ETV Bharat / state

ಬಿಟ್ಟೇನೆಂದ್ರೂ ಬಿಡದು ಈ 'ಗೃಹ'ವ್ಯಾದಿ.. ಇಷ್ಟದ ಮನೆಗಾಗಿ ಸಚಿವರುಗಳಿಂದ ಸಿಎಂಗೆ ದುಂಬಾಲು..

ಕೆಲ‌ ಸಚಿವರು ತಮಗೆ ಅದೇ ಸರ್ಕಾರಿ ವಸತಿ ಗೃಹ ಬೇಕೆಂದು ದುಂಬಾಲು ಬಿದ್ದಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಸಚಿವ ಸ್ಥಾನ ಗಿಟ್ಟಿಸಿಕೊಂಡ ಸಚಿವರುಗಳು ಸರ್ಕಾರಿ ವಸತಿಗೃಹ ದಕ್ಕಿಸಿಕೊಳ್ಳಲೂ ಕಸರತ್ತು ನಡೆಸುತ್ತಿದ್ದಾರೆ..

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
author img

By

Published : Sep 10, 2021, 4:49 PM IST

Updated : Sep 10, 2021, 5:00 PM IST

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಸಿಎಂ ಬೊಮ್ಮಾಯಿಗೆ ದುಂಬಾಲು ಬಿದ್ದಿದ್ದ ಸಚಿವರು ಇದೀಗ ಸರ್ಕಾರಿ ವಸತಿ ಗೃಹ ಗಿಟ್ಟಿಸಿಕೊಳ್ಳಲು ಬೆನ್ನು ಬಿದ್ದಿದ್ದಾರೆ. ಇತ್ತ ಕೆಲ ಮಾಜಿ ಸಚಿವರು ಇನ್ನೂ ಮನೆ ಬಿಟ್ಟು ಕೊಡದ ಕಾರಣ ನೂತನ ಸಚಿವರಿಗೆ ಮನೆ ಹಂಚಿಕೆ ಮಾಡುವುದೇ ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.

ಈವರೆಗೆ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ಸಿಎಂ ಬೊಮ್ಮಾಯಿ ಹಿಂದೆ ಗಿರಕಿ ಹೊಡೆಯುತ್ತಿದ್ದರು.‌ ಸಚಿವ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ಸರ್ಕಾರಿ ವಸತಿ ಗೃಹಕ್ಕಾಗಿ ಸಿಎಂಗೆ ದಂಬಾಲು ಬಿದ್ದಿದ್ದಾರೆ. ಸಚಿವರಿಗೆ ವಸತಿ ಗೃಹ ಹಂಚಿಕೆ ಮಾಡುವುದೇ ಈಗ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ.

ಕೆಲ‌ ಸಚಿವರು ತಮಗೇ ಅದೇ ಸರ್ಕಾರಿ ವಸತಿ ಗೃಹ ಬೇಕೆಂದು ದುಂಬಾಲು ಬಿದ್ದಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಸಚಿವ ಸ್ಥಾನ ಗಿಟ್ಟಿಸಿಕೊಂಡ ಸಚಿವರುಗಳು ಸರ್ಕಾರಿ ವಸತಿಗೃಹವನ್ನ ದಕ್ಕಿಸಿಕೊಳ್ಳಲೂ ಕಸರತ್ತು ನಡೆಸುತ್ತಿದ್ದಾರೆ.

ಆ ಒಂದು ವಸತಿ ಗೃಹಕ್ಕೆ ಹಲವರ ಕಣ್ಣು : ಸಚಿವರಾಗಿದ್ದ ಸಿ ಪಿ ಯೋಗೇಶ್ವರ್ ಅವರಿಗೆ ಹಂಚಿಕೆಯಾಗಿರುವ ಕುಮಾರ ಕೃಪ ಪೂರ್ವದ ಗೃಹ ಸಂಖ್ಯೆ 3ರ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ. ಆ ನಿವಾಸವನ್ನು ಸಚಿವರಾದ ಕೆ ಸಿ ನಾರಾಯಣಗೌಡ, ಬಿ. ಶ್ರೀರಾಮುಲು ಮತ್ತು ಆನಂದ್‌ ಸಿಂಗ್‌ ತಮಗೆ ಹಂಚಿಕೆ ಮಾಡುವಂತೆ ಕೋರಿದ್ದಾರೆ.

ಇತ್ತ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಅದೇ ಮನೆಯನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಕೂಡ ಅದೇ ಮನೆಯನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗೆ ದುಂಬಾಲು ಬಿದ್ದಿದ್ದಾರೆ.

ಸಚಿವ ನಾರಾಯಣ ಗೌಡ ಮತ್ತು ಆನಂದ್ ಸಿಂಗ್‌ ಅವರಿಗೆ ಸರ್ಕಾರದಿಂದ ವಸತಿ ಗೃಹ ಹಂಚಿಕೆ ಆಗಿಲ್ಲ. ಬಿ. ಶ್ರೀರಾಮುಲು ಅವರು ಸಪ್ತ ಸಚಿವರ ನಿವಾಸದಲ್ಲಿರುವ ಸರ್ಕಾರಿ ವಸತಿಗೃಹ ನಂ. 6ರಲ್ಲಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಯೋಗೇಶ್ವರ್ ಸದ್ಯ ಆ ಮನೆಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲ.

ಇನ್ನೂ ನಾಲ್ಕೈದು ತಿಂಗಳು ಅದೇ ಸರ್ಕಾರಿ ನಿವಾಸದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಇದನ್ನು ಪುರಸ್ಕರಿಸಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಇನ್ನು, ಯೊಗೇಶ್ವರ್ ಅವರಿಗೆ ಮನೆ ಹಂಚಿಕೆ ಸಾಧ್ಯವಾಗದಿದ್ದರೆ ಕೈಗಾರಿಕಾ ಸಚಿವರಾಗಿದ್ದ ಜಗದೀಶ್ ಶೆಟ್ಟರ್‌ ಅವರಿದ್ದ ಕ್ರೆಸೆಂಟ್‌ ರಸ್ತೆಯ ಸರ್ಕಾರಿ ವಸತಿ ಗೃಹ ನಂ–3 ಅನ್ನು ಹಂಚಿಕೆ ಮಾಡುವಂತೆ ಶ್ರೀರಾಮುಲು ಮನವಿ ಸಲ್ಲಿಸಿದ್ದರು.

ಇತ್ತ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸಚಿವ ಅಶ್ವತ್ಥ್ ನಾರಾಯಣ ಅವರಿದ್ದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ರೇಸ್‌ ವ್ಯೂ ಕಾಟೇಜ್‌ ನಂ–1 ಅನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ, ಮತ್ತೊಂದು ಮನೆಯ ಹುಡುಕಾಟದಲ್ಲಿರುವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅವರೂ ಕ್ರಸೆಂಟ್ ರಸ್ತೆಯಲ್ಲಿರುವ ವಸತಿಗೃಹಕ್ಕೆ ಅರ್ಜಿ ಹಾಕಿದ್ದರು.

ಆದರೆ, ಶೆಟ್ಟರ್ ಆಪ್ತರಾಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪರಿಗೆ ಆ ಮನೆಯನ್ನು ಹಂಚಿಕೆ ಮಾಡಲಾಗಿದೆ. ಆದರೆ, ಮಾಜಿ ಸಚಿವ ಶೆಟ್ಟರ್‌ ಇನ್ನಷ್ಟೇ ಆ ಮನೆಯನ್ನು ತೆರವುಗೊಳಿಸಬೇಕಾಗಿದೆ.

ಸಚಿವರಿಂದ ಸರ್ಕಾರಿ ನಿವಾಸಕ್ಕಾಗಿ ಬೇಟೆ : ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸಚಿವ ಅವರಿದ್ದ ಜಯ ಮಹಲ್‌ ಬಡಾವಣೆಯಲ್ಲಿರುವ ಸರ್ಕಾರಿ ವಸತಿಗೃಹ ಸಂಖ್ಯೆ ಬಿ–2ಎ ಮನೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಕೇಳಿದ್ದಾರೆ.

ಹೀಗಾಗಿ, ನಾಗೇಶ್‌ ಅವರಿಗೆ ಆ ಮನೆ ಹಂಚಿಕೆಯಾಗುವ ಸಾಧ್ಯತೆ ಇದೆ. ಆದರೆ, ಮಾಜಿ ಸಚಿವ ಸವದಿ ಮನೆಯನ್ನು ಇನ್ನೂ ಖಾಲಿ ಮಾಡಿಲ್ಲ. ಹಾಗಾಗಿ, ಮನೆಗಾಗಿ ಸಚಿವ ನಾಗೇಶ್ ಕಾಯುವ ಅನಿವಾರ್ಯತೆಯಲ್ಲಿದ್ದಾರೆ.

ಇತ್ತ ಇಂಧನ ಸಚಿವ ಸುನಿಲ್ ಕುಮಾರ್, ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದಾಗ ಮುರುಗೇಶ್‌ ನಿರಾಣಿ ನೆಲೆಸಿರುವ ಸ್ಯಾಂಕಿ ರಸ್ತೆಯಲ್ಲಿರುವ ನಂ.31ನ್ನು ಕೋರಿದ್ದಾರೆ. ಹಾಲಿ ಕೈಗಾರಿಕಾ ಸಚಿವರಾಗಿರುವ ಮುರುಗೇಶ್‌ ನಿರಾಣಿ ಈ ಮನೆಯಲ್ಲೇ ಇದ್ದಾರೆ. ಹೀಗಾಗಿ, ಸುನೀಲ್ ಅವರಿಗೆ ಈ ಮನೆ ಸಿಗುವುದು ಅನುಮಾನ ಎನ್ನಲಾಗಿದೆ.

ಅತ್ತ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಸ್‌ ಆರ್‌ ವಿಶ್ವನಾಥ್‌ ಮತ್ತು ಮತ್ತೊಬ್ಬ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ ಪಿ ರೇಣಕಾಚಾರ್ಯ ಅವರು ‘ಸಪ್ತ ಸಚಿವರ ನಿವಾಸ’ದಲ್ಲಿ ನಂ1 ಮತ್ತು ನಂ7ರಲ್ಲಿ ಇದ್ದಾರೆ.

ಸರ್ಕಾರಿ ವಸತಿ ಗೃಹ ಅನುಗ್ರಹದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಸದಾಶಿವನಗರದಲ್ಲಿರುವ ಕೆಹೆಚ್‌ಬಿ ಸರ್ಕಾರಿ ವಸತಿಗೃಹ ನಂ- 243ರಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಶಂಕರ್‌ ಸಿಂಗ್ ವಘೇಲಾ ಇದ್ದಾರೆ. ಹೀಗಾಗಿ, ಈ ಮನೆಗಳೂ ಸದ್ಯಕ್ಕೆ ಖಾಲಿ ಆಗುವುದಿಲ್ಲ. ಹೀಗಾಗಿ, ಹೊಸ ಸಚಿವರಿಗೆ ಸರ್ಕಾರಿ ವಸತಿಗೃಹ ಒದಗಿಸುವುದು ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ : ದ.ಕನ್ನಡ ಜಿಲ್ಲೆಯಲ್ಲಿ 2020-21ರಲ್ಲಿ ಶಾಲೆ ತೊರೆದ 18 ವರ್ಷದೊಳಗಿನ 567 ವಿದ್ಯಾರ್ಥಿಗಳು

Last Updated : Sep 10, 2021, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.