ಬೆಂಗಳೂರು : ಕೊರೊನಾ ಸೋಂಕು ನಾಲ್ವರಿಗೆ ತಗುಲಿದ ಕಾರಣ ಶಿವಾಜಿನಗರದ ಚಾಂದಿನಿಚೌಕ್ ರಸ್ತೆ ಬಳಿ ಸದ್ಯ ಪೊಲೀಸರು ಕಣ್ಗಾವಲಿರಿಸಿದ್ದಾರೆ.
ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಓರ್ವ ಎಸಿಪಿ, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್,ಹೊಯ್ಸಳ ಹಾಗೂ ಸಿಸಿಟಿವಿ ಕಣ್ಗಾವಲು ಇಟ್ಟಿದ್ದು ಚಾಂದಿನಿ ಚೌಕ್‌ನಲ್ಲಿ ಜನರು ಹೊರಬಾರದಂತೆ ಪೊಲೀಸರು ಜಾಗೃತಿ ಮೂಡಿಸ್ತಿದ್ದಾರೆ. ಚಾಂದಿನಿ ಚೌಕ್ ರಸ್ತೆಯ ಬಳಿ ವ್ಯಾಪಾರ, ವಹಿವಾಟು ಬಂದ್ ಮಾಡಿಸಿ, ಜನ ಹೊರಬಾರದ ರೀತಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಈಗಾಗಲೇ ರಿಜೆಂಟ್ ಪ್ಲೇಸ್ ಹೋಟೆಲ್ನ 34 ವರ್ಷದ ಹೌಸ್ ಕೀಪಿಂಗ್ ವ್ಯಕ್ತಿಯಿಂದ ಇತರರಿಗೆ ಸೋಂಕು ಹರಡಿರುವುದು ಪತ್ತೆಯಾದ ಕಾರಣ ಇವರ ಜೊತೆ ಸಂಪರ್ಕ ಹೊಂದಿದವರನ್ನ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ಸ್ಥಳದಲ್ಲಿ ಕೂಡ ಭದ್ರತೆ ನೀಡಲಾಗಿದೆ.
ಮತ್ತೊಂದೆಡೆ ಭದ್ರತೆಯಲ್ಲಿರುವ ಪೊಲೀಸ್ ಸಿಬ್ಬಂದಿ ಕೂಡ ಆರೋಗ್ಯದ ಬಗ್ಗೆ , ಸ್ವಚ್ಛತೆ ಬಗ್ಗೆ ಗಮನ ಹರಿಸಿ. ಮುನ್ನೆಚ್ಚರಿಕಾ ಕ್ರಮ ಪಾಲಿಸಿ, ಭದ್ರತೆ ದೃಷ್ಟಿಯಿಂದ ಕೊರೊನಾ ಸೋಂಕಿಗೆ ತುತ್ತಾಗಬೇಡಿ ಎಂದು ಡಿಸಿಪಿ ಸೂಚನೆ ನೀಡಿದ್ದಾರೆ.