ETV Bharat / state

ಅರ್ಧ ವರ್ಷ ಕಳೆದರೂ ವಿಶೇಷ ಅಭಿವೃದ್ಧಿ ಯೋಜನೆಯತ್ತ ಬೊಮ್ಮಾಯಿ‌ ಸರ್ಕಾರಕ್ಕಿಲ್ಲ ಕಾಳಜಿ! - ಈಟಿವಿ ಭಾರತ ಕನ್ನಡ

ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ತೀರಾ ಕಳಪೆ ಪ್ರಗತಿ ಮುಂದುವರಿಸಿದೆ. 2022-23 ಸಾಲಿನ ಮೊದಲಾರ್ಧ ವರ್ಷ ಪೂರ್ಣವಾಗಿದ್ದರೂ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನ ಪ್ರಗತಿ ಮಾತ್ರ ಅತ್ಯಂತ ತಳಮಟ್ಟದಲ್ಲಿದೆ.

poor-progress-in-special-development-plan-of-bommai-government
ಅರ್ಧ ವರ್ಷ ಕಳೆದರೂ ವಿಶೇಷ ಅಭಿವೃದ್ಧಿ ಯೋಜನೆಯತ್ತ ಬೊಮ್ಮಾಯಿ‌ ಸರ್ಕಾರಕ್ಕಿಲ್ಲ ಕಾಳಜಿ!
author img

By

Published : Oct 4, 2022, 5:31 PM IST

ಬೆಂಗಳೂರು : ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರಗಳು ಗಟ್ಟಿ ಧ್ವನಿಯಲ್ಲೇ ಮಾತನಾಡುತ್ತವೆ. ಅದಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನವನ್ನೇನು ಘೋಷಣೆ ಮಾಡುತ್ತವೆ. ಆದರೆ, ವಾಸ್ತವದಲ್ಲಿ ಅನುದಾನ ಬಳಕೆ ಮಾತ್ರ ನಗಣ್ಯವಾಗಿರುತ್ತದೆ. ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ತೀರಾ ಕಳಪೆ ಪ್ರಗತಿ ಮುಂದುವರಿಸಿದೆ. 2022-23 ಸಾಲಿನ ಮೊದಲಾರ್ಧ ವರ್ಷ ಪೂರ್ಣವಾಗಿದ್ದರೂ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನ ಪ್ರಗತಿ ಮಾತ್ರ ಅತ್ಯಂತ ತಳಮಟ್ಟದಲ್ಲಿದೆ.

ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದಲ್ಲಿ ಕಳಪೆ ಪ್ರದರ್ಶನ : ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದಲ್ಲಿ ಎಡವಿದೆ. ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ತೀರಾ ಶೋಚನೀಯವಾಗಿದೆ. ಡಾ.ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕುಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ. 12 ವರ್ಷಗಳಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಕೊಟ್ಟರೂ ಅದರ ಬಳಕೆ, ವೆಚ್ಚ ಇಲ್ಲದೇ ಅಭಿವೃದ್ಧಿ ಮಾತ್ರ ನಗಣ್ಯವಾಗಿದೆ. ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾ‌ನ ಬಳಕೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.

ವಿಶೇಷ ಅಭಿವೃದ್ಧಿ ಯೋಜನೆಯಡಿ ಪ್ರಗತಿ ಕೇವಲ ಶೇ 9.69: 2022-23 ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ (SDP) ಬೊಮ್ಮಾಯಿ ಸರ್ಕಾರ 3,289.63 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಆರ್ಥಿಕ ವರ್ಷದ ಆರು ತಿಂಗಳು ಪೂರ್ಣಗೊಂಡಿದೆ. ಆದರೂ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದ ಪ್ರಗತಿಗೆ ಯಾವುದೇ ವೇಗ ಸಿಕ್ಕಿಲ್ಲ. ಅನುದಾನದ ಬಿಡುಗಡೆಯೇ ಅಲ್ಪಸ್ವಲ್ಪವೇ ಆಗಿದ್ದು, ಇತ್ತ ಅದರ ಬಳಕೆ ಇನ್ನೂ ಅತ್ಯಲ್ಪವಾಗಿದೆ.

ಸರ್ಕಾರಕ್ಕಿಲ್ಲ ಅಭಿವೃದ್ಧಿ ಬಗ್ಗೆ ಕಾಳಜಿ : ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಬೊಮ್ಮಾಯಿ ಸರ್ಕಾರ ಮೊದಲ ಮೂರು ತಿಂಗಳಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಆದರೆ, ಇದೀಗ ಎರಡನೇ ತ್ರೈ ಮಾಸಿಕದಲ್ಲೂ ಅತ್ಯಂತ ಕಳಪೆ ಪ್ರಗತಿ ತೋರಿದೆ. 13 ಇಲಾಖೆಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2022-23 ಸಾಲಿನ ಸೆಪ್ಟೆಂಬರ್ ವರೆಗೆ ಬಿಡುಗಡೆಯಾದ ಅನುದಾನ ಕೇವಲ 635.63 ಕೋಟಿ ಮಾತ್ರ.

ಒಟ್ಟು 3,289.63 ಕೋಟಿ ಅನುದಾನ ಹಂಚಿಕೆಯಲ್ಲಿ ಮೊದಲಾರ್ಧ ವರ್ಷದಲ್ಲಿ ಕೇವಲ 635.63 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಈ ಪೈಕಿ ಖರ್ಚು ಮಾಡಿದ್ದು ಕೇವಲ 318.87 ಕೋಟಿ ರೂ. ಮಾತ್ರ. ಅಂದರೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಒಟ್ಟು ಬಿಡುಗಡೆಯ ಕೇವಲ 50% ವೆಚ್ಚ ಮಾಡಲಾಗಿದೆ.

ಇನ್ನು ಒಟ್ಟು ಹಂಚಿಕೆ ಮುಂದೆ ಕಳೆದ ಆರು ತಿಂಗಳಲ್ಲಿ ಈವರೆಗೆ ವೆಚ್ಚ ಮಾಡಿದ್ದು ಕೇವಲ 9.69% ಎಂದು ಸಾಂಖ್ಯಿಕ ಇಲಾಖೆ ಅಂಕಿ ಅಂಶ ನೀಡಿದೆ. ಒಟ್ಟು 5 ಇಲಾಖೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ ಯಾವುದೇ ವೆಚ್ಚವನ್ನೂ ಮಾಡಿಲ್ಲ. ಹೀಗಾಗಿ ಐದು ಪ್ರಮುಖ ಇಲಾಖೆಗಳ ಪ್ರಗತಿ ಶೂನ್ಯವಾಗಿದೆ.

SDPಯಡಿ ಇಲಾಖಾವಾರು ಪ್ರಗತಿ :

ವಸತಿ ಇಲಾಖೆ :

ಒಟ್ಟು ಹಂಚಿಕೆ- 300 ಕೋಟಿ
ಬಿಡುಗಡೆ- 37.50 ಕೋಟಿ
ವೆಚ್ಚ- 110.24 ಕೋಟಿ
ಪ್ರಗತಿ- ಶೇ 36.75

ಕೃಷಿ ಇಲಾಖೆ :

ಒಟ್ಟು ಹಂಚಿಕೆ- 45 ಕೋಟಿ
ಬಿಡುಗಡೆ- 20.25 ಕೋಟಿ
ವೆಚ್ಚ- 17.37 ಕೋಟಿ
ಪ್ರಗತಿ- ಶೇ 38.60

ಆರೋಗ್ಯ ಇಲಾಖೆ :

ಒಟ್ಟು ಹಂಚಿಕೆ- 483.20 ಕೋಟಿ
ಬಿಡುಗಡೆ- 97.17 ಕೋಟಿ
ವೆಚ್ಚ- 132.34 ಕೋಟಿ
ಪ್ರಗತಿ- ಶೇ. 27.39

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ :

ಒಟ್ಟು ಹಂಚಿಕೆ- 60 ಕೋಟಿ
ಬಿಡುಗಡೆ- 19.03 ಕೋಟಿ
ವೆಚ್ಚ- 15.47 ಕೋಟಿ
ಪ್ರಗತಿ- ಶೇ 25.78

ಸಮಾಜ ಕಲ್ಯಾಣ ಇಲಾಖೆ :

ಒಟ್ಟು ಹಂಚಿಕೆ- 85 ಕೋಟಿ
ಬಿಡುಗಡೆ- 42.50 ಕೋಟಿ
ವೆಚ್ಚ- 7.50 ಕೋಟಿ
ಪ್ರಗತಿ- ಶೇ. 8.82

ಗ್ರಾಮೀಣಾಭಿವೃದ್ಧಿ ಇಲಾಖೆ :

ಒಟ್ಟು ಹಂಚಿಕೆ- 527.67 ಕೋಟಿ
ಬಿಡುಗಡೆ- 19.28 ಕೋಟಿ
ವೆಚ್ಚ- 24.64 ಕೋಟಿ
ಪ್ರಗತಿ- ಶೇ 4.67

ಶಿಕ್ಷಣ ಇಲಾಖೆ :

ಒಟ್ಟು ಹಂಚಿಕೆ- 456.26 ಕೋಟಿ
ಬಿಡುಗಡೆ- 130.90 ಕೋಟಿ
ವೆಚ್ಚ- 3.80 ಕೋಟಿ
ಪ್ರಗತಿ- ಶೇ 0.83

ಯೋಜನಾ ಇಲಾಖೆ :

ಒಟ್ಟು ಹಂಚಿಕೆ- 1,000 ಕೋಟಿ
ಬಿಡುಗಡೆ- 250 ಕೋಟಿ
ವೆಚ್ಚ- 7.51 ಕೋಟಿ
ಪ್ರಗತಿ- ಶೇ 0.75

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ :

ಒಟ್ಟು ಹಂಚಿಕೆ- 75 ಕೋಟಿ
ಬಿಡುಗಡೆ- 2.50 ಕೋಟಿ
ವೆಚ್ಚ- 0
ಪ್ರಗತಿ- ಶೇ 0

ಕೌಶಲ್ಯಾಭಿವೃದ್ಧಿ ಇಲಾಖೆ:

ಒಟ್ಟು ಹಂಚಿಕೆ- 30 ಕೋಟಿ
ಬಿಡುಗಡೆ- 0%
ವೆಚ್ಚ- 0
ಪ್ರಗತಿ- ಶೇ 0

ಲೋಕೋಪಯೋಗಿ ಇಲಾಖೆ:

ಒಟ್ಟು ಹಂಚಿಕೆ- 70 ಕೋಟಿ
ಬಿಡುಗಡೆ- 0
ವೆಚ್ಚ- 0
ಪ್ರಗತಿ-ಶೇ 0

ಉನ್ನತ ಶಿಕ್ಷಣ ಇಲಾಖೆ:

ಒಟ್ಟು ಹಂಚಿಕೆ- 50 ಕೋಟಿ
ಬಿಡುಗಡೆ- 1.50 ಕೋಟಿ
ವೆಚ್ಚ- 0
ಪ್ರಗತಿ-ಶೇ 0

ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ:

ಒಟ್ಟು ಹಂಚಿಕೆ- 107.50 ಕೋಟಿ
ಬಿಡುಗಡೆ- 15 ಕೋಟಿ
ವೆಚ್ಚ- 0
ಪ್ರಗತಿ- ಶೇ 0

ಇದನ್ನೂ ಓದಿ : ಗಾಂಧಿ‌ ಕುಟುಂಬ ಒಲ್ಲೆ ಎಂದಿದಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ: ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.