ETV Bharat / state

ರಾಜಕೀಯ ಗಣಿತ ಅಲ್ಲ, ರಾಜಕೀಯವೆಂಬುದು ಕೆಮಿಸ್ಟ್ರಿ, ಅದೊಂದು ಸರ್ಕಸ್: ಸ್ಪೀಕರ್ ಯು ಟಿ ಖಾದರ್ - ರಾಜಕೀಯವೆಂಬುದು ಸರ್ಕಸ್

''ಶಾಸಕರು ಸಮಾಧಾನದಿಂದ ವರ್ತನೆ ಮಾಡಬೇಕು. ರಾಜಕೀಯ ಒಂದು ಸರ್ಕಸ್ ಇದ್ದ ಹಾಗೆ. ಅದರಲ್ಲಿ ಹುಲಿ ಇರುತ್ತೆ, ಮಂಗ ಇರುತ್ತೆ, ಜೋಕರ್ ಇರುತ್ತೆ. ರಿಂಗ್ ಮಾಸ್ಟರ್ ನೀವು ಆಗಬೇಕು. ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಗುಣ ಬೆಳೆಸಬೇಕು'' ಎಂದು ವಿಧಾನಸಭೆ ಸ್ವೀಕರ್​ ಯು.ಟಿ. ಖಾದರ್ ನೂನತ ಶಾಸಕರಿಗೆ ಸಲಹೆ ನೀಡಿದರು.

Speaker U T Khader
ರಾಜಕೀಯ ಗಣಿತ ಅಲ್ಲ, ರಾಜಕೀಯವೆಂಬುದು ಕೆಮಿಸ್ಟ್ರಿ, ಸರ್ಕಸ್: ಸ್ಪೀಕರ್ ಯು.ಟಿ. ಖಾದರ್
author img

By

Published : Jun 26, 2023, 5:16 PM IST

ಬೆಂಗಳೂರು: ''ರಾಜಕೀಯ ಗಣಿತ ಅಲ್ಲ, ರಾಜಕೀಯವೆಂಬುದು ಕೆಮಿಸ್ಟ್ರಿ ಆಗಿದೆ'' ಎಂದು ವಿಧಾನಸಭೆ ಸ್ವೀಕರ್​ ಯು. ಟಿ. ಖಾದರ್ ಹೇಳಿದರು. ನೆಲಮಂಗಲದ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ‌ಸ್‌- ಕ್ಷೇಮವನದಲ್ಲಿ 16ನೇ ವಿಧಾನಸಭೆಯ ನೂತನ ಸದಸ್ಯರಿಗೆ ಇಂದಿನಿಂದ ಮೂರು ದಿನಗಳವರೆಗೆ ಏರ್ಪಡಿಸಲಾದ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು. ''ರಾಜಕೀಯವೆನ್ನುವುದು ಗಣಿತ ಅಲ್ಲ. ರಾಜಕೀಯದಲ್ಲಿ ಎಲ್ಲೂ ಪರಿಹಾರ ಸಿಗಲ್ಲ. ರಾಜಕೀಯವೆಂಬುದು ಕೆಮಿಸ್ಟ್ರಿ. ಇಲ್ಲಿ ರಿಯಾಕ್ಷನ್ ಜಾಸ್ತಿ. ಇಲ್ಲಿ 2+2 ನಾಲ್ಕು ಆಗಲ್ಲ. ಅದು 22 ಆಗಬಹುದು. ಅದು ಮೈನಸ್ ಆಗದಂತೆ ನೋಡಬೇಕು'' ಎಂದು ನೂತನ ಶಾಸಕರಿಗೆ ಕಿವಿಮಾತು ಹೇಳಿದರು.

''ಶಾಸಕರು ಸಮಾಧಾನದಿಂದ ವರ್ತನೆ ಮಾಡಬೇಕು. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಬೇಕು. ರಾಜಕೀಯ ಒಂದು ಸರ್ಕಸ್ ಇದ್ದ ಹಾಗೆ. ಅದರಲ್ಲಿ ಹುಲಿ ಇರುತ್ತೆ, ಮಂಗ ಇರುತ್ತೆ, ಜೋಕರ್ ಇರುತ್ತೆ. ರಿಂಗ್ ಮಾಸ್ಟರ್ ನೀವು ಆಗಬೇಕು. ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಗುಣ ಬೆಳೆಸಬೇಕು. ರಾಜ್ಯ ಇಂದು ಬಲಿಷ್ಠ ಆಗಬೇಕು. ಶಾಸಕರ ಒಗ್ಗಟ್ಟು ರಾಜ್ಯದ ಶಕ್ತಿ. ನಮ್ಮ ಗುರಿ ಎಲ್ಲರೂ ಒಗ್ಗಟ್ಟಾಗಿರಬೇಕು'' ಎಂದು ತಿಳಿಸಿದರು.

''ಸಾಮರಸ್ಯದ ಸಮಾಜ ನಿರ್ಮಾಣ ನಮ್ಮ ಮೊದಲ ಆದ್ಯತೆ. ಆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಜಕೀಯದ ಮುಖ್ಯ ಗುರಿ ಕೋಮು ಸಾಮರಸ್ಯ ಕಾಪಾಡುವುದು. ಹಿಂದೂ, ಮುಸ್ಲಿಂ, ಕ್ರಶ್ಚಿಯನ್ ಕೈ ಕೈ ಹಿಡಿದು ಒಟ್ಟಾಗಿ ನಡೆಯಬೇಕು. ಒಂದು ಕಾರ್ಯಕ್ರಮ ಮಾಡುವಾಗ ಟೀಕೆ, ಟಿಪ್ಪಣಿ ಸ್ವಾಭಾವಿಕ. ಅದು ಪ್ರಜಾಪ್ರಭುತ್ವದ ವಿಶೇಷತೆ. ಸ್ಪೀಕರ್ ಆಗಿ ಜೋಡಿಸುವುದು ನನ್ನ ಕೆಲಸ. ಬೇರ್ಪಡಿಸುವುದು ನನ್ನ ಕೆಲಸ ಅಲ್ಲ. ಶಾಸಕರು ಎಲ್ಲರೂ ಶಾಕಬ್ಜರ್ ತರ ಇರಬೇಕು'' ಎಂದು ಸಲಹೆ ನೀಡಿದರು. ಶಾಸಕರಿಗೆ ತರಬೇತಿ ಸಂಸ್ಥೆ ಪ್ರಾರಂಭಿಸುವ ಯೋಚನೆ ಇದೆ. ರಾಜಕಾರಣ ಬಿಟ್ಟು ಮಾಧ್ಯಮದವರು ಇರಲು ಸಾಧ್ಯವಿಲ್ಲ. ಅದೇ ಮಾಧ್ಯಮದವರನ್ನು ಬಿಟ್ಟು ನಾವು ಇರಲು ಸಾಧ್ಯವಿಲ್ಲ'' ಎಂದರು.

ಮೂರು ದಿನ ತರಬೇತಿ ಶಿಬಿರ: ನೆಲಮಂಗಲದ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ‌ಸ್‌-ಕ್ಷೇಮವನದಲ್ಲಿ 16ನೇ ವಿಧಾನಸಭೆಯ ನೂತನ ಸದಸ್ಯರಿಗೆ ಇಂದಿನಿಂದ ಮೂರು ದಿನಗಳವರೆಗೆ ಏರ್ಪಡಿಸಲಾದ ತರಬೇತಿ ಶಿಬಿರ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪ ಬೆಳಗಿಸುವ ಮೂಲಕ ಶಿಬಿರ ಉದ್ಘಾಟಿಸಿದರು. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್ ಹೊರಟ್ಟಿ, ವಿಧಾನಸಭಾ ಸಭಾಧ್ಯಕ್ಷ ಯು. ಟಿ. ಖಾದರ್ ಫರೀದ್, ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝಡ್. ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರಕುಮಾರ್ ಸೇರಿದಂತೆ ನೂತನ ಶಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಅರಣ್ಯದಲ್ಲಿ ಮರ ಕಡಿದರೆ, ಒತ್ತುವರಿ ಮಾಡಿದರೆ ಕಠಿಣ ಕ್ರಮ.. ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.