ETV Bharat / state

ಬೆಂಗಳೂರಿನಲ್ಲಿ 3 ದಿನದಿಂದ ಮಳೆ: ರಸ್ತೆಗುಂಡಿಗಳು ಹೆಚ್ಚಳ, ವಾಹನ ಸವಾರರಿಗೆ ಸಂಕಷ್ಟ

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಕೆಲ ರಸ್ತೆಗಳು ಹಾಳಾಗಿವೆ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸವಾರರು ಸಂಚಾರಕ್ಕೆ ಪರದಾಡುತ್ತಿದ್ದಾರೆ.

author img

By

Published : Dec 13, 2022, 5:15 PM IST

Updated : Dec 13, 2022, 6:17 PM IST

ರಸ್ತೆ ಹಾಳಾಗಿರುವುದು
ರಸ್ತೆ ಹಾಳಾಗಿರುವುದು
ಬೆಂಗಳೂರಿನಲ್ಲಿ ಕಳೆದು ಮೂರು ದಿನದಿಂದ ಮಳೆ

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ರಸ್ತೆಗುಂಡಿಗಳ ಸಂಖ್ಯೆಯೂ ದ್ವಿಗುಣವಾಗಿದೆ. ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ.

ನಾಗರಬಾವಿ ಮುಖ್ಯರಸ್ತೆ, ಆರ್‌ ಟಿ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಮಡಿವಾಳ, ಗುರಪ್ಪನಪಾಳ್ಯ, ತಿಲಕನಗರ ಹಾಗು ಹೆಬ್ಬಾಳ ಸೇರಿದಂತೆ ವಿವಿಧೆಡೆ ಮಳೆಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ನೀರು ತುಂಬಿ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಳೆದ ತಿಂಗಳು ಬಿಬಿಎಂಪಿ ನಗರವನ್ನು ಗುಂಡಿ ಮುಕ್ತ ಮಾಡುವ ಗುರಿ ಹಾಕಿಕೊಂಡಿತ್ತು. ನೂರಕ್ಕೆ ನೂರರಷ್ಟು ಈ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ಮೇ ತಿಂಗಳಿನಿಂದ ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 31,211 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈವರೆಗೆ 24,957 ಗುಂಡಿಗಳನ್ನು ಮುಚ್ಚಲಾಗಿದೆ. 6,254 ಗುಂಡಿಗಳು ಮುಚ್ಚಲು ಬಾಕಿ ಉಳಿದಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ವಾಹನ ಸವಾರರೊಬ್ಬರು ಪ್ರತಿಕ್ರಿಯಿಸಿ, 'ಬಿಬಿಎಂಪಿ ದೊಡ್ಡದಾಗಿ ಕಾಣುವ ಗುಂಡಿಗಳನ್ನಷ್ಟೇ ಮುಚ್ಚುತ್ತಿದೆ. ವಾರ್ಡ್ ರಸ್ತೆಯ ಸಣ್ಣ ಗುಂಡಿಗಳಿಂದಲೂ ತೊಂದರೆಯಾಗುತ್ತಿದೆ. ಕೆಲವೆಡೆ ಗುಂಡಿ ಮುಚ್ಚಲು ಬಳಸಿದ ಜೆಲ್ಲಿ ಮತ್ತು ಎಂಸ್ಯಾಂಡ್ ಕಿತ್ತು ಬಂದು ವಾಹನಗಳು ಸ್ಕಿಡ್ ಆಗುತ್ತಿವೆ. ಆದ್ದರಿಂದ ಗುಣಮಟ್ಟದ ರಸ್ತೆಗಳನ್ನು ಪಾಲಿಕೆ ಮಾಡಬೇಕು' ಎಂದು ಆಗ್ರಹಿಸಿದರು.

ಇದನ್ನೂ ಓದಿ: ದಶಕ‌ ಕಳೆದರೂ ಸರಿಹೋಗದ ಆನೇಕಲ್​ ರಸ್ತೆ.. ಸಂಚಾರಿಗಳಿಗೆ ಪ್ರಸವ ವೇದನೆ

Last Updated : Dec 13, 2022, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.