. ಅಲ್ಲದೇ, ಕಲಬುರಗಿಯಲ್ಲಿ ಪರೀಕ್ಷೆಯ ಅಕ್ರಮ ನಡೆದಿದ್ದು ಜ್ಞಾನಜ್ಯೋತಿ ಎಂಬ ಶಾಲೆಯಲ್ಲಿ. ಈ ಶಾಲೆ ಬಿಜೆಪಿ ಮುಖಂಡರಿಗೆ ಸೇರಿದೆ. ಹೀಗಾಗಿ ಈ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕಾದರೆ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್​ ಮುಖಂಡ, ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಆಗ್ರಹಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಇನ್​​ಸ್ಪೆಕ್ಟರ್​ ಭರ್ತಿಗೆ 545 ಮತ್ತು 400 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಮೊದಲ ಹಂತದ 545 ಹುದ್ದೆಗಳಿಗೆ 1.28 ಲಕ್ಷ ಅರ್ಜಿಗಳು ಬಂದಿದ್ದು, 2021ರ ಅ.3ರಂದು ಲಿಖಿತ ಪರೀಕ್ಷೆ ನಡೆಯುತ್ತದೆ. ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದಾಗ ಅಭ್ಯರ್ಥಿಗಳಿಗೆ ಇದರಲ್ಲಿ ಅಕ್ರಮದ ಅನುಮಾನ ದಟ್ಟವಾಗುತ್ತದೆ. ಆದರೆ, ಗೃಹ ಸಚಿವರು ಅಕ್ರಮ ನಡೆದಿಲ್ಲ ಅಂತಾ 6 ಬಾರಿ ಅಧಿವೇಶನದಲ್ಲಿ ಸುಳ್ಳು ಹೇಳಿದ್ದಾರೆ. ಒಬ್ಬ ಸಚಿವರಾಗಿ ಅವರ ಇಲಾಖೆಯ ಬಗ್ಗೆಯೇ ಮಾಹಿತಿ ಇರಲ್ವಾ ಎಂದು ಪ್ರಶ್ನಿಸಿದರು.

ಸಚಿವ ಪ್ರಭು ಚೌಹಾಣ್ ಒಂದೇ ತಾಲೂಕಿನ 43 ಮಂದಿ ಆಯ್ಕೆ ಆಗಿದ್ದಾರೆ ಅಂತಾ ಸಿಎಂಗೆ ದೂರು ನೀಡಲಾಗಿತ್ತು. ಸಚಿವರೇ ದೂರು ನೀಡಿದ್ದರೂ ಕ್ರಮವಾಗಲ್ಲ. ಇತ್ತ, ಅಭ್ಯರ್ಥಿಗಳು, ಬ್ಲ್ಯೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಡಿಜಿ ಐಜಿಯವರಿಗೆ ದೂರು ನೀಡುತ್ತಾರೆ. ಆದರೂ ಕೂಡಾ ಡಿಜಿ ಐಜಿ ದೂರನ್ನು ಕಡೆಗಣಿಸಿದ್ದಾರೆ. ದೂರು ಕೊಟ್ಟವರು ಅಸೂಯೆಯಿಂದ ದೂರು ನೀಡಿದ್ದಾರೆ ಅಂತಾ ಗೃಹ ಸಚಿವರು ಪ್ರತಿಕ್ರಿಯೆ ನೀಡುತ್ತಾರೆ.

ಪಿಎಸ್ಐ ಅಭ್ಯರ್ಥಿಗಳನ್ನು ದಾರಿ ತಪ್ಪಿಸುವುದಕ್ಕೆ ಗೃಹ ಸಚಿವರು ಹೇಳಿಕೆ ಕೊಟ್ಟಿದ್ದರು. ಈಗ ನೇಮಕಾತಿಯಲ್ಲಿ ಬಹಳ ಅಕ್ರಮ ನಡೆದಿದೆ ಅಂತಾ ಒಪ್ಕೊಂಡು ತನಿಖೆ ಮಾಡುತ್ತಿದೆ. ತನಿಗೆ ಒಪ್ಪಿಸಿ ಏನೋ ದೊಡ್ಡ ಸಾಧನೆ ಮಾಡಿಬಿಟ್ಟಿದ್ದೀವಿ ಅಂತಾ ತಾವೇ ಬೆನ್ನು ತಟ್ಟಿಕೊಳ್ತಿದ್ದಾರೆ. ಆದರೆ, ಈ ಹಗರಣದಲ್ಲಿ ಸರ್ಕಾರವೇ ಭಾಗಿಯಾಗಿದೆ. ಇಲ್ಲದೇ ಇದ್ದರೆ ಇಂತಹ ಹಗರಣ ನಡೆಯಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.

ಕಲಬುರಗಿಯಲ್ಲಿ ಪರೀಕ್ಷೆಯ ಅಕ್ರಮ ನಡೆದ ಜ್ಞಾನಜ್ಯೋತಿ ಶಾಲೆಯ ಬಿಜೆಪಿ ಮುಖಂಡರಿಗೆ ಸೇರಿದೆ. ಅವರದ್ದೇ ಮನೆಗೆ ಗೃಹ ಸಚಿವರು ಭೇಟಿ ನೀಡಿ ಆರತಿ ಎತ್ತಿಸಿಕೊಂಡಿದ್ದರು. ಅಕ್ರಮಗಳು ನಡೆಯುತ್ತಿರುವಾಗ ಗೃಹ ಸಚಿವರು ಯಾಕೆ ಭೇಟಿ ಕೊಟ್ಟಿದ್ದರು?. ಈಗ ಅವರೆಲ್ಲ ಪರಾರಿಯಾಗಿದ್ದಾರೆ ಅಂತಾ ಗೃಹ ಸಚಿವರಿಗೆ ಗೊತ್ತಿಲ್ವಾ?. ಬಿಜೆಪಿಯ ಜಿಲ್ಲಾ ಪದಾಧಿಕಾರಿಗಳು ಕೂಡಾ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ.. ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆಗೆ ಸಿಐಡಿ ತಂಡ ದಾಳಿ.. ಲೇಡಿ ಲೀಡರ್‌ ನಾಪತ್ತೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.