ETV Bharat / state

ಕಾಂಗ್ರೆಸ್​​ನಲ್ಲಿ ಪವರ್ ಕ್ಯಾನ್ಸರ್ ಶುರುವಾಗಿದೆ: ಬಿಜೆಪಿ ಟ್ವೀಟ್​ ಟೀಕಾಸ್ತ್ರ

ಕಾಂಗ್ರೆಸ್ ಕಿತ್ತಾಟದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇವರಿಬ್ಬರ ಜಗಳದಲ್ಲಿ ಡಾ ಜಿ ಪರಮೇಶ್ವರ್ ಮತ್ತು ಖರ್ಗೆ ನಡುವೆ ಪೈಪೋಟಿ ಶುರುವಾಗಿದೆ ಎಂದು ಟೀಕಿಸಿದೆ.

BJP symbol
ಬಿಜೆಪಿ ಚಿಹ್ನೆ
author img

By

Published : Dec 15, 2022, 5:51 PM IST

ಬೆಂಗಳೂರು: ಕಾಂಗ್ರೆಸ್‌ಗೆ "ಪವರ್ ಕ್ಯಾನ್ಸರ್" ಶುರುವಾಗಿದೆ.‌ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರು ಒಬ್ಬರಿಗಿಂತ ಇನ್ನೊಬ್ಬರು ಪವರ್‌ಫುಲ್‌ ಎಂದು ತೋರಿಸಿಕೊಳ್ಳುವುದರಲ್ಲಿ ಕಾಲ ವ್ಯಯಿಸುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂಬ ಸಂದೇಶ ರವಾನಿಸುವುದರಲ್ಲೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

  • ನಮ್ಮ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳು ಎಲ್ಲರನ್ನೂ ತಲುಪಿದೆ. ರಾಜ್ಯದಲ್ಲಿ ವಾತಾವರಣ ನಮ್ಮ ಪರವಾಗಿದೆ. ಕಾಂಗ್ರೆಸ್‌ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ, ಅವರದ್ದು ತಿರುಕನ ಕನಸು.

    - ಶ್ರೀ @BSYBJP, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳು pic.twitter.com/MBpEChYuvh

    — BJP Karnataka (@BJP4Karnataka) December 15, 2022 " class="align-text-top noRightClick twitterSection" data=" ">

ಬಿಜೆಪಿ ಸರಣಿ ಟ್ವೀಟ್: ಕಾಂಗ್ರೆಸ್ ಕಿತ್ತಾಟದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇವರಿಬ್ಬರ ಜಗಳದಲ್ಲಿ ಡಾ.ಜಿ ಪರಮೇಶ್ವರ್ ಮತ್ತು ಖರ್ಗೆ ನಡುವೆ ಪೈಪೋಟಿ ಶುರುವಾಗಿದೆ. ಎಲ್ಲಿ ಖರ್ಗೆ ಬಂದು ಬಿಟ್ಟಾರೋ ಎಂದು ಪರಮೇಶ್ವರ್ ಮೆಲ್ಲಗೆ ಕುರ್ಚಿಗೆ ಟವೆಲ್ ಹಾಸಿ‌ ಕುಳಿತಿದ್ದಾರೆ. ಈ ವಿಷಯ ತಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಹೊಸ ಖೆಡ್ಡಾವನ್ನು ತೋಡುತ್ತಿದ್ದಾರೆ ಎಂದು ಟೀಕಿಸಿದೆ.

  • ಕುಕ್ಕರ್ ಸ್ಫೋಟದ ಭಯೋತ್ಪಾದಕ ಪ್ರಕರಣವನ್ನು "ಭಯೋತ್ಪಾದಕ ಕೃತ್ಯ" ಎಂದು ಡಿಜಿಪಿಯವರು ತನಿಖೆಯ ಆಧಾರದಲ್ಲಿ ಘೋಷಿಸಿದರೆ @DKShivakumar ಕೆಂಡಾಮಂಡಲವಾಗಿದ್ದಾರೆ.
    ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ "ನಮ್ಮ ಬ್ರದರ್ಸ್" ಎನ್ನಬೇಕಿತ್ತೇನು? ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಉಗ್ರರ ಪರ ನಿಲ್ಲುತ್ತಿದೆ.#CommunalCongress
    1/n pic.twitter.com/8d4I6Hbzdi

ಡಿಕೆಶಿ vs ಸಿದ್ದರಾಮಯ್ಯ: ಎಲ್ಲಿ‌ ತನಗಿಂತ‌ ಬೆಳೆದುಬಿಡುತ್ತಾರೋ ಎಂದು ಡಿಕೆ ಶಿವಕುಮಾರ್ ಅಧ್ಯಕ್ಷರಾಗೋದನ್ನು ತಪ್ಪಿಸಲು ಸಿದ್ದರಾಮಯ್ಯ ಹಿಂದೆ ಆಡಿದ‌ ಆಟಗಳು ಒಂದೆರಡಲ್ಲ.‌ 17 ಜನ‌ ನಾಯಕರನ್ನು ದಿಲ್ಲಿಗೆ ಕರೆದೊಯ್ದು, ಡಿಕೆಶಿಯನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಡಿ ಎಂದು ಹಿಂದಿನಿಂದ‌ ಬಾಣ‌ ಬಿಟ್ಟಿದ್ದನ್ನು ಶಿವಕುಮಾರ್ ಇನ್ನೂ ಮರೆತಿಲ್ಲ.

  • ಓಲೈಕೆ ರಾಜಕಾರಣದ ಕುಳಿಗೆ ಬಿದ್ದ ಕಾಂಗ್ರೆಸಿಗೆ ಸ್ವತಃ ತಾನೇ ಕುಳಿಗೆ ಬಿದ್ದಿದೆ ಕುಕ್ಕರ್ ಬಾಂಬ್ ಸ್ಪೋಟವನ್ನು ಸಮರ್ಥಿಸುವ ಮೂಲಕ ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗ ಮಾಡಲುಹೊರಟಿದೆ. ಮುಂದಿನ ಚುನಾವಣೆಯಲ್ಲಿ "ಸ್ಪೋಟಕ್ಕೆ ಬೆಂಬಲ", "ಸ್ಪೋಟಕ್ಕೆ ಸಮರ್ಥನೆ" ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದರೂ ಆಶ್ಚರ್ಯವಿಲ್ಲ!#CommunalCongress
    9/n

ಈಗ ಅದೇ ಕಾರಣಕ್ಕೆ ಸಿದ್ದರಾಮಯ್ಯ ಸುತ್ತಲೂ ತಮ್ಮ ಬೆಂಬಲಿಗರ ಕೋಟೆ‌ ಕಟ್ಟಿದ್ದು ಡಿಕೆಶಿ.‌ ಈಗ ಒಳಜಗಳ ಕೇವಲ ಡಿಕೆಶಿ v/s ಸಿದ್ದರಾಮಯ್ಯ ಮಧ್ಯೆಯಷ್ಟೇ ಇಲ್ಲ. ಉಭಯ ನಾಯಕರ ಬಣಗಳ ನಡುವೆಯೂ ಹೊತ್ತಿಕೊಂಡಿದೆ. ಆಯಾ ನಾಯಕರ ಬೆಂಬಲಿಗರು ಪ್ರತಿ ಕ್ಷೇತ್ರಗಳಲ್ಲಿ ಟಿಕೆಟ್ ಜಗಳ ಶುರು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ.

  • ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತ ನಾಯಕನನ್ನೇ ಮುಂದೆ ಬಿಡುವುದು ಸಂಘದ ಕುತ್ಸಿತ ಕಾರ್ಯತಂತ್ರ.

    ಅದರಂತೆಯೇ @BSYBJP ಅವರನ್ನು ಮೂಲೆಗುಂಪು ಮಾಡುವ ಟಾಸ್ಕ್‌ನ್ನು RSS @BSBommai ಅವರ ಹೆಗಲಿಗೇರಿಸಿದೆ.

    ಕುರ್ಚಿ ಉಳಿಸಿಕೊಳ್ಳಲು ಬೊಮ್ಮಾಯಿಯವರು ಗುರುವಿಗೇ ತಿರುಮಂತ್ರ ಹಾಕುತ್ತಿದ್ದಾರೆ.#BSYmuktaBJP

    — Karnataka Congress (@INCKarnataka) December 15, 2022 " class="align-text-top noRightClick twitterSection" data=" ">

ನಾಯಕರ ಕಿತ್ತಾಟ ಎಐಸಿಸಿಗೆ ತಲೆಬಿಸಿ: ಇಬ್ಬರು ನಾಯಕರನ್ನು ದಿಲ್ಲಿಗೆ ಕರೆದು ಸಮಾಧಾನ‌ ಮಾಡುವಷ್ಟರಲ್ಲಿ ಈಗ ಉಭಯ ನಾಯಕರ ಬಣಗಳು ಕಿತ್ತಾಟ ಶುರು ಮಾಡಿಕೊಂಡಿರುವುದು ಎಐಸಿಸಿಗೆ ತಲೆ ಬಿಸಿ‌ ಶುರುವಾಗಿದೆ. ಇದು ಕಪ್ಪೆಗಳನ್ನು ಹಿಡಿದು ಕೊಳಗ ತುಂಬಿ ದಂತಾಗಿದೆ. ಅವರ ಜಗಳವನ್ನೇ ಸುಧಾರಿಸುತ್ತ ಕುಳಿತುಕೊಂಡ್ರೆ ಚುನಾವಣೆಗೆ ಹೊರಡುವುದು ಯಾವಾಗ ಎಂದು ಬಿಜೆಪಿ ಕುಹಕವಾಡಿದೆ.

  • ಅನೈತಿಕ ಮಾರ್ಗದಲ್ಲಿಯಾದರೂ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದ್ದು @BSYBJP ಅವರು,
    ಆದರೆ ಅದೇ BSYಗೆ ಬಿಜೆಪಿ ಸಲ್ಲಿಸಿದ ಕೊಡುಗೆ - ಜೈಲು, ಕಣ್ಣೀರು, ದ್ರೋಹ!

    ಅಡ್ವಾಣಿಯಂತಹ ನಾಯಕರನ್ನೇ ಮುಗಿಸಿದ ಬಿಜೆಪಿ BSY ಅವರನ್ನು ಬಿಡುವುದೇ?
    ಹತ್ತಿದ ಏಣಿಯನ್ನು ಒಡೆಯುವುದು, ತಿಂದ ತಟ್ಟೆಗೆ ಮಣ್ಣು ಹಾಕುವುದು ಬಿಜೆಪಿಯ ಹುಟ್ಟುಗುಣ.#BSYmuktaBJP

ರಾಹುಲ್ ಗಾಂಧಿ ಸ್ಟೇಜ್‌ ಮೇಲೆ‌ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರನ್ನು ತಬ್ಬಿಕೊಳ್ಳುವಂತೆ ಮಾಡಿದರೂ ಕೆಳಗಿಳಿದು ಮತ್ತದೇ ಕಿತ್ತಾಟ ಶುರು ಮಾಡುವುದನ್ನು‌ ನೋಡಿ, ಬೇಸತ್ತು ಖರ್ಗೆ ಯವರನ್ನು‌ ಡ್ಯಾಮೇಜ್ ಕಂಟ್ರೋಲ್‌ ಮಾಡಲು‌ ಬಿಟ್ಟರು, ಸೋಜಿಗವೆಂದರೆ ಖರ್ಗೆಯವರು ಮತ್ತೊಂದು ಗುಂಪಿನ ನಾಯಕ ಎಂದು ಹೈಕಮಾಂಡ್ ನಡೆಗೆ ಟಾಂಗ್ ನೀಡಿದೆ.

ಇದನ್ನೂಓದಿ:ಕಾಂಗ್ರೆಸ್ ಬಾಗಿಲು - ಕಿಟಕಿ ಇಲ್ಲದ ಮನೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.