ETV Bharat / state

'ಶಕ್ತಿ ಯೋಜನೆ' ವಿರುದ್ಧ ಖಾಸಗಿ ವಾಹನ ಚಾಲಕರ ಮುಷ್ಕರ: ಬೇಡಿಕೆಗಳೇನು? - ಈಟಿವಿ ಭಾರತ ಕನ್ನಡ

ರಾಜ್ಯ ಸರ್ಕಾರದ 'ಶಕ್ತಿ ಯೋಜನೆ'ಯ ವಿರುದ್ಧ ನಾಳೆ ಬೆಂಗಳೂರು ಬಂದ್‍ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಕರೆ ಕೊಟ್ಟಿದೆ. ಮುಷ್ಕರದ ಹಿಂದಿರುವ ಬೇಡಿಕೆಗಳೇನು?

tomorrow Private Transporters call for bengaluru bandh
'ಶಕ್ತಿ ಯೋಜನೆ' ವಿರುದ್ಧ ಖಾಸಗಿ ವಾಹನ ಚಾಲಕರ ಒಕ್ಕೂಟದಿಂದ ಮುಷ್ಕರಕ್ಕೆ ಕರೆ
author img

By ETV Bharat Karnataka Team

Published : Sep 10, 2023, 1:03 PM IST

ಬೆಂಗಳೂರು: ಸೆಪ್ಟೆಂಬರ್ 11ರಂದು (ನಾಳೆ) ಬೆಂಗಳೂರು ಬಂದ್‍ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಸಿದ್ಧವಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ನಷ್ಟ ಅನುಭವಿಸುತ್ತಿರುವುದಾಗಿ ಹೇಳುತ್ತಿರುವ ಖಾಸಗಿ ವಾಹನ ಚಾಲಕರ ಒಕ್ಕೂಟಗಳು ಒಗ್ಗಟ್ಟಿನಿಂದ ಬಂದ್​ಗೆ ಕರೆ ನೀಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್​ ಜೊತೆಗೆ ಬೆಂಗಳೂರಿಗೆ ಬಂದ್​ ಬಿಸಿ ತಟ್ಟಲಿದೆ.

ಬೇಡಿಕೆಗಳೇನು?: ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು. ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ದಪಡಿಸಬೇಕು. ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಬೇಕು. ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು. ಟ್ಯಾಕ್ಸಿಗಳಿಗೆ ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು. ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು. ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಬೇಕು. ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು. ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು. ಖಾಸಗಿ ಬಸ್‌ಗಳನ್ನು ಕಿಲೋಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು ಎಂಬುದು ಖಾಸಗಿ ವಾಹನ ಚಾಲಕರ ಒಕ್ಕೂಟದ ಬೇಡಿಕೆಯಾಗಿದೆ.

ಈಗಾಗಲೇ 32 ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿದ್ದು, 7 ಲಕ್ಷಕ್ಕೂ ಹೆಚ್ಚು ವಾಹನಗಳು ಇಂದು ರಾತ್ರಿಯಿಂದಲೇ ಸಂಚಾರ ನಿಲ್ಲಿಸಲಿವೆ. ಏರ್‌ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಓಲಾ, ಉಬರ್ ಆಟೋ ಟ್ಯಾಕ್ಸಿ ಸಹ ಬಂದ್ ಆಗಲಿವೆ. ಅಲ್ಲದೇ ಕಾರ್ಪೋರೇಟ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಸ್‍ಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಖಾಸಗಿ ವಾಹನ ಸಂಚಾರ ಸ್ಥಗಿತವಾಗಲಿದೆ. ಆದರೆ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ಯಥಾವತ್ ಸಂಚರಿಸಲಿವೆ.

'ಶಕ್ತಿ ಯೋಜನೆ'ಯಿಂದ ನಷ್ಟ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಪರಿಣಾಮವಾಗಿ ಖಾಸಗಿ ಸಾರಿಗೆ ವಾಹನಗಳನ್ನೇ ನಂಬಿ ಬದುಕುತ್ತಿದ್ದ ಚಾಲಕರು, ಸಿಬ್ಬಂದಿಗಳು ನಷ್ಟ ಅನುಭವಿಸುತ್ತಿದ್ದಾರೆ‌. ಈಗಾಗಲೇ ಮೆಟ್ರೋ, ಆ್ಯಪ್ ಆಧಾರಿತ ಇ-ಟ್ಯಾಕ್ಸಿಗಳ ಪ್ರತಿಸ್ಪರ್ಧೆಯ ನಡುವೆ ಸೊರಗಿದ್ದ ಖಾಸಗಿ ಬಸ್, ಆಟೋ ಚಾಲರಿಗೆ ರಾಜ್ಯ ಸರ್ಕಾರದ ಶಕ್ತಿಯೋಜನೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಗರದಲ್ಲಿ ಅನೇಕ ಕುಟುಂಬಗಳು ಆಟೋ ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿವೆ. ಆದರೆ ಕೋವಿಡ್‌ ಸಂದರ್ಭ ಲಾಕ್‌ಡೌನ್‌ನಿಂದ ಆಟೋ ಉದ್ಯಮ ಸಾಕಷ್ಟು ನಷ್ಟ ಅನುಭವಿಸಿದೆ. ಇದರ ನಡುವೆ ಓಲಾ, ಉಬರ್‌ನಂತಹ ಆ್ಯಪ್‌ ಆಧಾರಿತ ಕ್ಯಾಬ್‌ ಮತ್ತು ಆಟೊ ಸೇವೆ ಕಂಪನಿಗಳು, ಬೈಕ್‌ ಟ್ಯಾಕ್ಸಿ, ಮೆಟ್ರೋ ಸೇವೆಗಳಿಂದಾಗಿ ಆಟೋ ಚಾಲಕರಿಗೆ ಪ್ರಯಾಣಿಕರೇ ಸಿಗದಂತಾಗಿದೆ. ಇದರ ನಡುವೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವುದು ಆಟೋ ಚಾಲಕರ ಅಲ್ಪ ಸಂಪಾದನೆಗೂ ಕುತ್ತು ತಂದಿದೆ.

ಬಹುತೇಕ ಆಟೋ ಚಾಲಕರು ಹೇಳುವಂತೆ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಟೊಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಅದರಲ್ಲಿಯೂ ಬಡ ಮತ್ತು ಮಧ್ಯಮ ವರ್ಗದ ಉದ್ಯೋಗಸ್ಥ ಮಹಿಳೆಯರು, ಗಾರ್ಮೆಂಟ್ಸ್, ಕಂಪನಿಗಳಲ್ಲಿ ದುಡಿಯುವವರು ಆಟೋಗಳನ್ನು ಅವಲಂಬಿಸಿದ್ದರು. ಆದರೆ 'ಶಕ್ತಿ ಯೋಜನೆ' ಬಸ್​ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ಮಹಿಳೆಯರು ಸಹಜವಾಗಿ ಸರ್ಕಾರಿ ಬಸ್‌ಗಳತ್ತ ಮುಖ ಮಾಡಿದ್ದಾರೆ.

ಖಾಸಗಿ ಬಸ್​ ಮಾಲೀಕರ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಗರದ ಅಕ್ಕಪಕ್ಕದ ಜಿಲ್ಲೆಗಳಿಂದ ಸಂಚರಿಸುವ ಖಾಸಗಿ ಬಸ್‌ಗಳು‌ ಅರ್ಧದಷ್ಟು ಖಾಲಿ ಸಂಚರಿಸುತ್ತಿದ್ದು, ಡೀಸೆಲ್ ಖರ್ಚು ಸಹ ಉಳಿಯುತ್ತಿಲ್ಲ ಎಂಬುದು ಖಾಸಗಿ ಬಸ್ ಚಾಲಕರ ಅಳಲು. ಪ್ರವಾಸಿ ತಾಣಗಳಿಗೆ ತೆರಳುವ ಜನರು ಕೂಡ ಸರ್ಕಾರಿ ಬಸ್​ಗಳನ್ನೇ ಅವಲಂಬಿಸುತ್ತಿದ್ದಾರೆ. ಇದರಿಂದಾಗಿ ಖಾಸಗಿ ಬಸ್​ಗಳನ್ನೇ ನಂಬಿ ಜೀವನ ಮಾಡುತ್ತಿರುವ ಚಾಲಕರು, ನಿರ್ವಾಹಕರು ಬೀದಿಗೆ ಬೀಳುವಂತಾಗಿದೆ. ಹೀಗಾಗಿ ಖಾಸಗಿ ಬಸ್​ಗಳಿಗೂ ಶಕ್ತಿ ಯೋಜನೆ ವಿಸ್ತರಿಸಿ ಎಂದು ಮಾಲೀಕರು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಶಕ್ತಿ ಯೋಜನೆ'ಯಿಂದ ನಷ್ಟ, ಬಂದ್‌ ಕರೆ: ನಾಳೆ ಆಟೋ, ಕ್ಯಾಬ್‌, ಖಾಸಗಿ ಬಸ್‌ ಸೇವೆ ಇರಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.