ಬೆಂಗಳೂರು: ಸಂಕಷ್ಟದ ನಡುವೆಯೂ ಕೆಲಸ ನಿರ್ವಹಿಸುತ್ತಿರುವ ಪೊಲೀಸರಲ್ಲಿ ಸಹ ಮಹಾಮಾರಿ ಕೊರೊನಾ ಸೋಂಕು ಕಂಡುಬಂದಿದ್ದು, ಇದೀಗ ಚಿಕಿತ್ಸೆ ಪಡೆದು ಗುಣಮುಖರಾದ ಬಹುತೇಕ ಪೊಲೀಸರು ಪ್ಲಾಸ್ಮಾ ದಾನ ಮಾಡಿ ಬೇರೆಯವರ ಜೀವ ಉಳಿಸುವುದರಲ್ಲಿ ಸಹಕಾರಿಯಾಗಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಈ ಕುರಿತು ಟ್ವೀಟ್ ಮಾಡಿ, ಕೊರೊನಾ ಸೋಂಕಿಗೆ ತುತ್ತಾದ ಪೊಲೀಸರು ಕೊರೊನಾದಿಂದ ಗುಣಮುಖರಾಗಿ ಅವರ ಪ್ಲಾಸ್ಮಾವನ್ನು ಬೇರೆಯವರಿಗೆ ಕೊಡಲು ಮುಂದಾಗಿದ್ದಾರೆ. ಇದು ಸಮಾಜಕ್ಕೆ ಒಂದು ಉತ್ತಮ ಮಾದರಿ ಎಂದು ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ಸದ್ಯದ ಮಟ್ಟಿಗೆ ಪ್ಲಾಸ್ಮಾ ಥೆರಪಿ ವರದಾನವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಈ ಚಿಕಿತ್ಸೆ ನೀಡಲಾಗುತ್ತಿದೆ.