ETV Bharat / state

ಮತದಾನ ಮಾಡಿದ್ದನ್ನು ಡಿಕೆಶಿಗೆ ಪ್ರದರ್ಶಿಸಿದ ಎಚ್​.ಡಿ ರೇವಣ್ಣ?; ಬಿಜೆಪಿಯಿಂದ ಭಾರಿ ಆಕ್ಷೇಪ - ಹೆಚ್​ಡಿ ರೇವಣ್ಣ ಮತದಾನ ವಿವಾದ

ರಾಜ್ಯಸಭೆ ಚುನಾವಣೆ ಮತದಾನ ಚುರುಕುಗೊಂಡಿದ್ದು, ಈ ವೇಳೆ ಆರೋಪವೊಂದು ಮುನ್ನೆಲೆಗೆ ಬಂದಿದೆ. ಮತದಾನ ಮಾಡಿದ್ದನ್ನು ಡಿಕೆಶಿಗೆ ಎಚ್​.ಡಿ ರೇವಣ್ಣ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ.

Political leaders reactions, Rajya Sabha election, Rajya Sabha election 2023, Rajya Sabha voting, HD Revanna voting issue, BJP allegation on HD Revanna, ರಾಜಕೀಯ ನಾಯಕರ ಪ್ರತಿಕ್ರಿಯೆಗಳು, ರಾಜ್ಯಸಭಾ ಚುನಾವಣೆ, ರಾಜ್ಯಸಭಾ ಚುನಾವಣೆ 2023, ರಾಜ್ಯಸಭಾ ಮತದಾನ, ಹೆಚ್​ಡಿ ರೇವಣ್ಣ ಮತದಾನ ವಿವಾದ, ಎಚ್​ಡಿ ರೇವಣ್ಣ ಮೇಲೆ ಬಿಜೆಪಿ ಆರೋಪ,
ಮತದಾನ ಮಾಡಿದ್ದನ್ನು ಡಿಕೆಶಿಗೆ ಪ್ರದರ್ಶಿಸಿದ ಎಚ್​.ಡಿ ರೇವಣ್ಣ
author img

By

Published : Jun 10, 2022, 12:07 PM IST

Updated : Jun 10, 2022, 12:17 PM IST

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಎಚ್​.ಡಿ ರೇವಣ್ಣ ತಾವು ಮಾಡಿದ ಮತದಾನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ತೋರಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ರೇವಣ್ಣ ಮತದಾನ ಮಾಡುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಮತ ಪತ್ರವನ್ನು‌ ತೋರಿಸಿದ್ದಕ್ಕೆ ಬಿಜೆಪಿ ಆಕ್ಷೇಪ ತೆಗೆದಿದೆ. ರೇವಣ್ಣ ಮತವನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೂ ದೂರು ನೀಡಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.

ಮತದಾನದ ಸಂದರ್ಭದಲ್ಲಿ ರೇವಣ್ಣ ಮತಪತ್ರವನ್ನು ವ್ಯಂಗ್ಯವಾಗಿ ಡಿಕೆಶಿಗೆ ತೋರಿಸಿದ್ದಾರೆ ಎನ್ನಲಾಗಿದೆ. ಆದರೆ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದೆ ಎಂಬುವುದು ಬಿಜೆಪಿ ಆಕ್ಷೇಪ. ಪ್ರತಿ ಮತವೂ ಮಹತ್ವದ್ದಾಗಿರುವ ಹಿನ್ನೆಲೆ ಈ ಬೆಳವಣಿಗೆ ಕುತೂಹಲ ಮೂಡಿಸಿದೆ.

ಗೆಲ್ಲುವ ವಿಶ್ವಾಸವಿದೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ನಮ್ಮ ಎಲ್ಲ ಶಾಸಕರು ಮತದಾನ ಮಾಡ್ತಿದ್ದೇವೆ. ನಮ್ಮ‌‌ ಮೂರು‌ ಅಭ್ಯರ್ಥಿಗಳಾದ ನಿರ್ಮಲಾ, ಜಗ್ಗೇಶ್, ಲೆಹರ್ ಸಿಂಗ್ ಗೆಲ್ತಾರೆ. ನಮ್ಮಲ್ಲಿ ಕ್ರಾಸ್ ವೋಟಿಂಗ್ ನಡೆಯಲ್ಲ ಎಂದರು. ಸಿದ್ದರಾಮಯ್ಯ ಬಿಜೆಪಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಎಚ್ಡಿಕೆ ಹೇಳಿಕೆಗೆ, ಸೆಕ್ಯೂಲರ್ ಪದದ ಅರ್ಥವೇ ಉಳಿದಿಲ್ಲ. ನಿನ್ನೆಯೆಲ್ಲ ಅವರು ಸೆಕ್ಯೂಲರ್ ಮಾತನಾಡ್ತಿದ್ರು. ಈಗ ಅವರೇ ಹೇಳಬೇಕು ಎಂದರು.

ರಮೇಶ್ ಜಾರಕಿಹೊಳಿ ಆಗಮನ: ರಾಜ್ಯಸಭೆ ಚುನಾವಣೆಗೆ ರಮೇಶ್ ಜಾರಕಿಹೊಳಿ ಆಗಮಿಸಿ ಮತದಾನ ಮಾಡಿದರು. ಸಿಡಿ ವಿವಾದದ ಬಳಿಕ ರಮೇಶ್ ಜಾರಕಿಹೊಳಿ ವಿಧಾನಸೌಧದಕ್ಕೆ ಆಗಮಿಸಿರಲಿಲ್ಲ. ಆದರೆ, ಶುಕ್ರವಾರ ಬಂದು ಮತದಾನ ಮಾಡಿದರು.

ಅಡ್ಡಮತದಾನ ಭೀತಿ ಇಲ್ಲ: ನಮಗೆ ಅಡ್ಡಮತದಾನದ ಭೀತಿ ಇಲ್ಲ. ನಾವು ಯಾರನ್ನು ಪುಸಲಾಯಿಸಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ನಾನು ಚುನಾವಣಾ ಚಾಣಕ್ಯ ಅಲ್ಲ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಕಾಂಗ್ರೆಸ್​ಗೆ ಒಬ್ಬ ಅಭ್ಯರ್ಥಿ ಗೆಲ್ಲಿಸುವ ಶಕ್ತಿ ಇದೆ‌ ಅಷ್ಟೇ. ಎರಡನೇ ಅಭ್ಯರ್ಥಿ ಗೆಲ್ಲಿಸಲು ಸಾಧ್ಯವಿಲ್ಲ. ನಮಗೂ 32 ಮತಗಳು ಇವೆ. ಎರಡನೇ ಪ್ರಾಶಸ್ತ್ಯದ 90 ಮತಗಳು ಇವೆ. ಗೆಲುವು ನಮ್ಮದೇ. ಇಬ್ಬರಿಗೂ ಆತ್ಮನೂ‌ ಇಲ್ಲ ಸಾಕ್ಷಿನೂ ಇಲ್ಲ. ನಮ್ಮ ಮೂರನೇ ಅಭ್ಯರ್ಥಿ ಗೆಲ್ಲುತ್ತಾರೆ. ಅದಕ್ಕೆ ಬೇಕಾದ ತಂತ್ರ ಮಾಡಿದ್ದೇವೆ. ನಾವು ಹೇಳುವುದು ರಿಯಲ್​ ಎಂದು ಹೇಳಿದರು.

ಓದಿ: 4ನೇ ಅಭ್ಯರ್ಥಿ ಗೆಲುವಿಗೆ ಮೂರೂ ಪಕ್ಷಗಳಲ್ಲಿಯೂ ಸಿದ್ಧವಾಗಿದೆ ಕಾರ್ಯತಂತ್ರ: ಗರಿಗೆದರಿದ ಕುತೂಹಲ

ಆತ್ಮ ಹಾಗೂ ಸಾಕ್ಷಿ ಡಿವೈಡ್ ಆಗಿವೆ. ನಮಗೆ ಮತ ಹಾಕುವಂತೆ ನಾವು ಯಾರನ್ನು ಪುಸಲಾಯಿಸಲ್ಲ. ಅವರಾಗಿ ಮತಗಳನ್ನು ಹಾಕಿದರೆ ಬೇಡ ಅನ್ನಲ್ಲ. ಈಗಾಗಲೇ ನಿರ್ಮಲಾ ಸೀತಾರಾಮನ್​ಗೆ 46 ಮತಗಳು ಚಲಾವಣೆ ಆಗಿದೆ. ಜಗ್ಗೇಶ್​ಗೆ ಮತದಾನ ಆಗುತ್ತಿದೆ. ನಮಗೆ ಅಡ್ಡ ಮತದಾನದ ಭೀತಿ ಇಲ್ಲ. ನಮ್ಮ ಹೈಕಮಾಂಡ್ ಗಟ್ಟಿ ಇದೆ. ನಮ್ಮಲ್ಲಿ ಅಲ್ಲಾಡಲ್ಲ. ನಮ್ಮದು ಆಲದ ಮರ. ನಮಗೆ ಅಡ್ಡ ಮತದಾನದ ಭೀತಿ ಇಲ್ಲ ಎಂದು ಅಶೋಕ್​ ಹೇಳಿದರು.

ಸಚಿವ ಅಶ್ವತ್ಥ ನಾರಾಯಣ್ ಮಾತನಾಡಿ, ರಾಜ್ಯಸಭೆ ಚುನಾವಣೆ ನಡೆಯುತ್ತಿದೆ. ನಾಲ್ವರು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ. ನಮ್ಮ‌ ಮೂವರು ಅಭ್ಯರ್ಥಿಗಳು ಗೆಲ್ತಾರೆ. ನಮ್ಮ ಎಲ್ಲ ಶಾಸಕರು ಮತ ಹಾಕ್ತಿದ್ದಾರೆ. ಆತ್ಮಸಾಕ್ಷಿ ಇದ್ದರೆ ಸಿದ್ದರಾಮಯ್ಯ ಸ್ಪಷ್ಟವಾಗಿರಲಿ. ಕುಟುಂಬ ಆಧಾರಿತ ಪಕ್ಷದಲ್ಲಿರಲು ಸಾಧ್ಯವಿಲ್ಲ. ಅಧಿಕಾರದ ಆಸೆಯಿಂದ ಮೌಲ್ಯ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಆ ಪದ ಬಳಕೆ ಮಾಡಬಾರದು. ಅವರಿಗೆ ಯಾವ ಆತ್ನಸಾಕ್ಷಿಯೂ ಇಲ್ಲ. ನಿರಾಧಾರ ಕೊಡೋಕಷ್ಟೇ ಅವರು ಹೆಸರು ವಾಸಿ. ಸಿದ್ದರಾಮಯ್ಯ ಇಂತ ಹೇಳಿಕೆ ಕೊಡಬಾರದು ಎಂದರು.

ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಪರಮೇಶ್ವರ: ಮಾಜಿ ಡಿಸಿಎಂ ಡಾ‌ ಜಿ ಪರಮೇಶ್ವರ್ ಮಾತನಾಡಿ, ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ. ಆತ್ಮಸಾಕ್ಷಿ ಮತಗಳು ಹಾಕಿ ಎಂದು ನಮ್ಮ ನಾಯಕರು ಮನವಿ ಮಾಡಿದ್ದಾರೆ. ಹಾಗಾಗಿ ನಂಬಿಕೆ ಇದೆ. ಜೆಡಿಎಸ್ ನಾಯಕರಿಗೆ ಆತ್ನಸಾಕ್ಷಿ ಮತಗಳನ್ನ ನೀಡಿ ಎಂದು ಮನವಿ ಮಾಡಿದ್ದಾರೆ. ಖಂಡಿತವಾಗಿ ಅವರು ನಮಗೆ ಹಾಕ್ತಾರೆ ಅನೋ ವಿಶ್ವಾಸ ಇದೆ. ಇನ್ನೂ ಬೇಕಾದಷ್ಟು ಸಮಯವಿದೆ. ಮತ ಹಾಕಲು ಬರ್ತಾರೆ ಎಂದರು.

ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ಈಗ ನಾನು ಜೆಡಿಎಸ್​ಗೆ ಮತಹಾಕ್ತೇನೆ. ಮುಂದಿನದನ್ನ ನಮ್ಮ‌ಜನರು ನಿರ್ಧರಿಸ್ತಾರೆ. ನನ್ನನ್ನ ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಜನ ಏನು ಹೇಳಿದ್ದಾರೆ ಅದನ್ನ ಮುಂದೆ ಮಾಡ್ತೇನೆ. ಈಗ ಜೆಡಿಎಸ್​ಗೆ ಹಾಕಿ ಅಂದಿದ್ದಾರೆ. ಅರಸೀಕೆರೆ ಮತದಾರರು ಮುಂದಿನದನ್ನ ನಿರ್ಣಯ ಮಾಡ್ತಾರೆ. ನಮ್ಮ ನಾಯಕರು ಮಾತನಾಡಿದ್ದಾರೆ ಎಂದರು.

Last Updated : Jun 10, 2022, 12:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.