ETV Bharat / state

ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗೆ ಕೊರೊನಾ: ಸುತ್ತಲಿನ ಠಾಣೆಗಳಲ್ಲಿ ಹೈ ಅಲರ್ಟ್​ - ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗೆ ಪಾಸಿಟಿವ್

ಪಾದರಾಯಪುರದ ಆರೋಪಿ ಪಟ್ಟಣದಲ್ಲಿ ಕಬ್ಬಿಣ ಕಳ್ಳತನ ಮಾಡಲೆಂದು ಬಂದಿದ್ದ. ಆತನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ವೇಳೆ ಆರೋಪಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.

Positive for accused in Hebbagodi police station
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗೆ ಪಾಸಿಟಿವ್
author img

By

Published : May 20, 2020, 4:07 PM IST

ಆನೇಕಲ್​​: ಕಳೆದ ರಾತ್ರಿ ಪಾದರಾಯನಪುರ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಿದಾಗ ಆತನಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಪೊಲೀಸರು ಆತಂಕಗೊಂಡಿದ್ದಾರೆ.

ಪಾದರಾಯಪುರದ ಆರೋಪಿ ಪಟ್ಟಣದಲ್ಲಿ ಕಬ್ಬಿಣ ಕಳ್ಳತನ ಮಾಡಲೆಂದು ಬಂದಿದ್ದ. ಆತನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿದ್ದರು. ಈ ವೇಳೆ ಆರೋಪಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆಯ ಅಧಿಕಾರಿಗಳಿಗೆ ಕ್ವಾರಂಟೈನ್​ಗೆ ಸೂಚಿಸಲಾಗಿದ್ದು, ಠಾಣೆ ಸುತ್ತ ಸ್ಯಾನಿಟೈಸರ್​​ ಸಿಂಪಡಣೆ ಮಾಡಲಾಗಿದೆ.

ಪಟ್ಟಣ ಸೇರಿದಂತೆ ಜಿಗಣಿ, ಬನ್ನೇರುಘಟ್ಟ, ಸರ್ಜಾಪುರ, ಅತ್ತಿಬೆಲೆ, ಸೂರ್ಯನಗರ ಸೇರಿ ಆನೇಕಲ್ ಉಪ ವಿಭಾಗದ ಪೊಲೀಸ್ ಠಾಣೆಗಳು ಹೈ ಅಲರ್ಟ್ ಆಗಿದ್ದು, ಕಡ್ಡಾಯವಾಗಿ ಕೈ ತೊಳೆಯಲು ಸೋಪು ನೀರು ಹಾಗೂ ಸ್ಯಾನಿಟೈಸರ್​ ಬಳಕೆ ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಗಾ ವಹಿಸಲಾಗಿದೆ.

ಹೆಬ್ಬಗೋಡಿಯ 30 ಪೊಲೀಸರಿಗೆ ಕೊರೊನಾ ಪರೀಕ್ಷೆ ನಡೆಸುತ್ತಿರುವ ಬೆನ್ನಲ್ಲೇ ಬೆದರಿರುವ ಪೊಲೀಸರು, ಜನರಿಗೆ ಅಂತರ ಕಾಯ್ದುಕೊಂಡು ಒಬ್ಬರ ನಂತರ ಒಬ್ಬರು ಬರುವಂತೆ ಸೂಚಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.