ETV Bharat / state

ಕಾಲೇಜು ವಿದ್ಯಾರ್ಥಿಗಳಿಗೆ ಪ್ರಜಾಕೀಯ ಪಾಠಹೇಳಿದ ಸ್ಯಾಂಡಲ್‌ವುಡ್ 'ಬುದ್ಧಿವಂತ'..

ಬೆಂಗಳೂರಿನ ಸುರಾನ ಕಾಲೇಜೊಂದರ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಿಯಲ್​ ಸ್ಟಾರ್​​​​ ಉಪೇಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಜಾಕೀಯ ಪಾಠ ಮಾಡಿ, ಪಕ್ಷ ನೋಡಿ ವೋಟ್ ಹಾಕಬೇಡಿ ವ್ಯಕ್ತಿ ನೋಡಿ ವೋಟ್ ಹಾಕಿ ಎಂದು ತಿಳಿ ಹೇಳಿದರು.

ಪ್ರಜಾಕೀಯದ ಪಾಠ ಮಾಡಿದ ಉಪೇಂದ್ರ
author img

By

Published : Aug 17, 2019, 11:50 PM IST

ಬೆಂಗಳೂರು: ಸ್ಯಾಂಡಲ್‌ವುಡ್​​​ನ ಬುದ್ಧಿವಂತ, ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಜಾಕೀಯದ ಗುಂಗಿನಲ್ಲೆ ಇರ್ತಾರೆ. ಸಿನಿಮಾ ಪತ್ರಿಕಾಗೋಷ್ಠಿಯಾಗಿರಲಿ, ಖಾಸಗಿ ಕಾರ್ಯಕ್ರಮವಾಗಿರಲಿ ಎಲ್ಲೇ ಹೋದರು ಪ್ರಜಾಕೀಯವನ್ನೇ ಜಪಿಸ್ತಿರ್ತಾರೆ. ಸೂಪರ್ ಸ್ಟಾರ್ ಉಪೇಂದ್ರ ಇಂದು ನಗರದ ಸುರಾನ ಕಾಲೇಜಿನ ಸ್ಟುಡೆಂಟ್ ಯೂನಿಯನ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಉಪೇಂದ್ರ, ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಜಾಕೀಯದ ಪಾಠ ಮಾಡಿದ್ದಾರೆ.

ಪ್ರಜಾಕೀಯದ ಪಾಠ ಮಾಡಿದ ನಟ ಉಪೇಂದ್ರ..

ಅಲ್ಲದೆ ಆ ಕಾಲೇಜಿನ ವಿದ್ಯಾರ್ಥಿಯೊಬ್ಬ ಮೈತ್ರಿ ಸರ್ಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಉಪ್ಪಿ, ತಮ್ಮ ಪ್ರಜಾಕೀಯದ ಕಾನ್ಸೆಪ್ಟ್‌ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಸ್ತುತ ರಾಜಕಾರಣಿಗಳು ನನಗಿಷ್ಟು ಕೊಡು, ಇಲ್ಲದಿದ್ದರೆ ಸರ್ಕಾರ ಉರುಳಿಸುತ್ತೇನೆ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ನನಗೆ 50 ಕೋಟಿ ಕೊಡದಿದ್ದರೆ ಸರ್ಕಾರವನ್ನು ಬೀಳಿಸುತ್ತೇನೆ, ನನಗೆ ಅಧಿಕಾರಬೇಕು. ಈ ರೀತಿಯ ರಾಜಕೀಯ ಪ್ರಸ್ತುತವಾಗಿದೆ ಎಂದು ಕುಟುಕಿದರು. ಅದಕ್ಕೆ ನಾನು ಹೇಳುವುದು ಪಕ್ಷ ನೋಡಿ ವೋಟ್ ಹಾಕಬೇಡಿ. ವ್ಯಕ್ತಿ ನೋಡಿ ವೋಟ್ ಹಾಕಿ. ನಮ್ಮ ಪ್ರಜಾಕೀಯ ಅಧಿಕಾರ ಅಥವಾ ಹಣದ ಹಿಂದೆ ಹೋಗೋದಿಲ್ಲ. ಕಾರ್ಮಿಕರಾಗಿ ಕೆಲಸ ಮಾಡುತ್ತಿದೆ ಎಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಜಾಕೀಯ ಪಾಠ ಹೇಳಿದರು.

ಕಾರ್ಯಕ್ರಮದಲ್ಲಿ ಸುರಾನ ಕಾಲೇಜಿನ ವತಿಯಿಂದ ಮೋಟಾರ್ ಸೈಕಲ್ ರೇಸ್‌ನಲ್ಲಿ ವರ್ಲ್ಡ್ ಕಪ್ ಗೆದ್ದಿದ್ದ ಮೊದಲ ಮಹಿಳಾ ಐಶ್ವರ್ಯ ಪಿಸ್ಸೆ ಅವರಿಗೆ ಸನ್ಮಾನ ಮಾಡಲಾಯಿತು. ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಉಪ್ಪಿ ಜೊತೆ ಸೆಲ್ಫಿಗೆ ಮುಗಿಬಿದ್ದರು. ಆಗ ಸ್ವತಃ ಉಪೇಂದ್ರ ಅವರೇ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕಾರಿನಲ್ಲಿ ನಿಂತು ಅವರೇ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.

Intro:ಸ್ಯಾಂಡಲ್ವುಡ್ನ ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಜಾಕೀಯದ ಗುಂಗಿನಲ್ಲೆ ಇರ್ತಾರೆ. ಸಿನಿಮಾ ಪತ್ರಿಕಾಗೋಷ್ಠಿ ಯಾಗಿರಲಿ, ಖಾಸಗಿ ಕಾರ್ಯಕ್ರಮವಾಗಿರಲಿ ಎಲ್ಲೇ ಹೋದರು ಪ್ರಜಾಕೀಯವನ್ನೆ ಜಪಿಸ್ತಿರ್ತಾರೆ. ಇನ್ನು ಈಗ ಯಾಕಪ್ಪ ನಾವು ಈ ಕಥೆ ಹೇಳುತ್ತಿದ್ದೇವೆ ಅಂತ ಅಂದ್ಕೊಂಡ್ರ. ಕನ್ಫ್ಯೂಸ್ ಆಗ್ಬೇಡಿ ಅದಕ್ಕೂ ಕಾರಣ ಇದೆ. ಅದೇನಪ್ಪ ಅಂದ್ರೆ ಸೂಪರ್ ಸ್ಟಾರ್ ಉಪೇಂದ್ರ ಇಂದು ನಗರದ ಸುರಾನ ಕಾಲೇಜಿನ ಸ್ಟುಡೆಂಟ್ ಯಯೂನಿಯನ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಅ ವೇಳೆ ವೇದಿಕೆಯಲ್ಲಿ ಮಾತನಾಡಿದ ಉಪೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಜಾಕೀಯದ ಪಾಠ ಮಾಡಿದರು. ಅಲ್ಲದೆ ಆ ಕಾಲೇಜಿನ ವಿದ್ಯಾರ್ಥಿಯೊಬ್ಬ ಮೈತ್ರಿ ಸರ್ಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಉಪ್ಪಿ ತಮ್ಮ ಪ್ರಜಾಕೀಯ ದ ಕಾನ್ಸೆಪ್ಟನ್ನು ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಸ್ತುತ ರಾಜಕಾರಣಿಗಳು ನನಗಿಷ್ಟು ಕೊಡು ಇಲ್ಲದಿದ್ದರೆ ಸರ್ಕಾರ ಉರುಳಿಸುತ್ತೇನೆ ಎನ್ನುವ ಮನಸ್ಥಿತಿಯಲ್ಲಿದ್ದಾರೆ.

Body:ನನಗೆ 50 ಕೋಟಿ ಕೊಡದಿದ್ದರೆ ಸರ್ಕಾರವನ್ನು ಬೀಳುತ್ತೇನೆ ನನಗೆ ಅಧಿಕಾರ ಬೇಕು ಈ ರೀತಿಯ ರಾಜಕೀಯ ಪ್ರಸ್ತುತವಾಗಿದೆ. ಅದಕ್ಕೆ ನಾನು ಹೇಳುವುದು ಪಕ್ಷ ನೋಡಿ ವೋಟ್ ಹಾಕಬೇಡಿ. ವ್ಯಕ್ತಿ ನೋಡಿ ವೋಟ್ ಹಾಕಿ. ನಮ್ಮ ಪ್ರಜಾಕೀಯ ಅಧಿಕಾರದ ಹಣದ ಹಿಂದೆ ಹೋಗೋದಿಲ್ಲ ಕಾರ್ಮಿಕರಾಗಿ ಕೆಲಸ ಮಾಡುತ್ತಿವೆ ಎಂದು ಉಪೇಂದ್ರನ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಜಾಕೀಯ ಪಾಠ ಹೇಳಿದರು. ಇನ್ನು ಆ ಕಾರ್ಯಕ್ರಮದಲ್ಲಿ ಸುರಾನ ಕಾಲೇಜಿನ ವತಿಯಿಂದ ಮೋಟಾರ್ ಸೈಕಲ್ ರೇಸ್ ನಲ್ಲಿ ವರ್ಲ್ಡ್ ಕಪ್ ಗೆದ್ದಿದ್ದ ಮೊದಲ ಮಹಿಳಾ ಐಶ್ವರ್ಯಪಿಸ್ಸೆ ಅವರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಭಾಗವಹಿಸಿದ್ದು ಕಾಲೇಜಿನ ವತಿಯಿಂದ ಐಶ್ವರ್ಯ ಪಿಸ್ಸೆ ಅವರಿಗೆ ಸನ್ಮಾನ ಮಾಡಿದರು.ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಉಪ್ಪಿ ಜೊತೆ ಸೆಲ್ಫಿಗೆ ಮುಗಿಬಿದ್ದರು. ಆಗ ಸ್ವತಃ ಉಪೇಂದ್ರ ಅವರೇ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕಾರಿನಲ್ಲಿ ನಿಂತು ಅವರೇ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು. ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.