ETV Bharat / state

ಖಾಸಗೀಕರಣದಿಂದ ಸಾರ್ವಜನಿಕ ಸೇವೆಗಳು ದುರ್ಬಲ: ಸಿಪಿಐಎಂ

ಭಾರತೀಯ ರೈಲ್ವೆ ನಮ್ಮ ದೇಶವನ್ನು ಒಂದುಗೂಡಿಸುವ ಮತ್ತು ನಮ್ಮ ಕೋಟ್ಯಂತರ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಅತ್ಯಂತ ಮಹತ್ವದ ಜಾಲವಾಗಿದೆ. ನಮ್ಮ ಜನಗಳ ಜೀವನೋಪಾಯ ರೈಲ್ವೆಯನ್ನು ಅವಲಂಬಿಸಿದೆ. ಇಂತಹ ಖಾಸಗೀಕರಣ ಭಾರತದ ಸ್ವಾವಲಂಬನೆಯ ಆಧಾರವನ್ನೇ ಶಿಥಿಲಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದು ಉದ್ಯೋಗಾವಕಾಶಗಳನ್ನು ನಿರ್ಮಿಸುತ್ತದೆ ಎಂಬ ಸರ್ಕಾರದ ತರ್ಕವನ್ನು ಪ್ರಶ್ನಿಸಿದೆ.

ಸಿಪಿಐಎಂ
ಸಿಪಿಐಎಂ
author img

By

Published : Jul 2, 2020, 11:20 PM IST

ಬೆಂಗಳೂರು: ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡಿ, ಇದರ ಜಾಲವನ್ನು ಬಳಸಿಕೊಂಡು ಖಾಸಗಿ ಹೂಡಿಕೆದಾರರಿಗೆ ಪ್ರಯಾಣಿಕ ರೈಲುಗಳನ್ನು ಓಡಿಸಲು ಅವಕಾಶ ನೀಡುವ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ವಿರೋಧಿಸಿದೆ.

ಇದು ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಸಂಭವಿಸುತ್ತಿದೆ. ಶತಮಾನಗಳಿಂದ ಕಟ್ಟಿದ ಮೂಲ ರಚನೆಗಳನ್ನು ಹೊಂದಿರುವ ಒಂದು ಜಾಲವನ್ನು ಬಳಸಿಕೊಂಡು ಖಾಸಗಿಯವರು ಪ್ರಯಾಣಿಕ ರೈಲುಗಳನ್ನು ಓಡಿಸಿ ಲಾಭ ಗಳಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಭಾರತೀಯ ರೈಲ್ವೆ ನಮ್ಮ ದೇಶವನ್ನು ಒಂದುಗೂಡಿಸುವ ಮತ್ತು ನಮ್ಮ ಕೋಟ್ಯಂತರ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಅತ್ಯಂತ ಮಹತ್ವದ ಜಾಲವಾಗಿದೆ. ನಮ್ಮ ಜನಗಳ ಜೀವನೋಪಾಯ ರೈಲ್ವೆಯನ್ನು ಅವಲಂಬಿಸಿದೆ. ಇಂತಹ ಖಾಸಗೀಕರಣ ಭಾರತದ ಸ್ವಾವಲಂಬನೆಯ ಆಧಾರವನ್ನೇ ಶಿಥಿಲಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದು ಉದ್ಯೋಗಾವಕಾಶಗಳನ್ನು ನಿರ್ಮಿಸುತ್ತದೆ ಎಂಬ ಸರ್ಕಾರದ ತರ್ಕವನ್ನು ಪ್ರಶ್ನಿಸಿದೆ.

ಖಾಸಗೀಕರಣದಿಂದ ಉದ್ಯೋಗ ನಷ್ಟ:

ಖಾಸಗೀಕರಣದ ಅನುಭವಗಳು ತದ್ವಿರುದ್ಧವಾಗಿವೆ. ವಾಸ್ತವವಾಗಿ ಖಾಸಗೀಕರಣ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟಗಳನ್ನು ಉಂಟು ಮಾಡುತ್ತದೆ ಮತ್ತು ಕೋಟ್ಯಂತರ ನೌಕರರಲ್ಲಿ ಅಭದ್ರತೆಯನ್ನು ಉಂಟು ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳು ಈ ರೀತಿಯಲ್ಲಿ ಸಾರ್ವಜನಿಕ ಸಾರಿಗೆಯ ಖಾಸಗೀಕರಣ ಜನಗಳ ಮೇಲೆ ಅಭೂತಪೂರ್ವ ಕಷ್ಟಗಳನ್ನು ಮತ್ತು ಹೊರೆಗಳನ್ನು ಹಾಕಿದೆ ಎಂಬ ಅಂತಾ​ರಾಷ್ಟ್ರೀಯ ಅನುಭವಗಳಿಂದ ಪಾಠ ಕಲಿಯಲು ನಿರಾಕರಿಸುತ್ತಿದ್ದಾರೆ. ಭಾರತೀಯ ರೈಲ್ವೆ ಒಂದು ಸಾರ್ವಜನಿಕ ಸೇವೆ. ಅದು ಲಾಭ ಮಾಡುವ ಉದ್ದಿಮೆ ಅಲ್ಲ. ಅದರ ಸ್ವರೂಪವನ್ನು ಬದಲಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದೆ.

ಪ್ರತಿಕೂಲ ಪರಿಣಾಮ:

ಈ ನಿರ್ಧಾರ ದೇಶ ಮತ್ತು ಜನತೆ ವೇಗವಾಗಿ ಹೆಚ್ಚುತ್ತಿರುವ ಕೋವಿಡ್ ಮಹಾಮಾರಿಯನ್ನು ಎದುರಿಸುವ ಗಂಭೀರ ಪ್ರಯತ್ನಗಳನ್ನು ನಡೆಸುತ್ತಿರುವಾಗ ಬಂದಿದೆ. ಜಾಗತಿಕವಾಗಿಯೂ, ನಮ್ಮ ದೇಶದಲ್ಲೂ ಆರೋಗ್ಯ ಸೌಲಭ್ಯಗಳ ಲಂಗುಲಗಾಮಿಲ್ಲದ ಖಾಸಗೀಕರಣ ಹೇಗೆ ಈ ವೈರಸ್ ಮೇಲಿನ ಹೋರಾಟಕ್ಕೆ ಅಡಚಣೆಗಳನ್ನು ಉಂಟು ಮಾಡಿದೆ. ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎಂಬುದನ್ನು ನಾವೀಗ ನೋಡುತ್ತಿದ್ದೇವೆ. ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಸೇವೆಗಳು ಅವನ್ನು ಗಟ್ಟಿಗೊಳಿಸಬೇಕು. ಖಾಸಗೀಕರಣದ ಮೂಲಕ ದುರ್ಬಲಗೊಳಿಸಬಾರದು ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.