ಬೆಂಗಳೂರು : ನೂತನ ಕಮೀಷನರ್ ಅಲೋಕ್ ಕುಮಾರ್ ಸಿಲಿಕಾನ್ ಸಿಟಿಯಲ್ಲಿ ರೌಡಿಗಳನ್ನ ಮಟ್ಟ ಹಾಕಲು ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜತೆಗೆ ಠಾಣೆಗೆ ದಿಢೀರ್ ಭೇಟಿ ನೀಡಿ ಪೊಲೀಸರಿಗೆ ಸರಿಯಾಗಿ ಕ್ರೈಂ ಕಂಟ್ರೋಲ್ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಪೊಲೀಸ್ ಅಧಿಕಾರಿಗಳು ಸಹ ಫುಲ್ ಅಲರ್ಟ್ ಆಗಿ ಸಿಲಿಕಾನ್ ಸಿಟಿಯಲ್ಲಿ ಕ್ರೈಂರೇಟ್ಗೆ ಕಡಿವಾಣ ಹಾಕೋಕೆ ನೈಟ್ ಅಂಡ್ ಡೇ ಫುಲ್ ರೌಡಿಗಳಿಗೆ ವರ್ಕೌಟ್ ಮಾಡೋಕೆ ಶುರು ಮಾಡಿದ್ದಾರೆ. ಈ ನಡುವೆ ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ವೇಳೆ ಎಲ್ಲೆಂದರಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ತಡರಾತ್ರಿ ಪೂರ್ವ ವಲಯದ ಹಲಸೂರು, ಶಿವಾಜಿನಗರ, ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಸುತ್ತಮುತ್ತ ರಸ್ತೆಗಳಲ್ಲಿ ಅನುಚಿತ ವರ್ತನೆ ತೋರುವ ಯುವಕರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಲ್ಲದೆ ಪ್ರಮುಖ ರಸ್ತೆ ಬದಿಯಲ್ಲಿ ಪುಂಡಾಟಿಕೆ ಮಾಡುವ, ಮಾದಕ ವ್ಯಸನಿಗಳು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಯುವಕರನ್ನ ಠಾಣೆಗೆ ಕರೆದೊಯ್ದು ಸಹಿ ಹಾಕಿಸಿಕೊಂಡು ಪುನಾರಾವರ್ತನೆ ಆಗದಂತೆ ಎಚ್ಚರಿಕೆ ನೀಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಪದೇಪದೆ ಭಾಗಿಯಾಗ್ತಿರೋ ರೌಡಿಶೀಟರ್‌ಗಳನ್ನು ಕೂಡ ಕರೆಯಿಸಿ ವಾರ್ನಿಂಗ್ ಮಾಡಲಾಗಿದೆ. ಈ ಹಿಂದೆ ಉತ್ತರ ವಿಭಾಗದಲ್ಲಿ ಇದೇ ರೀತಿ ಸ್ಪೆಷಲ್ ಡ್ರೈವ್ ಮಾಡಿದ್ದು, ಈಗ ಪೂರ್ವ ವಲಯದಲ್ಲಿ ಡಿಸಿಪಿ ರಾಹುಲ್ ನೇತೃತ್ವದಲ್ಲಿ ರೌಡಿಗಳಿಗೆ ಕ್ಲಾಸ್ ನಡೆಸಲಾಗ್ತಿದೆ.