ಬೆಂಗಳೂರು: ನಗರದಲ್ಲಿ ಪೊಲೀಸ್ ವಾಹನದ ವ್ಹೀಲ್ ಆಕ್ಸೆಲ್ ಕಟ್ ಆದ ಕಾರಣ ನಿಯಂತ್ರಣ ತಪ್ಪಿ ಪೊಲೀಸರ ಬೊಲೆರೋ ವಾಹನವೊಂದು ಲಾರಿಗೆ ಡಿಕ್ಕಿಯಾಗಿರುವ ಘಟನೆ ಮಾನ್ಯತಾ ಟೆಕ್ ಪಾರ್ಕ್ ಬಳಿ ನಡೆದಿದೆ.
ಹೊಸಕೋಟೆ ಸಬ್ ಇನ್ಸ್ಪೆಕ್ಟರ್ ಬೊಲೆರೋ ವಾಹನದಲ್ಲಿದ್ದು, ಕೇಸ್ ನಿಮಿತ್ತ ಚಿಕ್ಕಜಾಲ ಕಡೆ ತೆರಳಿದ್ರು. ಈ ವೇಳೆ ಈ ಅವಘಡ ಸಂಭವಿಸಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಚಿಕ್ಕಜಾಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಘಟನೆಯಲ್ಲಿ ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.