ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿದ್ದ ಕಾರ್ಮಿಕರಿಗೆ, ಅವರ ಊರುಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಕೆಎಸ್ಆರ್ಟಿಸಿ ಹಾಗೂ ರೈಲುಗಳ ಸಂಚಾರ ಆರಂಭವಾಗಿದ್ದು, ಹೀಗಾಗಿ ಆಯಾ ಠಾಣಾ ವ್ಯಾಪ್ತಿಯ ಕಾರ್ಮಿಕರನ್ನು ಪತ್ತೆ ಮಾಡಿ ಒಂದು ಗ್ರೌಂಡ್ ಬಳಿ ಸೇರಿಸಲಾಗುತ್ತಿದೆ. ಈ ವೇಳೆ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ರೈಲು ಹತ್ತುವ ವ್ಯವಸ್ಥೆ ಮಾಡುತ್ತಿದ್ದಾರೆ.
ಇಂದು ಮಾಗಡಿ ರಸ್ತೆ ಪೊಲೀಸ್ ಕ್ವಾಟ್ರಸ್ ಬಳಿಯ ಸ್ಕೂಲ್ ಗ್ರೌಂಡ್ನಲ್ಲಿ ಮಾಗಡಿ ಬಳಿಯ ಬಿಹಾರಿ ಮೂಲದ ನೂರಾರು ಕಾರ್ಮಿಕರನ್ನು ಸೇರಿಸಲಾಗಿತ್ತು. ಹೀಗಾಗಿ ಪೊಲಿಸ್ ಕ್ವಾಟ್ರಸ್ ನಿವಾಸಿಗಳು ಆತಂಕ ಹೊರ ಹಾಕಿದ್ದಾರೆ.
ನಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು. ಭಯದಿಂದ ಕೆಲಸ ಮಾಡಿ ಮನೆಯಲ್ಲಿ ನೆಮ್ಮದಿಯಿಂದ ಕಾಲ ಕಳೆಯೋಣ ಅಂದುಕೊಂಡರೆ, ಇದೀಗ ಕ್ವಾಟ್ರಸ್ ಬಳಿ ಕೂಡ ಸುರಕ್ಷತೆ ಇಲ್ಲದಾಗಿದೆ. ಹೆಚ್ಚು ಕಮ್ಮಿಯಾದರೆ ಯಾರು ಹೊಣೆ..? ಇವರನ್ನು ಬೇಗ ಸಂಬಂಧಿಸಿದ ಅಧಿಕಾರಿಗಳು ಕರೆದೊಯ್ಯುವ ವ್ಯವಸ್ಥೆ ಮಾಡಿ ಎಂದು ಹೆಸರು ಹೇಳಲು ಇಚ್ಚೆ ಪಡದ ಅಧಿಕಾರಿಗಳು ಸೂಚಿಸಿದ್ದಾರೆ.