ಬೆಂಗಳೂರು: ಪೋನ್ ಕದ್ದಾಲಿಕೆ ಪ್ರಕರಣ ಆರೋಪ ಸಂಬಂಧ ವಿಚಾರಣೆಗೆ ಇಂದು ಹಾಜರಾಗುವಂತೆ ನಗರ ಕೇಂದ್ರ ವಿಭಾಗದ ಪೊಲೀಸರು ನೀಡಿದ್ದ ನೋಟಿಸ್ಗೆ ಶಾಸಕ ಅರವಿಂದ ಬೆಲ್ಲದ ಗೈರಾಗಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದರೂ ಸಕಾರಣ ನೀಡದೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ. ಅಲ್ಲದೆ ಕಾಲಾವಕಾಶ ನೀಡುವಂತೆ ಪೊಲೀಸರಿಗೆ ಬೆಲ್ಲದ ಅವಕಾಶ ಕೇಳಿಲ್ಲ. ಈ ನಿಟ್ಟಿನಲ್ಲಿ ಮತ್ತೊಂದು ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಪೋನ್ ಕದ್ದಾಲಿಕೆ ಆರೋಪ ಸಂಬಂಧ ಪ್ರಕರಣ ತನಿಖೆ ನಡೆಸುತ್ತಿರುವ ನಿಯೋಜಿತರಾಗಿರುವ ಎಸಿಪಿ ಪೃಥ್ವಿ ಎಂಬುವವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಮತ್ತೊಂದೆಡೆ ಬೆಲ್ಲದ ನೀಡಿದ್ದ ನಂಬರ್ನ ಸಿಡಿಆರ್ ಪಡೆದ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯು ಹೈದರಾಬಾದ್ ಮೂಲದವನು ಎಂಬುದನ್ನು ಪತ್ತೆ ಹಚ್ಚಿದ್ದರು. ತನಿಖೆ ವೇಳೆ ಆತ ಶಾಸಕರ ಆಪ್ತ ಎಂಬುದು ಬಯಲಿಗೆ ಬಂದಿತ್ತು. ಶಾಸಕರಿಗೆ ನಾನು ತುಂಬಾ ಆಪ್ತ ಎಂದು ಸಿಮ್ ವಾರಸುದಾರ ಹೇಳಿಕೊಂಡಿದ್ದ ಎನ್ನಲಾಗಿದೆ.
ಓದಿ: ನೀವು ಬೇಕಾದರೂ ಸಿಎಂ ಸ್ಥಾನಕ್ಕೆ ಪ್ರಯತ್ನಿಸಿ: ಡಿ.ಕೆ. ಶಿವಕುಮಾರ್ ಹಾಸ್ಯ ಚಟಾಕಿ