ಬೆಂಗಳೂರು: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಮನೆಯಲ್ಲೇ ತಂಗಿದ್ದರು.
ದೈವ ಭಕ್ತರಾಗಿರುವ ದೇವೇಗೌಡರ ಕುಟುಂಬ ಪೂಜೆ, ಶಾಸ್ತ್ರಗಳಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ. ಹಾಗಾಗಿ, ಗ್ರಹಣ ಮುಗಿದ ಬಳಿಕ ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ದೇವೇಗೌಡರು, ಪತ್ನಿ ಚನ್ನಮ್ಮ ಹಾಗೂ ಜೆಪಿ ನಗರದ ತಮ್ಮ ನಿವಾಸದಲ್ಲಿ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ವಿಶೇಷ ಪೂಜೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಗ್ರಹಣ ಇದ್ದ ಕಾರಣಕ್ಕೆ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸದ ಎದುರು ಕಾರ್ಯಕರ್ತರಾಗಲಿ, ಅವರ ಭೇಟಿಗೆ ತೆರಳುವ ಮುಖಂಡರಾಗಲಿ ಯಾರೂ ಕೂಡಾ ಕಂಡುಬರಲಿಲ್ಲ.