ETV Bharat / state

ಮಾಣಿಕ್‌ ಷಾ ಗ್ರೌಂಡ್‌ನಲ್ಲಿ ಸರಳ ಸ್ವಾತಂತ್ರ್ಯ ದಿನಾಚರಣೆಗೆ ನಿರ್ಧಾರ: ಆಹ್ವಾನಿತರಿಗಷ್ಟೇ ಪ್ರವೇಶ - Gourav Guptha

75ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಸಿದ್ಧತೆ ಕುರಿತು ನಗರದ ಮಾಣಿಕ್ ಷಾ ಪರೇಡ್ ಗ್ರೌಂಡ್​ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪೊಲೀಸ್ ಆಯುಕ್ತ ಕಮಲ್ ಪಂತ್​ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಜಂಟಿ ಸುದ್ದಿಗೋಷ್ಟಿ ನಡೆಸಿದರು.

Independence day
ಸುದ್ದಿಗೋಷ್ಟಿಯಲ್ಲಿ ಪ್ರಮುಖ ಅಂಶದ ವಿವರಣೆ
author img

By

Published : Aug 13, 2021, 11:38 AM IST

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗದ ಕಾರಣ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.

ಈ ಬಾರಿ ವಿಶೇಷವಾಗಿ ವೈದ್ಯರು, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕರ್ತರು, ‘ವಿವಿಧ ಇಲಾಖೆಯ ಕೋವಿಡ್ ವಾರಿಯರ್‌ಗಳು ಸೇರಿ ಒಟ್ಟು 100 ಸಿಬ್ಬಂದಿ ಹಾಗೂ ಕೋವಿಡ್-19 ಸೊಂಕಿನಿಂದ ಗುಣಮುಖರಾಗಿರುವ ಎಲ್ಲಾ ವಯೋಮಾನದವರನ್ನು ಒಳಗೊಂಡಂತೆ 25 ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇತರ ಗಣ್ಯರೂ ಸೇರಿ ಒಟ್ಟು 1000 ಜನರನ್ನು ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ದೂರದರ್ಶನ ಹಾಗೂ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆಗೆ ಅವಕಾಶ ಇದೆ.

ಪ್ರಮುಖ ಅಂಶಗಳು:

  • ಆಹ್ವಾನಿತರು ಎಂಟು ಗಂಟೆಯ ಒಳಗಾಗಿ ಗ್ರೌಂಡ್​ನಲ್ಲಿ ಇರಬೇಕು.
  • ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಲಿರುವ ಮುಖ್ಯಮಂತ್ರಿ
  • ಕೇಂದ್ರ ಗೃಹ ಮಂತ್ರಾಲಯದ (SOP) ಮಾರ್ಗಸೂಚಿಗಳಂತೆ 2021ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ
  • ದಿನಾಚರಣೆಯ ಸಮಾರಂಭಕ್ಕಾಗಿ ಮೈದಾನ ಸಿದ್ಧ
  • ಶಾಮಿಯಾನ, ವೇದಿಕೆಯ ನಿರ್ಮಾಣ, ಬ್ಯಾರಿಕೇಡಿಂಗ್ ಮತ್ತು ಸಾವಿರ ಆಸನಗಳ ವ್ಯವಸ್ಥೆ
  • ವೇದಿಕೆಗೆ ಅಲಂಕಾರಿಕ ಪರಿಕರಗಳ ಅಳವಡಿಕೆ: ಧ್ವಜಾರೋಹಣ ಮಾಡಲು ಧ್ವಜ ಸ್ಥಂಭ ನಿರ್ಮಾಣ
  • ಬೆಳಿಗ್ಗೆ 8-55ಕ್ಕೆ ಮುಖ್ಯಮಂತ್ರಿಗಳ ಆಗಮನ
  • ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳ ಪರಿಚಯ
  • ಮುಖ್ಯಮಂತ್ರಿಗಳಿಂದ ಬೆಳಿಗ್ಗೆ 9.00ಕ್ಗೆಕೆ ರಾಷ್ಟ್ರ ಧ್ವಜಾರೋಹಣ
  • ಧ್ವಜಾರೋಹಣದ ನಂತರ ತೆರೆದ ಜೀಪಿನಲ್ಲಿ ಸಿಎಂ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರ
  • ನಂತರ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ
  • ನಂತರ ರಾಷ್ಟ್ರಗೀತೆ

ಇನ್ನು ಗೌರವ ರಕ್ಷೆ ಸ್ವೀಕರಿಸುವ ತಾಲೀಮನ್ನು ದಿನಾಂಕ ಒಟ್ಟು 3 ದಿನಗಳ ಕಾಲ ಸತತವಾಗಿ ನಡೆಸಲಾಗುತ್ತಿದೆ. ಈ ತಾಲೀಮಿನಲ್ಲಿ ಕೆಎಸ್ಆರ್​ಪಿ/ಸಿಆರ್​ಪಿಎಫ್, ಬಿಎಸ್​ಎಫ್, ಸಿಎಆರ್/ಕೆಎಸ್ಐಎಸ್ಎಫ್ ಟ್ರಾಫಿಕ್, ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್/ಟ್ರಾಫಿಕ್ ವಾರ್ಡನ್ ಅಗ್ನಿಶಾಮಕ ಸಿಬ್ಬಂದಿ/ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್‌ನ ಒಟ್ಟು 20 ತುಕಡಿಗಳಲ್ಲಿ ಸುಮಾರು 470 ಮಂದಿ ಭಾಗಿಯಾಗಲಿದ್ದಾರೆ.

ಮೈದಾನದಲ್ಲಿ ಸುರಕ್ಷತೆಗಾಗಿ 60 ಸಿಸಿ ಕ್ಯಾಮೆರಾ ವ್ಯವಸ್ಥೆ, 2 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಆಂಬ್ಯುಲೆನ್ಸ್‌ಗಳಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಜೊತೆಗೆ ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿಶಾಮಕ ವಾಹನಗಳೊಂದಿಗೆ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.