ಬೆಂಗಳೂರು: ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಸಮಿತಿ ವರದಿಯನ್ನು ಮಂಗಳವಾರ ಸರ್ಕಾರಕ್ಕೆ ಸಲ್ಲಿಸಿದೆ. ಮರಳಿ ಕಾಲೇಜಿಗೆ ಕಾರ್ಯಕ್ರಮ ಮಾಡಬೇಕು. ಆದ್ಯತೆ ಆಧಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಕೊಡುವ ಗುರಿ ಇದೆ. ಈ ಬಗ್ಗೆ ನಿನ್ನೆ ಚರ್ಚೆ ನಡೆಯಿತು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜುಲೈ ಮೊದಲ ವಾರ ಅಥವಾ 2ನೇ ವಾರದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲು ಕ್ರಮ ರೂಪಿಸಲಾಗುತ್ತಿದೆ. ಬೋಧಕರು, ಬೋಧಕೇತರರು, ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ಬಳಿಕ ಕಾಲಕ್ರಮೇಣ ತರಗತಿಗಳನ್ನು ಆರಂಭ ಮಾಡಲಾಗುವುದು. ಡೆಲ್ಟಾ, ಡೆಲ್ಟಾ ಪ್ಲಸ್ ವೈರಸ್ ಗಳಿಗೆ ಲಸಿಕೆಯೇ ಸಂಜೀವಿನಿ. ಕೋವಿಡ್ ಹೆಚ್ಚು ಹರಡುವ ಮೂಲಕ ರೂಪಾಂತರ ಆಗಲಿದೆ. ಇದಕ್ಕೆ ಲಸಿಕೆಯೇ ರಾಮಬಾಣ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಯಾರೆಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಕಾಂಗ್ರೆಸ್ನ ಆಂತರಿಕ ವಿಚಾರ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನಾವು ಉತ್ತಮ ಕಾರ್ಯಕ್ರಮಗಳನ್ನು ನೀಡಿ ಮುಂದಿನ ಸಲವೂ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈಕಮಾಂಡ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವರದಿ ಕೊಟ್ಟಿಲ್ಲ ಎಂಬ ಬಿಜೆಪಿ ಮುಖಂಡ ಸಿ ಟಿ ರವಿ ಹೇಳಿಕೆ ವಿಚಾರಕ್ಕೆ ವರದಿ ಕೊಟ್ಟಿದಾರೋ, ಇಲ್ಲವೋ ಅಂತ ಅರುಣ್ ಸಿಂಗ್ ಅವರನ್ನೇ ಕೇಳಬೇಕು. ಅರುಣ್ಸಿಂಗ್ ಪರವಾಗಿ ನಾನು ಹೇಗೆ ಹೇಳಲಿಕ್ಕೆ ಆಗುತ್ತದೆ ಎಂದರು.
ಓದಿ: ಕೊರೊನಾ ಕಟ್ಟಿಹಾಕಿದ ಜನರು.. ಸೊಕ್ಕೆ ಗ್ರಾಮ ಪಂಚಾಯತ್ಗೆ ಸಿಎಂ ರಿಂದ ಪ್ರಶಂಸೆ ಪತ್ರ