ಬೆಂಗಳೂರು: ರಾಜ್ಯ ಸರ್ಕಾರದ 40% ಭ್ರಷ್ಟಾಚಾರ ಖಂಡಿಸಿ ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನ ನಡೆಸಿತ್ತು. ಈ ಅಭಿಯಾನವನ್ನು ಮುಂದುವರೆಸಿರುವ ಕಾಂಗ್ರೆಸ್, ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ಪೋಸ್ಟರ್ ಅಂಟಿಸಿದೆ. ಅವರು ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪೋಸ್ಟರ್ಗಳನ್ನು ಕಾಂಗ್ರೆಸ್ ಅಳವಡಿಸಿದೆ.
ಕೆರೆಗಳನ್ನು ನುಂಗಿದ ಸಾಮ್ರಾಟ್ ಅಶೋಕ್ ಎಂದು ಪೋಸ್ಟರ್ ಅಂಟಿಸಲಾಗಿದೆ. ಶನಿವಾರ ರಾತ್ರಿ ಪದ್ಮನಾಭನಗರ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಈ ಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಇನ್ನಷ್ಟು ಕ್ಷೇತ್ರಗಳಿಗೆ ಈ ರೀತಿಯ ಪೋಸ್ಟರ್ಗಳನ್ನ ವಿಸ್ತರಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಎನ್ನಲಾಗ್ತಿದೆ.
ಟ್ವೀಟ್ ಸಮರ ಮುಂದುವರಿಕೆ: ಟ್ವೀಟ್ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸುವ ಕಾರ್ಯವನ್ನು ಕಾಂಗ್ರೆಸ್ ಮುಂದುವರಿಸಿದೆ. ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡೆಯಬೇಕು. ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಲೇಬೇಕು. ನಿನ್ನೆ ಬಿಜೆಪಿಯವರು ಕಳಿಸಿದ ಬಸ್ಸು"ಡಕೋಟಾ ಇಂಜಿನ್ ಸರ್ಕಾರ, ಬ್ರೇಕ್ ಇಲ್ಲದ ಭ್ರಷ್ಟಾಚಾರ" ಎಂದು ರೋಧಿಸುತ್ತಿತ್ತು. ಕರ್ನಾಟಕ ಈಗ ಪೇ ಸಿಎಂ ಮುಕ್ತ ರಾಜ್ಯವಾಗಬೇಕಿದೆ ಎಂದಿದೆ.
ಬಿಜೆಪಿ ಲಿಂಗಾಯತ ವಿರೋಧಿ: ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲು ಬಿಜೆಪಿ ವಿಫಲ ಯತ್ನ ನಡೆಸುತ್ತಿದೆ. ಮಠಗಳ ಅನುದಾನದಲ್ಲೂ 30% ಕಮಿಷನ್ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ? 40% ಸರ್ಕಾರದ್ದು "ಜಾತ್ಯತೀತ ಭ್ರಷ್ಟಾಚಾರ" ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ. 40% ಕಮಿಷನ್ಗಾಗಿ ಕಿರುಕುಳ ನೀಡಿ 40% ಸರ್ಕಾರ ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ? ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ ಎಂದು ಕಾಂಗ್ರೆಸ್ ದೂರಿದೆ.
ಇದನ್ನೂ ಓದಿ: ಪೇ ಸಿಎಂ ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ಮಾಧ್ಯಮ ಸಂವಹನ ವಿಭಾಗಕ್ಕೆ ನೂತನ ತಂಡ ರಚನೆ
40% ಸರ್ಕಾರ ಮಕ್ಕಳ ಭವಿಷ್ಯವನ್ನು ಅಕ್ಷರಶಃ ಸರ್ವನಾಶ ಮಾಡ್ತಿದೆ. ತಿದ್ದೋಲೆಯ ನಂತರ ಮತ್ತೊಂದು ಸುತ್ತೋಲೆ. ಸರ್ಕಾರದ 'ಪಠ್ಯ ಪುಸ್ತಕ ಪರಿಷ್ಕರಣೆ' ಎಂಬ ಬೌದ್ಧಿಕ ದಿವಾಳಿತನದ ಕೆಲಸದ ಅವಾಂತರ ಇನ್ನೂ ನಿಂತಿಲ್ಲ. ಅನುಮತಿ ಹಿಂಪಡೆದ ಸಾಹಿತಿಗಳ ಪಠ್ಯವನ್ನು ಬೋಧನೆಯಿಂದ ಹಿಂಪಡೆಯಲಾಗಿದೆ. ಹೀಗಾದಲ್ಲಿ ಮಕ್ಕಳು ಓದುವುದು ಏನನ್ನ? ಎಂದು ಪ್ರಶ್ನಿಸಿದೆ.
ಬಗೆಹರಿಯದ ಪಠ್ಯದ ಗೊಂದಲ: ಅನುಮತಿ ನಿರಾಕರಿಸಿದ ಸಾಹಿತಿಗಳ ಪಠ್ಯವು ಪುಸ್ತಕದಲ್ಲಿ ಇಲ್ಲವೇ ಇಲ್ಲ ಎಂದಿದ್ದರು ಸಚಿವ ಬಿ ಸಿ ನಾಗೇಶ್. ಹಾಗಿದ್ರೆ ಈಗ ಸುತ್ತೋಲೆ ಹೊರಡಿಸಿದ್ದು ಏಕೆ? ಅರ್ಧ ಶೈಕ್ಷಣಿಕ ವರ್ಷ ಕಳೆದರೂ ಇನ್ನೂ ಪಠ್ಯದ ಗೊಂದಲ ಬಗೆಹರಿಯದೆ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿದಿರುವುದಕ್ಕೆ ಹೊಣೆ ಯಾರು? 40% ಸರ್ಕಾರ ಉತ್ತರಿಸುವುದೇ? ಎಂದು ಕಾಂಗ್ರೆಸ್ ಕೇಳಿದೆ.
-
ಅನುಮತಿ ನಿರಾಕರಿಸಿದ ಸಾಹಿತಿಗಳ ಪಠ್ಯವು ಪುಸ್ತಕದಲ್ಲಿ ಇಲ್ಲವೇ ಇಲ್ಲ ಎಂದಿದ್ದರು @BCNagesh_bjp.
— Karnataka Congress (@INCKarnataka) September 24, 2022 " class="align-text-top noRightClick twitterSection" data="
ಹಾಗಿದ್ರೆ ಈಗ ಸುತ್ತೋಲೆ ಹೊರಡಿಸಿದ್ದು ಏಕೆ?
ಅರ್ಧ ಶೈಕ್ಷಣಿಕ ವರ್ಷ ಕಳೆದರೂ ಇನ್ನೂ ಪಠ್ಯದ ಗೊಂದಲ ಬಗೆಹರಿಯದೆ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿದಿರುವುದಕ್ಕೆ ಹೊಣೆ ಯಾರು?#40PercentSarkara ಉತ್ತರಿಸುವುದೇ?
">ಅನುಮತಿ ನಿರಾಕರಿಸಿದ ಸಾಹಿತಿಗಳ ಪಠ್ಯವು ಪುಸ್ತಕದಲ್ಲಿ ಇಲ್ಲವೇ ಇಲ್ಲ ಎಂದಿದ್ದರು @BCNagesh_bjp.
— Karnataka Congress (@INCKarnataka) September 24, 2022
ಹಾಗಿದ್ರೆ ಈಗ ಸುತ್ತೋಲೆ ಹೊರಡಿಸಿದ್ದು ಏಕೆ?
ಅರ್ಧ ಶೈಕ್ಷಣಿಕ ವರ್ಷ ಕಳೆದರೂ ಇನ್ನೂ ಪಠ್ಯದ ಗೊಂದಲ ಬಗೆಹರಿಯದೆ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿದಿರುವುದಕ್ಕೆ ಹೊಣೆ ಯಾರು?#40PercentSarkara ಉತ್ತರಿಸುವುದೇ?ಅನುಮತಿ ನಿರಾಕರಿಸಿದ ಸಾಹಿತಿಗಳ ಪಠ್ಯವು ಪುಸ್ತಕದಲ್ಲಿ ಇಲ್ಲವೇ ಇಲ್ಲ ಎಂದಿದ್ದರು @BCNagesh_bjp.
— Karnataka Congress (@INCKarnataka) September 24, 2022
ಹಾಗಿದ್ರೆ ಈಗ ಸುತ್ತೋಲೆ ಹೊರಡಿಸಿದ್ದು ಏಕೆ?
ಅರ್ಧ ಶೈಕ್ಷಣಿಕ ವರ್ಷ ಕಳೆದರೂ ಇನ್ನೂ ಪಠ್ಯದ ಗೊಂದಲ ಬಗೆಹರಿಯದೆ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿದಿರುವುದಕ್ಕೆ ಹೊಣೆ ಯಾರು?#40PercentSarkara ಉತ್ತರಿಸುವುದೇ?
ಚೀತಾ ಬಂತು ಎಂದು ಬೀಗಿದವರು ರೂಪಾಯಿ ಕುಸಿತಕ್ಕೆ ಮೌನವಾಗಿದ್ದಾರೆ. 2014ರಿಂದ ಸತತ ಕುಸಿತ ಕಾಣುತ್ತಿರುವ ರೂಪಾಯಿ ಮೌಲ್ಯ ಶನಿವಾರ ಐತಿಹಾಸಿಕ ಕುಸಿತ ಕಂಡಿದೆ. ಜನಸಾಮಾನ್ಯರ ಜೇಬಿನ ತೂತು ಇನ್ನಷ್ಟು ದೊಡ್ಡದಾಗಲಿದೆ. ಇದೇನಾ ಅಚ್ಛೆ ದಿನ್? ವೇದಿಕೆ ಕುಟ್ಟಿ ಸುಳ್ಳಿನ ಭಾಷಣ ಬಿಗಿದಿದ್ದ ಡಾಲರ್ ನಳಿನಣ್ಣ ಯಾನೆ ನಳಿನ್ ಕುಮಾರ್ ಕಟೀಲು ಅವರು ಈಗ ಎಲ್ಲೋದ್ರು? ಎಂದು ಎಂದು ಕಾಂಗ್ರೆಸ್ ಕೇಳಿದೆ.