ETV Bharat / state

ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ್ತು ಬೆಂಬಲಿಗರಿಗೆ ಉಪೇಂದ್ರ ಬಹಿರಂಗ ಪತ್ರ! - ರಾಜಕೀಯ ಪಕ್ಷಗಳಿಗೆ ಉಪೇಂದ್ರ ಪತ್ರ

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ವಿವಿಧ ರೂಪದಲ್ಲಿ ಸಹಾಯ ಮಾಡ್ತಿರುವ ನಟ ಉಪೇಂದ್ರ,ಎಲ್ಲಾ ರಾಜಕೀಯ ವಿವಿಧ ಪಕ್ಷದವರು, ವಿವಿಧ ನಾಯಕರು, ವಿವಿಧ ಜಾತಿ, ಧರ್ಮಗಳ ಬೆಂಬಲಿಗರಿಗೆ ಬಹಿರಂಗ ಪತ್ರವೊಂದನ್ನ ಬರೆದಿದ್ದಾರೆ..

prajakiya
prajakiya
author img

By

Published : May 17, 2021, 6:59 PM IST

ರಾಜಕೀಯ ವ್ಯವಸ್ಥೆಯಲ್ಲಿ ಹೊಸತನ ತರಬೇಕು ಅಂತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಪ್ರಜೆಗಳ ಹೆಸರಿನಲ್ಲಿ 'ಪ್ರಜಾಕೀಯ' ಎಂಬ ಪಕ್ಷ ಹುಟ್ಟು ಹಾಕಿದ್ದಾರೆ.

ಈಗಾಗಲೇ ಪ್ರಜಾಕೀಯ ಪಕ್ಷದ ಹೆಸರಲ್ಲಿ, ಈ ಕೊರೊನಾದಿಂದ ಕಂಗೆಟ್ಟ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಸಿನಿಮಾ ರಂಗದ ಕಾರ್ಮಿಕರಿಗೆ ಸಹಾಯ ಮಾಡುವ ಜೊತೆಗೆ ರೈತರ ಬೆಳೆದ ಬೆಳೆಗಳನ್ನ ಸರಿಯಾದ ಬೆಲೆ ಕೊಟ್ಟು ಖರೀದಿಸಿ, ಸದ್ಯ ಕಷ್ಟದಲ್ಲಿರುವ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ.

ಈ ವೇಳೆ ಎಲ್ಲಾ ರಾಜಕೀಯ ವಿವಿಧ ಪಕ್ಷದವರು, ವಿವಿಧ ನಾಯಕರು, ವಿವಿಧ ಜಾತಿ, ಧರ್ಮಗಳ ಬೆಂಬಲಿಗರಿಗೆ ಉಪೇಂದ್ರ ಬಹಿರಂಗ ಪತ್ರವೊಂದನ್ನ ಬರೆದಿದ್ದಾರೆ. ಅದರ ಸಾರಾಂಶ ಹೀಗಿದೆ.

1. ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ - ಎಂದೆಂದೂ ನಾನು ಉಪೇಂದ್ರ

2. ಆತಂಕ ಪಡಬೇಡಿ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದು - ನಾನೆಂದೂ ನಾಯಕನಾಗುವುದಿಲ್ಲ.

3. ಭಯ ಪಡಬೇಡಿ ನಿಮ್ಮ ಪಕ್ಷ, ನಾಯಕನಿಗೆ ಸಿಗುವ ಮತ ವಿಭಜನೆ (Split) ಆಗುತ್ತದೆ ಎಂದು - ನಾಯಕನಾಗಬೇಕೆಂದು ದೃಢ ಮನಸ್ಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂ ಇನ್ನು ಮುಂದೆ ಮತ ನೀಡುವುದಿಲ್ಲ!

4. ನಿಮಗೆ ನಿಮ್ಮ ಪಕ್ಷ, ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ, ರಾಜಕೀಯ ಭದ್ರತೆ ಮತ್ತು ಆರ್ಥಿಕ (ಹಣ) ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆಂಬ ಆತಂಕ ಬೇಡ, ಅದು ಕಡಿಮೆಯಾಗಬಾರದು, ಇಮ್ಮಡಿ (Double) ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ.

5. 20% ನಾಯಕತ್ವದ, ಚಾಣಾಕ್ಷ ಜಾಣತನದ, ಹಣ, ತೋಳ್ಬಲದ ಪ್ರಬಲ ಗುಂಪಿನಲ್ಲಿದ್ದೇನೆಂದು ಹೆಮ್ಮೆ ಪಡಬೇಡಿ, 80% ಸಾಮಾನ್ಯರು, ದೀನದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಲ ಮುಗಿದಿದೆ.

6. ನಾನು ಎಲೆಕ್ಷನ್‌ನಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ, ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನ ಬಾವಿಗೆ ತಳ್ಳಿ ಆಳ ನೋಡ್ತೀರಾ ಎಂದಿರಿ! ಇರಲಿ ಒಂದು ಸತ್ಯ ತಿಳಿಯಿರಿ.

7. 20% "ನಾನು" ಎನ್ನುವವರ ಜೊತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ, ನೀನು ಎನ್ನುವ 80% ಜನರ ಜೊತೆ ಅವನೇ ಇರುತ್ತೇನೆ ಅಂತ ಉಪೇಂದ್ರ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.