ETV Bharat / state

ಪ್ರಧಾನಿ ಮೋದಿಯವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವ ವಿಚಾರ: ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ನಡೆದ ಮಾತಿನ ಚಕಮಕಿಗೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ತೆರೆ ಎಳೆದರು.

ವಿಧಾನಸಭೆ
ವಿಧಾನಸಭೆ
author img

By

Published : Jul 13, 2023, 3:55 PM IST

Updated : Jul 13, 2023, 5:39 PM IST

ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಗಳನ್ನು ಹಾಕುವುದಾಗಿ ಹೇಳಿರುವ ಬಗ್ಗೆ ಒಂದೇ ಒಂದು ದಾಖಲೆ ನೀಡಿ ಎಂದು ಬಿಜೆಪಿ ಶಾಸಕರು ಕಾಂಗ್ರೆಸ್ ಸದಸ್ಯರಿಗೆ ಸವಾಲು ಹಾಕಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ವಿಧಾನಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಕಾಂಗ್ರೆಸ್‌ ಶಾಸಕ ಕೋನರೆಡ್ಡಿ ಅವರು, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು 15 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿದ್ದರು. ಇದುವರೆಗೂ ಹಣ ಬಂದಿಲ್ಲ ಎಂದು ಹೇಳಿದರು. ಈ ಹೇಳಿಕೆ ಬಿಜೆಪಿ ಸದಸ್ಯರನ್ನು ಕೆರಳಿಸಿತು.

ಕೋನರೆಡ್ಡಿಯವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸುಮ್ಮನೆ ಭಾಷಣ ಮಾಡಬೇಡಿ. ಪ್ರಧಾನಿಗಳು 15 ಲಕ್ಷ ರೂ. ಹಾಕುವುದಾಗಿ ಹೇಳಿರುವ ಭಾಷಣದ ತುಣುಕಿದ್ದರೆ ಕೊಡಿ. ಅವರು ಹಾಗೆ ಹೇಳಿದ್ದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬೇಜವಾಬ್ದಾರಿಯಿಂದ ಮಾತನಾಡಬಾರದು. ದಾಖಲೆ ಕೊಡಿ ಎಂದು ಒತ್ತಾಯಿಸಿದರು. ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕೆ ಬಿಜೆಪಿಯ ಬಹುತೇಕ ಶಾಸಕರ ನಿಂತು ದಾಖಲೆ ಇಲ್ಲದೆ ಮಾತನಾಡಬೇಡಿ. ದಾಖಲೆ ಇದ್ದರೆ ಕೊಡಿ ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ಉಂಟಾಯಿತು.

ಗದ್ದಲದ ನಡುವೆ ಮಾತನಾಡಿದ ಸಚಿವ ಕೆ ಎನ್ ರಾಜಣ್ಣ , ಪ್ರಧಾನಿಗಳು ಆ ರೀತಿ ಹೇಳಿರುವುದು ದೇಶಕ್ಕೇ ಅಲ್ಲ. ಇಡೀ ಪ್ರಪಂಚಕ್ಕೆ ಗೊತ್ತಿದೆ. ಈ ರೀತಿ ನೀವು ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದರು. ಯತ್ನಾಳ್ ಅವರೇ ನೀವು ಹೀಗೆಲ್ಲ ಮಾತನಾಡಿದರೆ ನಿಮ್ಮನ್ನು ವಿಪಕ್ಷ ನಾಯಕ ಮಾಡುತ್ತಾರೆ ಎಂದುಕೊಂಡಿದ್ದೀರಾ, ಅದು ಆಗಲ್ಲ ಎಂದು ಮಾತಿನ ಬಾಣ ಬಿಟ್ಟರು.

ಬಳಿಕ ಸಚಿವ ರಾಜಣ್ಣನವರ ಮಾತಿನಿಂದ ಕೆರಳಿದ ಬಿಜೆಪಿ ಸದಸ್ಯರು, ದಾಖಲೆ ಇಲ್ಲದೆ ಮಾತನಾಡಬೇಡಿ. ಪ್ರಧಾನಿಗಳು ಎಲ್ಲೂ ಆ ರೀತಿ ಹೇಳಿಲ್ಲ ಎಂದರು. ನೀವು ದಾಖಲೆ ಕೊಟ್ಟರೆ ನಾನು ಪ್ರಧಾನಿ ಅವರನ್ನೇ ಈ ಬಗ್ಗೆ ಕೇಳುತ್ತೇನೆ. ನಮ್ಮಲ್ಲಿ ಅಷ್ಟು ಪ್ರಜಾತಂತ್ರವಿದೆ. ನನಗೂ ತಾಕತ್ತು ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದರು.

ಆಗ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಮಾತನಾಡಿ, ಜಿಎಸ್‌ಟಿ ದುಡ್ಡು ಕೇಳಲು ನಿಮಗೆ ಆಗಿಲ್ಲ. ಇನ್ನು ಇದನ್ನು ಕೇಳುತ್ತೀರಾ ಎಂದು ಕಿಚಾಯಿಸಿದರು. ಈ ನಡುವೆ ಮಾತನಾಡಿದ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಅವರು, ಸದನದಲ್ಲಿ ಪದೇ ಪದೇ ಕಾಂಗ್ರೆಸ್‌ನವರು 15 ಲಕ್ಷ ರೂ. ಪ್ರಧಾನಿಗಳು ಹಾಕುತ್ತೇನೆ ಎಂದು ಹೇಳಿದ್ದರು ಎಂಬ ಮಾತುಗಳನ್ನು ದಾಖಲೆ ಇಲ್ಲದೆ ಆಡುತ್ತಿದ್ದಾರೆ. ಈ ಮಾತುಗಳನ್ನು ಕಡತದಿಂದ ತೆಗೆಸಿ ಎಂದು ಮನವಿ ಮಾಡಿದರು. ಮತ್ತೆ ಮಾತು ಮುಂದುವರೆಸಿದ ಕೋನರೆಡ್ಡಿ, ನಾನು ಸತ್ಯ ಹೇಳಿದ್ದೇನೆ ಎಂದಾಗ ಬಿಜೆಪಿ ಶಾಸಕರು ಒಮ್ಮೆಲೆ ಎದ್ದುನಿಂತು ಕೋನರೆಡ್ಡಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಯಶಪಾಲ್ ಸುವರ್ಣ ಅವರು ನೀವು ಹೀಗೆಲ್ಲ ಮಾತನಾಡುವುದು ಸರಿಯಲ್ಲ ಎಂದಾಗ ಕೋನರೆಡ್ಡಿ, ನಾನು ನಿಮ್ಮನ್ನು ಕೇಳಿ ಮಾತನಾಡಬೇಕಿಲ್ಲ ರೀ.. ನಾನು ಹೋರಾಟ ಮಾಡಿಯೇ ಇಲ್ಲಿಗೆ ಬಂದಿದ್ದೇನೆ. ಅಮಿತ್ ಶಾ ಅವರು ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಸುಳ್ಳು ಹೇಳಿದ್ದೆವು ಎಂದಿದ್ದರು. ಇದು ನಿಜ ಅಲ್ಲವೇ, ಬಸನಗೌಡ ಪಾಟೀಲರೇ ಯಡಿಯೂರಪ್ಪನವರನ್ನು ನೀವು ಟೀಕೆ ಮಾಡಿರಲಿಲ್ಲವೇ. ವರ್ಗಾವಣೆ ದರ ಕಾರ್ಡ್ ಪ್ರದರ್ಶಿಸಿರಲಿಲ್ಲವೇ, ಸಿಎಂ ಆಗಲು 2500 ಕೋಟಿ ರೂ. ಬೇಕು ಎಂದು ಹೇಳಿರಲಿಲ್ಲವೇ ಎಂದಾಗ ಮತ್ತೆ ಮಾತಿನ ಚಕಮಕಿ ಜೋರಾಯಿತು.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್​ ದರದ ಕಾರ್ಡ್ ನಾನು ಬಿಡುಗಡೆ ಮಾಡಿಲ್ಲ. ನಿನ್ನೆ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವುದು. ಏನೇನೋ ಮಾತನಾಡಬೇಡಿ ಎಂದರು. ಆಗ ಬಿಜೆಪಿ ಸದಸ್ಯ ಚನ್ನಬಸಪ್ಪ ಅವರು, ಪ್ರಧಾನಿಗಳು ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದು. 15 ಲಕ್ಷ ಹಾಕುತ್ತೇವೆ ಎಂದಲ್ಲ ಎಂದು ಹೇಳಿದಾಗ, ಎದ್ದುನಿಂತ ಸಚಿವ ಕೆ ಜೆ ಜಾರ್ಜ್ ಕಪ್ಪು ಹಣ ತಂದಿದ್ದೀರಾ, 9 ವರ್ಷದಲ್ಲಿ ಎಷ್ಟು ಕಪ್ಪು ಹಣ ತಂದಿದ್ದೀರಾ ಎಂದು ಪ್ರಶ್ನಿಸಿದರು. ಸದನದಲ್ಲಿ ವಿಷಯಾಂತರ ಆಗುತ್ತಿರುವುದನ್ನು ಗಮನಿಸಿದ ಸಭಾಧ್ಯಕ್ಷ ಯು ಟಿ ಖಾದರ್ ಅವರು, ಕೋನರೆಡ್ಡಿಯವರೇ ನೀವು ನನ್ನನ್ನು ನೋಡಿಕೊಂಡು ಮಾತನಾಡಿ, ಆ ಕಡೆ ನೋಡಿಕೊಂಡು ಮಾತನಾಡಬೇಡಿ ಎಂದು ಹೇಳಿ ಮಾತಿನ ಚಕಮಕಿಗೆ ತೆರೆ ಎಳೆದರು.

ಇದನ್ನೂ ಓದಿ : ಎರವಲು ಸೇವೆಯ ಮೇಲೆ ಪ್ರತಿಪಕ್ಷದ ನಾಯಕನ ನೇಮಕ: ಶಾಸಕ ಲಕ್ಷ್ಮಣ್ ಸವದಿ ಲೇವಡಿ

Last Updated : Jul 13, 2023, 5:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.